ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದತ್ತ ಹಾರಿದ ತೈವಾನ್‌ ಕ್ಷಿಪಣಿ: ಒಂದು ಸಾವು

Last Updated 1 ಜುಲೈ 2016, 11:23 IST
ಅಕ್ಷರ ಗಾತ್ರ

ಬೀಜಿಂಗ್‌(ಪಿಟಿಐ): ತೈವಾನ್‌ನ ಯುದ್ಧ ನೌಕೆಯಿಂದ ಚೀನಾದತ್ತ ಆಕಸ್ಮಿಕವಾಗಿ ಸೂಪರ್‌ ಸಾನಿಕ್‌ ಕ್ಷಿಪಣಿ ಹಾರಿದ್ದು, ಮೀನುಗಾರಿಕೆ ದೋಣಿ ಮೇಲೆ ಬಿದ್ದ ಪರಿಣಾಮ ಒಬ್ಬ ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ. ಇದು ಎರಡೂ ದೇಶಗಳ ಸೇನಾ ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.

ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ 95ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಚೀನಾದಲ್ಲಿ ಈ ಘಟನೆ ಚರ್ಚೆಗೆ ಗ್ರಾಸವಾಗಿದೆ.

ಕ್ಷಿಪಣಿ ತೈವಾನ್‌ನ ಮೀನುಗಾರಿಕೆ ದೋಣಿಗೆ ಹೊಡೆದಿದ್ದು, ಒಬ್ಬರು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ ಎಂದು ತೈವಾನ್‌ನ ರಕ್ಷಣಾ ಸಚಿವಾಲಯ ಹೇಳಿದೆ.

ಕ್ಷಿಪಣಿ 300 ಕಿ.ಮೀ. ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದೆ. ಆಕಸ್ಮಿಕವಾಗಿ ಹಾರಿದ ಕ್ಷಿಪಣಿ ಚೀನಾದತ್ತ ಹೋಗುತ್ತಿರುವುದು ಗೊತ್ತಾದ ತಕ್ಷಣ ಅದನ್ನು 75 ಕಿ.ಮೀ. ದೂರ ಕ್ರಮಿಸುವಷ್ಟರಲ್ಲೇ ಸಮುದ್ರದಲ್ಲಿ ಪತನ ಮಾಡಲಾಯಿತು ಎಂದು ತೈವಾನ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT