ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೂಸಿ ರಾಧಿಕಾ

ಪಂಚರಂಗಿ
Last Updated 4 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ‘ಬದಲಾಪುರ್‌’ ಚಿತ್ರದ ನಟಿ ರಾಧಿಕಾ ಆಪ್ಟೆ ಇನ್ನು ಮುಂದೆ ಯೋಚಿಸಿ ಉತ್ತಮ ಅವಕಾಶ ಸಿಕ್ಕರೆ ಮಾತ್ರ ಚಿತ್ರಗಳಿಗೆ ಸಹಿ ಹಾಕುತ್ತೇನೆ ಎಂದಿದ್ದಾರೆ.

ಒಂದೇ ರೀತಿಯ ಪಾತ್ರಗಳನ್ನು ಮಾಡದಂತೆ ಎಚ್ಚರ ವಹಿಸುತ್ತೇನೆ. ಒಂದೇ ರೀತಿಯ ಪಾತ್ರಗಳನ್ನು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಉತ್ತಮ ಅವಕಾಶ ಹಾಗೂ ವಿಭಿನ್ನ ಪಾತ್ರಗಳಿಗಾಗಿ ಕಾಯಲು ಸಿದ್ಧ. ಅದಕ್ಕಾಗಿ ನನ್ನ ಬಳಿ ಬರುವ ಅವಕಾಶಗಳನ್ನು ಯೋಚಿಸಿ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ ರಾಧಿಕಾ.

‘‘ಹಂಟರ್‌’ ವಯಸ್ಕರ ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇದರಲ್ಲಿ ಪಕ್ಕದ ಮನೆ ಹುಡುಗಿ ಎನ್ನುವಷ್ಟು ಸಹಜವಾದ ಪಾತ್ರದಲ್ಲಿ ಅಭಿನಯಿಸಲಿದ್ದೇನೆ. ಇದು ಬದಲಾಪುರ್‌ ಚಿತ್ರದಲ್ಲಿ ಅಭಿನಯಿಸಿದ ಪಾತ್ರಕ್ಕೆ ವಿರುದ್ಧವಾಗಿದೆ. ‘ಹಂಟರ್’ ಚಿತ್ರದ ಕಥೆ ಅಸಹಜ ಹಾಗೂ ತಮಾಷೆಯಿಂದ ಕೂಡಿದ ಸಾಮಾನ್ಯ ಮನುಷ್ಯನ ಕತೆ. ಇದರಲ್ಲಿ ನಾನು ‘ತೃಪ್ತಿ’ ಎಂಬ ಹುಡುಗಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ’’ ಎಂದು ವಿವರಿಸಿದ್ದಾರೆ 29 ವರ್ಷದ ನಟಿ.  
 
‘ಬದಲಾಪುರ್‌ ಚಿತ್ರದಲ್ಲಿ ಅಭಿನಯಿಸಿರುವ ಪಾತ್ರದಿಂದ ನನಗೆ ವಿಶೇಷ ಗುರುತು ಸಿಕ್ಕಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಾನು ನಿಜವಾಗಿಯೂ ಅದೃಷ್ಟವಂತೆ ಬದಲಾಪುರ್‌ ಚಿತ್ರದಲ್ಲಿ ಜನ ನನ್ನನ್ನು ಗುರುತಿಸುತ್ತಿದ್ದಾರೆ. ಬಹು ತಾರಾಗಣದ ಚಿತ್ರವಾದರೂ ನನ್ನ ಪಾತ್ರಕ್ಕೆ ಮನ್ನಣೆ ಸಿಕ್ಕಿರುವುದು ನಿಜಕ್ಕೂ ಸಂತಸ ತಂದಿದೆ’ ಎಂದಿದ್ದಾರೆ ಅವರು.

ರಾಮ್‌ಗೋಪಾಲ್‌ ವರ್ಮ ನಿರ್ದೇಶನದ ‘ರಕ್ತ ಚರಿತ್ರ ’ಚಿತ್ರದ ಮೂಲಕ ಬಿ–ಟೌನ್‌ಗೆ ಪ್ರವೇಶ ಪಡೆದ ರಾಧಿಕಾ ಬಂಗಾಳಿ, ಮರಾಠಿ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮುಂದೆ ‘ಮೌಂಟೇನ್‌ ಮ್ಯಾನ್‌’ ಹಾಗೂ ‘ಕೌನ್‌ ಕಿತ್‌ನೆ ಪಾನಿ ಮೆ’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT