ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಕಟ್ಟು ಮೀರಿದ ಕಾದಂಬರಿ ಪ್ರಕಾರ

ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಭಿಮತ
Last Updated 23 ಫೆಬ್ರುವರಿ 2014, 19:47 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾದಂಬರಿ ಪ್ರಕಾರವು ಇಂದು ತನ್ನ ಚೌಕಟ್ಟಿನಲ್ಲಿ ಉಳಿದಿಲ್ಲ. ಕಾದಂಬರಿ ರಚನೆಯು ವಿಸ್ತಾರತೆ ಪಡೆದು­ಕೊಂಡಿದೆ’ ಎಂದು ಕವಿ ಪ್ರೊ.­ಎಸ್.­ಜಿ.­ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ಪಾಂಚಜನ್ಯ ಪಬ್ಲಿಕೇಷನ್ಸ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ಯ ಹಿರಿಯ ಉಪ ಸಂಪಾದಕ ಜಕ್ಕಣಿಕ್ಕಿ ಎಂ.­ದಯಾನಂದ ಅವರ ‘ನರಸಾಪುರ’ ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ನರಸಾಪುರ ಕಾದಂಬರಿ ವಿಶೇಷ ಬರವಣಿಗೆಯಿಂದ ಕೂಡಿದೆ. ಕಾದಂ­ಬರಿ­ಯಲ್ಲಿ ಗ್ರಾಮ ಬದುಕಿನ ಕಥನ­ವಿದೆ. ಕೃತಿಯಲ್ಲಿ ಹಳ್ಳಿಯ ಬದುಕು ಮಾತ­ನಾಡುತ್ತದೆ. ಗ್ರಾಮೀಣ ಬದು­ಕಿನ ನಂಬಿಕೆ, ನಡವಳಿಕೆ ಹಾಗೂ ಆಗು­ಹೋಗುಗಳ ಕುರಿತ ಕಥನ ಇಲ್ಲಿದೆ’ ಎಂದು ಹೇಳಿದರು.

ಸಾಹಿತಿ ಬಂಜಗೆರೆ ಜಯಪ್ರಕಾಶ್, ‘ಕುವೆಂಪು ಅವರ ಕೃತಿಗಳಲ್ಲಿ ಮದು­ಮಗಳಾಗಿದ್ದ ಮಲೆನಾಡು, ತೇಜಸ್ವಿ ಅವರ ಕಾಲಕ್ಕೆ ಬೆಲೆವೆಣ್ಣಾಗಿ ರೂಪ ಪಡೆಯುತ್ತದೆ. ಜಕ್ಕಣಿಕ್ಕಿ ಅವರ ಕಾಲಕ್ಕೆ ಮಲೆನಾಡು ಮುದುಕಿಯ ರೂಪ ಪಡೆದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT