ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಚೇತನ ಪಕ್ಷದ ಸ್ಥಾಪಕ ₨140 ಕೋಟಿ ಒಡೆಯ...

Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಚಂಡೀಗಡ (ಪಿಟಿಐ): ಹರಿಯಾಣದ ಅಂಬಾಲಾ ವಿಧಾನಸಭಾ ಕ್ಷೇತ್ರದಿಂದ  ಸ್ಪರ್ಧಿಸುತ್ತಿರುವ ಪ್ರಾದೇಶಿಕ ಪಕ್ಷದ ಸಂಸ್ಥಾಪಕ ಅಭ್ಯರ್ಥಿಯೊಬ್ಬರು 140 ಕೋಟಿ ರೂಪಾಯಿಗಳ ಆಸ್ತಿಯ ಒಡೆ­ಯ­ರಾಗಿದ್ದಾರೆ. ಇಷ್ಟೆಲ್ಲಾ ಆಸ್ತಿಯ ಒಡೆಯನಾದರೂ ಅವರ ಹೆಸರಿನಲ್ಲಿ ಒಂದೇ ಒಂದೂ  ವಾಹನವೂ ಇಲ್ಲ.

ಜೂನ್‌ನಲ್ಲಿ ತಾವೇ ಹುಟ್ಟು ಹಾಕಿ­ರುವ ಹರಿಯಾಣ ಜನಚೇತನ ಪಕ್ಷದಿಂದ ಸ್ಪರ್ಧಿಸಿರುವ ವಿನೋದ್‌ ಶರ್ಮ ಚುನಾ­ವ­ಣಾ­ಧಿಕಾರಿಗೆ ಸಲ್ಲಿಸಿರುವ  ಪ್ರಮಾಣ­ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ.

ಕಲ್ಕಾ ವಿಧಾನಸಭಾ ಕ್ಷೇತ್ರದಿಂದ ಇದೇ ಪಕ್ಷದಿಂದ ಸ್ಪರ್ಧಿಸುತ್ತಿರುವ ಶರ್ಮ ಅವರ ಪತ್ನಿ ಶಕ್ತಿ ರಾಣಿ 15 ಕೋಟಿ ರೂಪಾಯಿಗಳ ಆಸ್ತಿಯ ಒಡತಿ.
ಶರ್ಮ ಮೂಲತಃ ಕಾಂಗ್ರೆಸ್ಸಿಗರು. 40 ವರ್ಷಗಳಿಂದ ಆ ಪಕ್ಷದಲ್ಲಿದ್ದ ಅವರು ಎರಡು ಬಾರಿ ರಾಜ್ಯಸಭೆಯ ಸದಸ್ಯ­ರಾಗಿದ್ದರು. 

ಕಳೆದ ಚುನಾವಣೆ­ಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋ­ಪದ ಮೇಲೆ ಶರ್ಮ ಕಾಂಗ್ರೆಸ್‌­ನಿಂದ ಉಚ್ಛಾ­ಟ­ನೆ­ಗೊಂಡಿದ್ದರು. ಆನಂತರ ಅವರು ಸ್ವಂತ ಪಕ್ಷ ಸ್ಥಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT