ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತೆಯಲ್ಲಿ ಕಾತರ, ಆತಂಕ...

Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಎಐಎಡಿಎಂಕೆ ಮುಖ್ಯಸ್ಥೆ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ 18 ವರ್ಷಗಳ ಹಿಂದಿನ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತೀರ್ಪು ಶನಿವಾರ ಬೆಂಗಳೂರಿನ ವಿಶೇಷ ನ್ಯಾಯಾ­ಲಯದಲ್ಲಿ ಪ್ರಕಟವಾಗಲಿರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಭಾರಿ ಕುತೂಹಲವನ್ನು ಉಂಟು ಮಾಡಿದೆ.

ರಾಜಕೀಯ ಪಕ್ಷಗಳ ಮುಖಂಡರಲ್ಲಿ ಅದರಲ್ಲೂ ಎಐಎಡಿಎಂಕೆ ಮುಖಂಡರು ಮತ್ತು ಕಾರ್ಯಕರ್ತರು ತೀವ್ರ ಆತಂಕಕ್ಕೆ ಒಳಗಾಗಿದ್ದು, ‘ ಅಮ್ಮಾ’ ಮತ್ತೊಮ್ಮೆ ರಾಜಕೀಯ ಬಿರುಗಾಳಿಯಿಂದ ಪಾರಾಗಲಿರುವರೆ ಎಂಬುದನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.

‘ರಾಜಕೀಯ ದ್ವೇಷಕ್ಕಾಗಿ 1996ರಲ್ಲಿ ಡಿಎಂಕೆ ಸರ್ಕಾರ ಸುಳ್ಳು ಪ್ರಕರಣವನ್ನು ದಾಖಲಿಸಿದ್ದು, ಇತರ ಪ್ರಕರಣಗಳಲ್ಲಿ ನಿರ್ದೋಷಿ ಎಂದು ರ್ಮಾನವಾದಂತೆ ಈ ಪ್ರಕರಣದಲ್ಲೂ  ಅವರು ಕಳಂಕರಹಿತರಾಗಲಿದ್ದಾರೆ’ ಎಂಬುದು ಎಐಎಡಿಎಂಕೆ ಕಾರ್ಯಕರ್ತರ ಹಾರೈಕೆಯಾಗಿದೆ.

2011ರ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ನೆಲಕಚ್ಚಿರುವ ಡಿಎಂಕೆ ಪಕ್ಷದ ಮುಖಂಡರು ನ್ಯಾಯಾಲಯದ ತೀರ್ಪು ಜಯಲಲಿತಾ ವಿರುದ್ಧ ಬಂದರೆ ಆಗುವ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಇದ್ದಾರೆ.

ತೀರ್ಪು ಜಯಲಲಿತಾ ವಿರುದ್ಧವಾದರೆ ತಮಿಳುನಾಡು ರಾಜ­ಕೀಯ­ದಲ್ಲಿ ಭಾರಿ ಸಂಚಲನ ಮೂಡಲಿರುವುದರಿಂದ ಇತರ ರಾಜಕೀಯ ಪಕ್ಷಗಳೂ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.

18 ವರ್ಷಗಳಷ್ಟು ಸುದೀರ್ಘ ಕಾನೂನು ಹೋರಾಟದಲ್ಲಿ ಜಯಲಲಿತಾ ಅವರ ಭವಿಷ್ಯ ಏನಾಗಬಹುದು ಎಂಬ ಆತಂಕ­ದಲ್ಲಿ ರಾಜ್ಯದ ಜನತೆ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT