ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ಅಕ್ರಮ ಹಂಚಿಕೆ: ಕ್ರಮಕ್ಕೆ ಸೂಚನೆ

Last Updated 26 ಮೇ 2015, 7:07 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಬೊಮ್ಮನಕಟ್ಟೆ ಗ್ರಾಮದಲ್ಲಿ ಬಡವರ ಜಮೀನನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಭೂ ದಾಖಲೆಗಳ ಸಹಾಯಕ ನಿರ್ದೇಶಕರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿಗೆ ಮನವಿ ಸಲ್ಲಿಸಲಾಯಿತು.

ಸರ್ವೆ ನಂ. 24/1ಎ1ರಲ್ಲಿ ಒಟ್ಟು 4ಎಕರೆ 25 ಗುಂಟೆಯ ಜಮೀನು ಜಮೀನು ಮಂಜುಳಾ ಕೋಂ ಶ್ರೀರಾಮುಲು, ನೀಲಮ್ಮ ಕೋಂ ಮುನಿರತ್ನ, ಷಡಾಕ್ಷರಯ್ಯ, ಮಲ್ಲಿಕಾರ್ಜುನಯ್ಯ, ನಾಗಲಿಂಗಯ್ಯರಿಗೆ ಜಂಟಿ ಖಾತೆಯಾಗಿದೆ. ವಿಜಯಮ್ಮ ಕೋಂ ರುದ್ರಯ್ಯ ಇವರು 16 ಗುಂಟೆ ಜಮೀನಿನ ಖಾತೆ ಮತ್ತು ಪಹಣಿ ಹೊಂದಿದ್ದಾರೆ. ಸದರಿ ಜಮೀನಿನ ಪೋಡಿ ಮಾಡಿ ಗಡಿ ನಿರ್ಣಯಿಸಿ ಕೊಡಬೇಕು ಎಂದು ಕಳೆದ 3 ವರ್ಷ ಹಿಂದೆಯೇ ಎಡಿಎಲ್ಆರ್ ಕಚೇರಿಗೆ ವಿಜಯಮ್ಮ ಸೇರಿದಂತೆ ಇತರರು ಅರ್ಜಿ ಸಲ್ಲಿಸಿದ್ದರು.

2000–-01ನೇ ಸಾಲಿನಲ್ಲಿ  ಬೊಮ್ಮನಕಟ್ಟೆ ವಾರ್ಡ್‌ ಸದಸ್ಯರಾಗಿದ್ದ  ವಿಶ್ವನಾಥ್ ನಗರಸಭೆಯಿಂದ ಬೊಮ್ಮನಕಟ್ಟೆ ಗ್ರಾಮಕ್ಕೆ ಹೋಗುವ 40 ಅಡಿ ಅಳತೆಯ ಟಾರ್ ರಸ್ತೆಯನ್ನು ಅನಧಿಕೃತವಾಗಿ ನಿರ್ಮಾಣ ಮಾಡಿದ್ದು ಇದು ಸದರಿ ಜಮೀನಿನಲ್ಲಿ ಹಾದು ಹೋಗಿದೆ.

ಈ ಮಧ್ಯೆ ಆರ್.ಕೆ ಡೆವಲಪರ್‍್ಸ್ ಸಂಸ್ಥೆ ಅಧಿಕಾರಿಗಳಿಗೆ ಲಂಚ ನೀಡಿ ಈ ರಸ್ತೆಗೆ ಹೋಗುವ ಒಟ್ಟು 1.17 ಗುಂಟೆ ಜಮೀನನ್ನು ಕಬಳಿಸಿದ್ದಾರೆ. ಈ ಬಗ್ಗೆ ದ.ಸಂಸ ಗಮನ ಸೆಳೆದಿತ್ತು. ಪ್ರಕರಣದಲ್ಲಿ ಹಲವು ಗೊಂದಲ ಇರುವುದರಿಂದ ಕೂಡಲೇ ತನಿಖೆ ನಡೆಸಬೇಕು.

ಭೂಗಳ್ಳರ ಜತೆ ಶಾಮೀಲಾಗಿ ಬಡವರಿಗೆ ವಂಚಿಸಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕ ರೂಪ್ ಕುಮಾರ್, ಸರ್ವೆ ಅಧಿಕಾರಿ ವಿದ್ಯಾಧರ್ ಹಾಗೂ ಸರ್ವೆ ಸೂಪರ್ ವೈಸರ್ ತಿಮ್ಮಪ್ಪರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಡಿ.ಎಸ್.ಎಸ್. ರಾಜ್ಯ ಸಂಘಟನಾ ಸಂಚಾಲಕ ಎಂ.ಗುರುಮೂರ್ತಿ, ಟಿ.ಎಚ್. ಹಾಲೇಶಪ್ಪ, ರಮೇಶ್, ಪರಮೇಶ್, ಅಚಿಜನಿ, ಶಿವ ಕಾಮತ್ ಇತರರು ಮನವಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT