ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿರಳೆ ಬೆನ್ನೇರಿದ ಪುಟ್ಟ ಯಂತ್ರ!

Last Updated 31 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಜಿರಳೆ, ಜೊಂಡಿಗ, ಕಾಕ್ರೋಚ್ ಎಂದು ಕರೆಯ ಲಾಗುವ, ಸಾಮಾನ್ಯವಾಗಿ ಎಲ್ಲ ಕಟ್ಟಡಗಳಲ್ಲೂ ಇರುವ ಈ ಕೀಟ ಅಲ್ಲಿ ವಾಸಿಸುವವರಿಗೆಲ್ಲ ಕಿರಿಕಿರಿ ಉಂಟುಮಾಡುತ್ತದೆ.  ಕೆಲವರಂತೂ ಈ ಕೀಟಗಳನ್ನು ಕಂಡರೆ ಹುಲಿ-ಚಿರತೆ ಕಂಡಂತೆ ಭಯಪಟ್ಟು ಚೀರುತ್ತಾರೆ!

ಕೆಲವರಿಗೆ ಜಿರಳೆಗಳೆಂದರೆ ಬಹಳ ಅಸಹ್ಯ. ಜಿರಳೆ ನಾಶಕ್ಕೆ ಕೀಟನಾಶಕಗಳ ಸ್ಪರ್ಧೆಯೇ ಮಾರುಕಟ್ಟೆಯಲ್ಲಿದೆ. ಜಿರಲೆಗಳನ್ನು ಕೊಲ್ಲುವ ಬದಲು ಅವನ್ನು ಹೇಗೆ ಉಪಯುಕ್ತ ಕೀಟಗಳಾಗಿ ಪರಿವರ್ತಿಸಿಕೊ ಳ್ಳಬಹುದು ಎಂದು ಕೆಲವು ತಂತ್ರಜ್ಞರು ಚಿಂತಿಸುತ್ತಿದ್ದಾರೆ. ಅದರ ಪರಿಣಾಮವಾಗಿಯೇ ಈಗ ಒಂದು ಪುಟ್ಟ ಯಂತ್ರ ಜಿರಳೆಯ ಬೆನ್ನೇರಿದೆ!

ಜಿರಳೆ ಬೆನ್ನೇರಿದ ಈ ಪುಟಾಣಿ ಯಂತ್ರದಲ್ಲಿ ಸೂಕ್ಷ್ಮ ಗಾತ್ರದ ಒಂದು ನಿಯಂತ್ರಕ ಹಾಗೂ ಆಗಾಗ ತನ್ನಿಂದ ತಾನೇ ಚಾರ್ಜ್‌ ಆಗಬಲ್ಲಂತಹ ಒಂದು ಪುಟ್ಟ ಲಿಥಿಯಂ ಬ್ಯಾಟರಿ ಇದೆ.  ಎಲ್ಲ ಸೇರಿ ಕೇವಲ 3 ಗ್ರಾಮ್ ತೂಗುವ ಈ ಯಂತ್ರ ವನ್ನು ಜಿರಲೆ ಬೆನ್ನಿಗೆ ಅಂಟಿಸಲಾಗುತ್ತದೆ.  ಆನಂತರ ಜಿರಲೆ ದೇಹದಲ್ಲಿ ಎಲೆಕ್ಟ್ರೋಡ್‌  ಗಳನ್ನು ಸೇರಿಸಲಾಗುತ್ತದೆ.  ಅವು ಜಿರಳೆಯ ನರವ್ಯೂಹವನ್ನು ಪ್ರವೇಶಿಸಿ ಪ್ರಚೋದನೆಗೊಳಿ ಸುತ್ತವೆ.  ಆ ಮೂಲಕ ಜಿರಲೆಯ ಚಲನವಲನ ಗಳನ್ನು ನಿಯಂತ್ರಿಸಬಹುದು.  ಜಿರಳೆಯನ್ನು  ಹಿಂದೆ ಮುಂದೆ ಚಲಿಸುವಂತೆ ಮಾಡಲು, ಓಡಿಸಲು, ಒಂದೆಡೆ ನಿಲ್ಲಿಸಲು ವೈರ್‌ನ ಸಂಪರ್ಕವೇ ಇಲ್ಲದಂತಹ ದೂರನಿಯಂತ್ರಕ ವನ್ನು ಬಳಸಬಹುದು.

ಇಂಥ ಪ್ರಯೋಗಗಳು ನಿರಂತರವಾಗಿ ನಡೆಯುತ್ತಿದ್ದು, ಜಿರಲೆ ಬೆನ್ನೇರುವ ಉಪಕ ರಣಕ್ಕೆ ಕ್ಯಾಮೆರಾ, ಸೆನ್ಸರ್ ಮೊದಲಾದವನ್ನು ಅಳವಡಿಸುವ ಮೂಲಕ, ಜಿರಳೆ ಚಲನೆಯನ್ನು ಇನ್ನಷ್ಟು ನಿಖರವಾಗಿ ಅರಿಯುವ ಪ್ರಯೋಗ ಗಳು ನಡೆದಿವೆ ಎಂದು ಸಂಶೋಧಕ ಹಾಂಗ್‌ ಲಿಯಾಂಗ್‌ ಹೇಳುತ್ತಾರೆ. ಅವರು ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲ ಯದ ವಿಜ್ಞಾನಿಗಳೊಂದಿಗೆ ಇಂಥ ಪ್ರಯೋಗ ಗಳಲ್ಲಿ ನಿರತರಾಗಿದ್ದಾರೆ.  ಅಲ್ಲಿನ ಕೆರೊಲಿನಾ ವಿಶ್ವವಿದ್ಯಾಲಯ ಕೂಡ ಇಂಥವೇ ಪ್ರಯೋಗ ಗಳಲ್ಲಿ ತೊಡಗಿಕೊಂಡಿದೆ.

ಈಗ ಲಭ್ಯವಿರುವ ಪುಟ್ಟ ರೋಬೊಗಳು (ಯಂತ್ರಮಾನವರು) ಮಾಡಲು ಸಾಧ್ಯವಾ ಗದಂತಹ ಹತ್ತಾರು ಕಾರ್ಯಗಳನ್ನು, ಜಿರಲೆಗ ಳಿಂದ ಮಾಡಿಸಲು ಈ ತಂತ್ರ ಜ್ಞಾನದಿಂದ ಸಾಧ್ಯವಾಗುತ್ತಿದೆಯಂತೆ.  ಈ ಜಿರಳೆಗಳು ಗಾತ್ರ ದಲ್ಲಿ ತುಂಬ ಚಿಕ್ಕದಾಗಿರುವುದೇ ವರದಾನ ವಾಗಿದೆ. ತುಂಬ ಇಕ್ಕಾಟ್ಟಾದ, ಕೇವಲ ಕಿಂಡಿ ಮಾತ್ರವೇ ಇರುವಂತಹ ಸ್ಥಳಗಳಿಗೂ ಈ ಜಿರಳೆ ಗಳನ್ನು ಕಳುಹಿಸಿಕೊಡಬಹುದು. ನಂತರ ಜಿರಲೆ ಬೆನ್ನಮೇಲಿನ ಪುಟ್ಟ ಯಂತ್ರ, ಆ ಸ್ಥಳದ ಸ್ಥಿತಿ-ಗತಿ, ಪರಿಸರವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ವರದಿ ಮಾಡತ್ತದೆ.


ಭೂಕಂಪದಿಂದಲೋ ಅಥವಾ ಮತ್ತಾ ವುದೋ ಅನಾಹುತದಿಂದಲೋ ಮನೆ ಯೊಂದು ಕುಸಿದು ಬಿದ್ದಿದೆ ಎಂದಾದರೆ, ಅದ ರೊಳಗೆ ಸಿಕ್ಕಹಾಕಿಕೊಂಡಿರುವವರು ಯಾವ ಸ್ಥಿತಿಯಲ್ಲಿದ್ದಾರೆ? ಎಲ್ಲಿದ್ದಾರೆ? ಅವರು ಆಘಾತ ದಿಂದ ಹೊರಬರಲು ತುರ್ತು ಅಗತ್ಯವಿದೆಯೇ? ಎಂಬ ಅಂಶಗಳನ್ನೆಲ್ಲ ಈ ತಂತ್ರಜ್ಞಾನವನ್ನು ಬೆನ್ನಿಗೇರಿಸಿಕೊಂಡ ಜಿರಲೆ ನಿಖರವಾಗಿ ಪತ್ತೆ ಮಾಡುತ್ತದೆ.  ಇದರ ಬೆನ್ನಮೇಲಿನ ಯಂತ್ರದಲ್ಲಿ ಅಳವಡಿಸಿರುವ ಹೈರೆಸ ಲ್ಯೂಶನ್ ಮೈಕ್ರೋ ಫೋನ್‌ಗಳು ಧ್ವನಿ ಗಾಹಕಗಳು ಅತಿ ಸೂಕ್ಷ್ಮ ಶಬ್ದವನ್ನೂ ಗ್ರಹಿಸುತ್ತವೆ.

ಎಲ್ಲ ಗದ್ದಲ ಗೊಂದಲಗಳ ಮಧ್ಯೆಯೂ ಜೀವಿಗಳ ಉಸಿರಾಟ ಹಾಗೂ ಕಷ್ಟದಲ್ಲಿ ಸಿಕ್ಕಿಕೊಂಡವರ ಕ್ಷೀಣ ನರಳಾಟ ಮುಂತಾದವು ಗಳನ್ನು ಸಮರ್ಥವಾಗಿ ಗುರುತಿಸುತ್ತವೆ.  ಹಾಗೆಯೇ ಆ ವಿಚಾರಗಳನ್ನು ನಿಖರವಾಗಿ ವರದಿ ಮಾಡುತ್ತವೆ.  ಆ ಮೂಲಕ ಜೀವ ರಕ್ಷಣೆಗೆ ಧಾವಿಸುವ ಮನುಷ್ಯನಿಗೆ ಅಗತ್ಯವಾದ ಎಲ್ಲ ಸಹಾಯಗಳನ್ನೂ ನೀಡುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT