ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀಪಿಗೆ ರೈಲು ಡಿಕ್ಕಿ: 13 ಜನರ ಸಾವು

Last Updated 9 ಮೇ 2014, 8:48 IST
ಅಕ್ಷರ ಗಾತ್ರ

ಮಹಾರಾಜಗಂಜ್ (ಉತ್ತರಪ್ರದೇಶ)(ಪಿಟಿಐ): ಇಲ್ಲಿನ ಕೋಥಿಪುರದಲ್ಲಿ  ಕಾವಲು ರಹಿತ ರೈಲ್ವೇ ಕ್ರಾಸಿಂಗ್ ಬಳಿ ಶುಕ್ರವಾರ ರೈಲುಗಾಡಿಯೊಂದು ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 13 ಜನರು ಸ್ಥಳದಲ್ಲೇ ಮೃತರಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಂಜಾವಿನ ಒಂದು ಗಂಟೆಯ ವೇಳೆಯಲ್ಲಿ ಅವಘಡ ಸಂಭವಿಸಿದೆ. ಅಪಘಾತಕ್ಕೆ ಒಳಗಾದ ಜೀಪ್ ನಲ್ಲಿ 16 ಜನರಿದ್ದರು. ಅವರು ಮದುವೆಯ ಸಮಾರಂಭವನ್ನು ಮುಗಿಸಿಕೊಂಡು ಹಿಂತಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

13 ಜನರು ಸ್ಥಳದಲ್ಲೇ ಮೃತರಾಗಿದ್ದು, ಗಂಭೀರವಾಗಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT