ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಇಟಿ: ನಿರಂತರ ಅಧ್ಯಯನ ಅಗತ್ಯ

Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಮೊದಲನೇ ಹಂತವಾಗಿರುವ ಟಿಇಟಿ ಪರೀಕ್ಷೆಯ ಇತ್ತೀಚಿನ ಫಲಿತಾಂಶದ ಸುತ್ತ ಚರ್ಚೆಗಳು ನಡೆ­ಯು­ತ್ತಿವೆ. ನಿಗದಿತ ಅಂಕ ಪಡೆದು ಮುಂದಿನ ಹಂತಕ್ಕೆ ಅರ್ಹತೆ ಪಡೆದಿರುವವರ ಸಂಖ್ಯೆ, ಪರೀಕ್ಷೆ ಬರೆದ ಒಟ್ಟು ಅಭ್ಯರ್ಥಿಗಳ ಸಂಖ್ಯೆಗೆ ಹೋಲಿ­ಸಿ­ದರೆ ತೀರಾ ಕಡಿಮೆ ಎಂಬುದು ನಿಜ. ಹಾಗೆಂದು ಟಿಇಟಿ ಪರೀಕ್ಷೆಯ ಔಚಿತ್ಯವನ್ನೇ ಪ್ರಶ್ನಿಸುವುದು ಸರಿಯಲ್ಲ.

ಯಾವುದೇ ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿರಂತರ ಅಧ್ಯಯನ ಅಗತ್ಯ. ಈ ಬಾರಿ ಅರ್ಹತೆ ಪಡೆಯಲು ವಿಫಲರಾಗಿರುವವರಿಗೆ ಶಿಕ್ಷಕ­ರಾ­ಗುವ ಅರ್ಹತೆ ಇಲ್ಲ ಎಂದು ಹೇಳಲಾಗು­ವು­ದಿಲ್ಲ. ಇಂದಿನ ಹಲವು ಶಿಕ್ಷಕ ತರಬೇತಿ ಸಂಸ್ಥೆಗಳು ದುಡ್ಡು ಮಾಡುವ ದಂಧೆಗೆ ಇಳಿದಿರುವುದು ಸತ್ಯ­ವಾದರೂ, ಟಿಇಟಿ ಪರೀಕ್ಷೆಯ ಕಳಪೆ ಫಲಿ­ತಾಂಶಕ್ಕೆ ಅಭ್ಯರ್ಥಿಗಳ ನಿರಂತರ ಅಧ್ಯಯ­ನದ ಕೊರತೆಯೇ ಕಾರಣ­ವೆನ್ನಬೇಕು.

ಹೀಗಾಗಿ, ಶಿಕ್ಷಕರಾಗಲು ಬಯಸುವ ಅಭ್ಯರ್ಥಿ­ಗಳು ಟಿಇಟಿ ಪರೀಕ್ಷೆಯ ಅಗತ್ಯವನ್ನೇ ಪ್ರಶ್ನಿಸುವ ಬದಲು, ಸೂಕ್ತ ಅಧ್ಯಯನದ ಮೂಲಕ ಮುಂದಿನ ಅವಕಾಶದಲ್ಲಿ ಯಶಸ್ವಿ ಆಗಬಹುದು.
–ವೆಂಕಟೇಶ ಬಿ.ಎಂ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT