ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾನಾ ಕೊನೆ ಪತ್ರ ಹರಾಜಿಗೆ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಬ್ರಿಟನ್‌ ರಾಜ­ಕುಮಾರಿ ಡಯಾನಾ ಅವರು ಫ್ರಾನ್ಸ್‌­ನಲ್ಲಿ ನಡೆದ ಅಪಘಾತದಲ್ಲಿ ದುರಂತ ಸಾವಿಗೀಡಾಗುವ ಮುನ್ನ ಬರೆದಿಟ್ಟಿದ್ದ ಪತ್ರ­ವನ್ನು ಈ ತಿಂಗಳ 28ರಂದು ಇಲ್ಲಿ ಹರಾಜಿಗೆ ಇಡಲಾಗುತ್ತಿದೆ. ಈ ಪತ್ರವು ₨3 ಲಕ್ಷಗಳಿಗೆ  (3 ಸಾವಿರ ಪೌಂಡ್‌) ಹರಾಜಾಗುವ ನಿರೀಕ್ಷೆ ಇದೆ.

ಡಯಾನಾ ಅವರು ಬೇಸಿಗೆ ವಿಶ್ರಾಂತಿ ಪಡೆಯಲು ಆರಂಭಿಸಿದ ಕೆಲವೇ ಗಂಟೆ­ಗಳಿಗೂ ಮುಂಚೆ ಮತ್ತು ಸಾಯುವ ಎರಡು ವಾರಗಳ ಹಿಂದೆ (1997ರ ಆಗಸ್ಟ್‌ 11ರಂದು), ಕೆನ್ಸಿಂಗ್ಟನ್‌ ಅರ­ಮನೆ ಲೆಟರ್‌ಹೆಡ್‌ ಕಾಗದದಲ್ಲಿ ಈ ಪತ್ರ­­ವನ್ನು ಬರೆದಿದ್ದರು ಎಂದು ‘ಡೈಲಿ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಇದೇ ವಿಶ್ರಾಂತಿಯ ವೇಳೆ, 1997ರ ಆಗಸ್ಟ್‌ 31ರಂದು ಪ್ಯಾರಿಸ್‌ನಲ್ಲಿ ಸಂಭ­ವಿಸಿದ ಕಾರು ಅಪಘಾತದಲ್ಲಿ ಡಯಾನಾ ಮತ್ತು ಆಕೆಯ ಪ್ರಿಯಕರ ದೋದಿ ಫಯಾದ್‌ ಅಸುನೀಗಿದರು.

ಪತ್ರದಲ್ಲಿ ‘ಪ್ರೀತಿಯೊಂದಿಗೆ ಡಯಾನಾ’ ಎಂಬ ಸಹಿ ಇದೆ. ಬೋಸ್ನಿ­ಯಾದ ನೆಲಬಾಂಬ್‌ ಸ್ಫೋಟದಲ್ಲಿ ಗಾಯ­ಗೊಂ­ಡ­ವರನ್ನು ಭೇಟಿಯಾದ ನಂತರ ತಮ್ಮ ಧರ್ಮ ಕಾರ್ಯದ ಭಾಗವಾಗಿ ಡಯಾನಾ ಈ ಪತ್ರವನ್ನು  ಸಹ ಪ್ರಚಾರಕರಾದ ಡಿಲೀಸ್‌ ಚೀತಮ್‌ ಅವರಿಗೆ ಬರೆದಿದ್ದರು. ಘಟನೆ­ಯಲ್ಲಿ ನೊಂದ­ವರನ್ನು ಸ್ಮರಿಸುವಂತೆ ಪತ್ರದಲ್ಲಿ ಇಡೀ ವಿಶ್ವವನ್ನು ಒತ್ತಾಯಿಸಿದ್ದರು.

ಚೀತಮ್‌ ಅವರು 1999ರಲ್ಲಿ ನಡೆದ ಧರ್ಮ ಕಾರ್ಯದ ಹರಾಜಿನಲ್ಲಿ ಈ ಪತ್ರ­ವನ್ನು ಪ್ರಸಿದ್ಧ ಛಾಯಾ­ಗ್ರಾಹಕ ಜೇಸನ್‌ ಫ್ರೇಸರ್‌ ಅವರಿಗೆ ಮಾರಿ­ದ್ದರು.

ವೈಯಕ್ತಿಕ­ವಾಗಿ ಡಯಾನಾ ಅವರನ್ನು ಚೆನ್ನಾಗಿ ತಿಳಿದಿದ್ದ ಫ್ರೇಸರ್‌ ಅವರು 2007ರಲ್ಲಿ ನಡೆದ ಆಕೆಯ 10ನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ಖಾಸಗಿ ಬ್ರಿಟಿಷ್‌ ಸಂಗ್ರಹಕಾರರೊಬ್ಬರಿಗೆ ಈ ಪತ್ರ­ವನ್ನು ಮಾರಾಟ ಮಾಡಿದ್ದರು ಎಂದು ಪತ್ರಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT