ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಮಾಧವಿಗೆ ಗೋಯಂಕ ಪ್ರಶಸ್ತಿ

Last Updated 16 ಮಾರ್ಚ್ 2016, 19:39 IST
ಅಕ್ಷರ ಗಾತ್ರ

ಬೆಂಗಳೂರು: ಕಮಲಾ ಗೋಯಂಕ ಪ್ರತಿಷ್ಠಾನದ ವಾರ್ಷಿಕ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಲಾಗಿದ್ದು ಉಡುಪಿಯ ಡಾ.ಮಾಧವಿ ಭಂಡಾರಿ ಅವರಿಗೆ ಅನುವಾದ ಪುರಸ್ಕಾರ ಲಭಿಸಿದೆ.

ಹೈದರಾಬಾದಿನ ವಿಜಯಕುಮಾರ್‌ ಸಪ್ಪಟ್ಟಿ ಅವರಿಗೆ ‘ಅತ್ಯುತ್ತಮ ದಕ್ಷಿಣ ಭಾರತದ ಲೇಖಕ’ ಪ್ರಶಸ್ತಿ ದೊರೆತಿದೆ. ಎರಡೂ ಪ್ರಶಸ್ತಿಗಳು ತಲಾ ₹ 31 ಸಾವಿರ ನಗದು ಬಹುಮಾನ ಒಳಗೊಂಡಿವೆ.

ಬೆಂಗಳೂರಿನ ಬಿ.ಎಸ್‌. ಶಾಂತಾಬಾಯಿ ಅವರಿಗೆ ‘ಗೋಯಂಕ ಹಿಂದಿ ಸಾಹಿತ್ಯ ಸಮ್ಮಾನ’ ಮತ್ತು ಡಾ. ನರ್ಪತ್‌ ಸೋಳಂಕಿ ಅವರಿಗೆ ‘ದಕ್ಷಿಣ ಧ್ವಜಧಾರಿ ಸಮ್ಮಾನ’ ನೀಡಿ ಗೌರವಿಸಲು ಪ್ರತಿಷ್ಠಾನ ತೀರ್ಮಾನಿಸಿದೆ.

ನಗರದ ಭಾರತೀಯ ವಿದ್ಯಾಭವನದಲ್ಲಿ ಏಪ್ರಿಲ್‌ 10ರಂದು ಪಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಎಸ್‌.ಎಸ್‌. ಗೋಯಂಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT