ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನದಡಿ ‘ಪ್ರೇಮ’ ಪರೀಕ್ಷೆ

Last Updated 12 ಮೇ 2015, 19:30 IST
ಅಕ್ಷರ ಗಾತ್ರ

ನೀವು ಯಾರಿಗಾದರೂ ಮೊದಲ ನೋಟದಲ್ಲೇ ಮನಸೋತಿದ್ದೀರಾ...? ಅಥವಾ ನೀವು ವಿಶೇಷ ಕಾಳಜಿ–ಪ್ರೀತಿ  ತೋರುವವರ ಮೇಲೆ ನಿಮಗೇನಾದರೂ ಪ್ರೀತಿ ಸ್ಪುರಿಸುವ ಮನಸ್ಸಾಗುತ್ತಿದೆಯಾ..?

ತೀರಾ ವೈಯಕ್ತಿಕವಾದಂತಹ ಭಾವನೆಗಳಿಗೆ ಸಂಬಂಧಿಸಿದ ಇಂತಹ ಪ್ರಶ್ನೆಗಳಿಗೆ ನೀವು ಸುಳ್ಳು ಹೇಳಿಬಿಡಬಹುದು. ಆದರೆ, ನಿಮ್ಮ ಹೃದಯದಾಳದಲ್ಲಿ ಅಡಗಿರುವ ಪ್ರೀತಿಯ ಬಣ್ಣಗಳು ಮಾತ್ರ ಇನ್ನು ಮುಂದೆ ಸುಲಭವಾಗಿ ಪತ್ತೆಯಾಗಿಬಿಡುತ್ತವೆ!

ಇದೇನು ವಿಚಿತ್ರ ಎನಿಸುತ್ತಿದೆಯೆ? ಗಾಬರಿಯಾಗದಿರಿ. ಇದೆಲ್ಲ ವಿಜ್ಞಾನದ ವಿಸ್ಮಯವಷ್ಟೆ. ಹೌದು, ನೀವು ಹೆಚ್ಚು ಕಾಳಜಿ ತೋರುವವರ ಮೇಲೆ ನಿಮಗೆ ಹುಟ್ಟುವ ಪ್ರೀತಿಯ ಭಾವನೆಗಳನ್ನು ನಿಮ್ಮ ಮೆದುಳು ಸ್ಕ್ಯಾನ್‌ ಮಾಡುವ ಮೂಲಕ ‘ಪ್ರೀತಿಯ ಪರೀಕ್ಷೆ’ ಮಾಡಬಹುದಾಗಿದೆ. ಹೀಗೆಂದು ಇತ್ತೀಚೆಗೆ ಈ ಕುರಿತು ನಡೆದಿರುವ ಸಂಶೋಧನೆಯೊಂದು ಹೇಳಿದೆ.

ಬೀಜಿಂಗ್‌ ಮತ್ತು ನ್ಯೂಯಾರ್ಕ್‌ನ ವಿಜ್ಞಾನಿಗಳು ಇಂತಹದ್ದೊಂದು ಸಂಶೋಧನಾ ಅಧ್ಯಯನವನ್ನು ನಡೆಸಿದ್ದಾರೆ. ಆ ಅಧ್ಯಯನದ ಪ್ರಕಾರ, ‘ಪ್ರೀತಿ ಪಾತ್ರ ರಿಗೆ ಸಂಬಂಧಿಸಿದ ವಿಷಯಗಳ ಕುರಿತ ಆಲೋಚನೆ ಮತ್ತು  ತೋರುವ ವರ್ತನೆ ವೇಳೆ ಮೆದುಳಿನ ಕೆಲ ಭಾಗಗಳು ಸಕ್ರಿಯವಾಗಿರುತ್ತವೆಯಂತೆ. ಇವು ನಮ್ಮ ಪ್ರೀತಿಯ ಭಾವನೆಗಳಿಗೆ ತಕ್ಕಂತೆ ಸ್ಪಂಧಿಸುವ ಮೂಲಕ ಪ್ರೀತಿ ಹುಟ್ಟಿರುವ ಸೂಚನೆ ನೀಡುತ್ತವೆ’.

ಅಲ್ಲದೆ, ‘ಮೆದುಳಿನಲ್ಲಿ ಕಂಡುಬರುವ ಏರಿಳಿತ, ಸ್ಪಂದನೆಗಳನ್ನು ಆಧರಿಸಿ, ಪ್ರೀತಿಯ ವಿವಿಧ ಹಂತಗಳನ್ನು ಕೂಡ ವಿಶ್ಲೇಷಿಸಬಹುದಾಗಿದೆ. ಅಂದರೆ, ವಿವಿಧ ಭಾವನೆಗಳಿಗೆ ನಾವು ತೋರುವ ವರ್ತನೆಗಳಿಗೆ ತಕ್ಕಂತೆ ಮೆದುಳು ಕೂಡ ಸಕ್ರಿಯವಾಗಿ ಸ್ಪಂದಿಸುತ್ತದೆ.

ಅಲ್ಲದೆ, ಈ ಸಂಶೋಧನೆ ಕೇವಲ ಪ್ರೇಮ ಪರೀಕ್ಷೆಗೆ ಮಾತ್ರವಲ್ಲದೆ, ಕಾನೂನು ವ್ಯಾಜ್ಯಗಳು, ವಿಚ್ಛೇದನಾ ಪ್ರಕ್ರಿಯೆಗಳು, ಅಪರಾಧ ಪ್ರಕರಣಗಳಲ್ಲಿನ ವಿಚಾರಣೆ ಪ್ರಕ್ರಿಯೆ ಹಾಗೂ ಅಪರಾಧಗಳಲ್ಲಿ ಭಾಗಿಯಾದವರನ್ನು ಕಂಡುಹಿಡಿಯು ವುದಕ್ಕೆ ಈ ಸಂಶೋಧನೆ ಮುಂದೊಂದು ದಿನ ನೆರವಾಗಲಿದೆ’ ಎನ್ನುತ್ತಾರೆ ಸಂಶೋಧಕರು.

‘ಸಂಶೋಧನೆಯಲ್ಲಿ ಪ್ರೀತಿಗೆ ಸಂಬಂಧಿಸಿದ ವಿಷಯಗಳ ಕುರಿತು ಮೆದುಳಿನ ಕೆಳಭಾಗದಲ್ಲಿರುವ ಭಾಗ ಗಳ ಚಟುವಟಿಕೆಯಲ್ಲಿ ಮಹತ್ವದ ಸಕ್ರಿಯ ಚಟುವಟಿಕೆ ಗಳು ಕಂಡುಬಂದಿವೆ. ಇವು ಮನುಷ್ಯನ ಮಾತು ಮತ್ತು ವರ್ತನೆಗಳನ್ನು ಆಧರಿಸಿ ಅವನಲ್ಲಿರುವ ಪ್ರೀತಿ ಭಾವನೆಗ ಳನ್ನು ಅಳೆಯಲು ನೆರವಾಗಬಲ್ಲವು’ ಎನ್ನುತ್ತಾರೆ ಸಂಶೋ ಧನಾ ಅಧ್ಯಯನ ತಂಡದ ಮುಖ್ಯಸ್ಥ, ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕ್ಸಿ ಒಚು ಜಾಂಗ್.

ಮುಖ್ಯವಾಗಿ ಮೆದುಳಿನಲ್ಲಿನ ‘ಕಾಡೆಟ್‌ ನ್ಯೂಕ್ಲಿಯಸ್‌’ ಎಂಬ ಒಂದು ಭಾಗವು ಪ್ರೀತಿಗೆ ಸಂಬಂಧಿಸಿದ ಭಾವನೆ ಗಳ ವಿಷಯದಲ್ಲಿ ತೀರಾ ಸಕ್ರಿಯವಾಗಿರುತ್ತದೆ ಎಂದು ಸಂಶೋಧಕರು ಗಮನ ಸೆಳೆಯುತ್ತಾರೆ. ಈ ಸಂಶೋ ಧನಾ ಅಧ್ಯಯನವು, ‘ಫ್ರಾಂಟಿಯರ್ ಇನ್ ಹ್ಯೂಮನ್ ನ್ಯೂರೊ ಸೈನ್ಸ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

‘ಯಾರು ಪ್ರೀತಿಯ ಬಲೆಯಲ್ಲಿ ಬಿದ್ದಿರುತ್ತಾರೊ ಅಂತಹವರು ತೋರುವ  ಬಗೆ ಬಗೆಯ ವರ್ತನೆಗಳಿಗೆ ತಕ್ಕಂತೆ ಮೆದುಳು ಭಿನ್ನವಾಗಿ ಕಾರ್ಯುನಿರ್ವಹಿಸುತ್ತದೆ. ಏಕೆಂದರೆ,  ಪ್ರಮುಖವಾದ ಹಾರ್ಮೋನ್‌ಗಳಾದ ಡೊಪಮೈನ್, ಆಕ್ಸಿಟೊಸಿನ್ ಹಾಗೂ ವಾಸೊಪ್ರೆಸ್ಸಿನ್‌ಗಳು ಮೆದುಳಿನ ವಿವಿಧ ಭಾಗಗಳಿಗೆ, ವಿವಿಧ ಹಂತದಲ್ಲಿ ಹರಿಯುವುದರಿಂದ ಅವರಲ್ಲಿ ಇಂತಹ ಬದಲಾವಣೆಗಳು ಗೋಚರಿಸುತ್ತವೆ’ ಎಂದು ಸಂಶೋಧನಾ ತಂಡ ವಿವರಿಸುತ್ತದೆ.

ಈ ಅಧ್ಯಯನಕ್ಕಾಗಿ ಸಂಶೋಧನಾ ತಂಡ, ನೂರು ಮಂದಿ ಪ್ರೀತಿಯ ಬಲೆಯಲ್ಲಿ ಬಿದ್ದವರು ಹಾಗೂ ಆಗಷ್ಟೆ ತಮ್ಮ ಪ್ರೀತಿ ಪಾತ್ರರಿಂದ ಅಥವಾ ವೈವಾಹಿಕ ಬಂಧನದಿಂದ ವಿಮುಕ್ತಿಗೊಂಡಿದ್ದ ಪುರುಷರು ಮತ್ತು ಸ್ತ್ರೀಯರ ಮೆದುಳನ್ನು ಸ್ಕ್ಯಾನ್‌ಗೆ ಒಳಪಡಿಸಿತು. ನಂತರ ಬಂದ ವರದಿಗಳ ವಿಶ್ಲೇಷಣೆ ನಡೆಸಿದಾಗ, ಒಂದಲ್ಲ ಒಂದು ಬಗೆಯ ಪ್ರೀತಿಯ ಬಲೆಗೆ ಬಿದ್ದವರ ಮೆದುಳಿನ ಅನೇಕ ಭಾಗಗಳ ಚಟುವಟಿಕೆಗಳು ಹೆಚ್ಚಾಗಿದ್ದವು.

ಅದರಲ್ಲೂ ಹೊಗಳುವಿಕೆ, ಭಾವನಾತ್ಮಕ ಸಂಬಂಧಗಳ ಪ್ರಚೋದನೆ ಹಾಗೂ ಸಾಮಾಜಿಕ ಸಂಪರ್ಕಕ್ಕೆ ಸಂಬಂಧಿ ಸಿದಂತೆ ಮಾತು ಮತ್ತು ವರ್ತನೆಗೆ ಮೆದುಳಿನ ಭಾಗಗಳು ಇನ್ನಿಲ್ಲದಂತೆ ಸಕ್ರಿಯವಾಗಿ ಪ್ರತಿಕ್ರಿಯಿಸುತ್ತಿದ್ದವು.

ಅಂತೆಯೇ, ಪ್ರೀತಿಯ ಬಂಧನದಿಂದ ಆಗಷ್ಟೆ ಬಿಡಿಸಿಕೊಂಡಿದ್ದ ಗುಂಪಿನ ವರದಿಯನ್ನು ವಿಶ್ಲೇಷಣೆಗೆ ಒಳಪಡಿಸಿದಾಗ, ಅವರ ಮೆದುಳಿನಲ್ಲಿ ಪ್ರೀತಿ– ಪ್ರೇಮ– ಸ್ನೇಹದಂತಹ ಭಾವನಾತ್ಮಕ ವಿಷಯಗಳಿಗೆ ಸಂಬಂಧಿಸಿ ದಂತೆ ಮೆದುಳಿನ ಭಾಗಗಳು ಅಷ್ಟಾಗಿ ಸಕ್ರಿಯವಾಗದೇ ಇರುವುದು ಕಂಡುಬಂದಿದೆ. ಈ ಎಲ್ಲಾ ಪ್ರಮುಖ ಅಂಶ ಗಳನ್ನು ಸಂಶೋಧಕರು ತರ್ಕಿಸುವ ಮೂಲಕ ಮನುಷ್ಯ ನೊಳಗೆ ಮೂಡುವ ಪ್ರೀತಿಯನ್ನು ಮೆದುಳಿನ ಸ್ಕ್ಯಾನ್‌ ಮೂಲಕ ಪರೀಕ್ಷಿಸಿ, ಅರಿಯಬಹುದು ಎಂದು ವಾದಿಸುತ್ತಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT