ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆ: ಹಿತಾಸಕ್ತಿ ರಕ್ಷಣೆಗೆ ಸ್ವಿಸ್‌ ಬ್ಯಾಂಕ್‌ಗಳ ಶತಪ್ರಯತ್ನ

Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬರ್ನ್‌/ ನವದೆಹಲಿ (ಪಿಟಿಐ): ವಿದೇಶಿ ಬ್ಯಾಂಕುಗಳಲ್ಲಿ ಇರಿಸಿರುವ ಕಪ್ಪು­ಹಣವನ್ನು ವಾಪಸ್‌ ದೇಶಕ್ಕೆ ತರ­ಬೇಕು ಎಂದು ಇತ್ತ ಭಾರತದಲ್ಲಿ ಒತ್ತಡ ಹೆಚ್ಚುತ್ತಿ­ದ್ದರೆ ಅತ್ತ ಸ್ವಿಟ್ಜರ್‌­ಲೆಂಡ್‌ನಲ್ಲಿ ಬ್ಯಾಂಕುಗಳು ತಮ್ಮ ಹಿತಾಸಕ್ತಿ ರಕ್ಷಿಸಿಕೊಳ್ಳಲು ಶತಾಯ­ಗತಾಯ ಪ್ರಯತ್ನಿಸುತ್ತಿವೆ.

ಈ ಸಂಬಂಧ ಮುಂದೆ ವಿಧಿಸಬಹು­ದಾದ ದಂಡ ಹಾಗೂ ಕಾನೂನು ವೆಚ್ಚಕ್ಕೆ ತಮ್ಮ ಬಜೆಟ್‌ನಲ್ಲಿ ಹಣ ಮೀಸಲಿಡುವ ಬಗ್ಗೆಯೂ ಅವು ಪರಿಗಣಿಸುತ್ತಿವೆ. ಅಲ್ಲದೇ, ಮಾಹಿತಿ ವಿನಿಮಯ ಹಾಗೂ ಆಡಳಿತಾತ್ಮಕ ಸಹಕಾರ ಒಪ್ಪಂದಗಳ ಅಡಿ ಅಗತ್ಯ ನಿಬಂಧನೆಗಳನ್ನು ವಿಧಿಸು­ವಂತೆ ಬ್ಯಾಂಕುಗಳು ಸ್ವಿಸ್‌ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.

ಇದೇ ವೇಳೆ, ಕನಿಷ್ಠ ಮೂರು ಜಾಗ­ತಿಕ ಬ್ಯಾಂಕುಗಳು ಭಾರತದ ಕಾರ್ಪೊ­ರೇಟ್‌ ಕಂಪೆನಿಗಳಿಗೆ ತಮ್ಮ ಹಣವನ್ನು ತಮ್ಮದೇ ಕಂಪೆನಿಗಳಲ್ಲಿ ಮರುಹೂಡಿಕೆ ಮಾಡಿ ಅದನ್ನು ವಿದೇಶ ನೇರ ಹೂಡಿಕೆ ಎಂದು ತೋರಿಸಲು ಅನುವು ಮಾಡಿ­ಕೊಟ್ಟಿ­ರುವ ಆರೋಪಕ್ಕೆ ಸಿಲುಕಿವೆ.  ಭಾರತದ ೧೫೨೦ ಕಂಪೆನಿಗಳು ಈ ರೀತಿ ಅಕ್ರಮ ಎಸಗಿವೆ ಎಂದು ಶಂಕಿಸಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT