ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾತಯ್ಯ, ದಾರಿ ತೋರಿ

Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬರಪೀಡಿತ ರಾಯಚೂರು, ಗುಲ್ಬರ್ಗ, ಯಾದ­ಗಿರಿ ಜಿಲ್ಲೆಗಳಲ್ಲಿ ಬಿಟ್ಟೂ ಬಿಡದೇ ಸುರಿ­ಯುತ್ತಿದೆ ಮಳೆ. ಅದೇ ರೀತಿಯ ಒಣಹವೆಗೆ ಹೆಸ­ರಾದ ಕೋಲಾರ, ಚಿಕ್ಕಬಳ್ಳಾಪುರ ಕಡೆ ಮಳೆ­ರಾಯ ಇಣುಕಿಯೂ ನೋಡುತ್ತಿಲ್ಲ. ಅತ್ತ ವರು­ಣನ ಮುನಿಸಿಗೂ ಇತ್ತ ಪಾತಾಳಗಂಗೆಯ ಅವಕೃಪೆಗೂ ಒಳಗಾದ ಜನರದು ದಿಕ್ಕು­ತೋಚದ ಸ್ಥಿತಿ.

ಈ ಎರಡೂ ಜಿಲ್ಲೆಗಳ ಬಹುತೇಕ ಕಡೆ ಇಲ್ಲಿ­ಯವರೆಗೂ ಹಳ್ಳ–ಕೊಳ್ಳಗಳಲ್ಲಿ ನೀರು ಕಾಣಿಸಿಲ್ಲ.  ಕೊಳವೆಬಾವಿಗಳು ಏದುಸಿರು­ಬಿಡು­ತ್ತಿವೆ. ಹೈನುಗಾರಿಕೆ ಇಲ್ಲದೇ ಹೋಗಿದ್ದರೆ ಇಷ್ಟೊ­ತ್ತಿಗೆ ಎಲ್ಲರೂ ಊರು–ಕೇರಿ ಬಿಟ್ಟು ಕೂಲಿ ಅರಸಿ ಯಾವುದಾದರೂ ಪೇಟೆ ಸೇರಬೇಕಾಗಿತ್ತು.

ಚುನಾವಣೆಗೆ ಮುನ್ನ ಶಾಶ್ವತ ನೀರಾವರಿ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುತ್ತಿದ್ದ ‘ನಾಯಕಮಣಿ’ಗಳ ಬಾಯಿ ಕಟ್ಟಿದೆ ಈಗ. ಮಳೆ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಈ ಎರಡೂ ಜಿಲ್ಲೆಗಳು ಕರ್ನಾಟಕದ ಮರುಭೂಮಿ ಆಗುವ ಕಾಲ ದೂರವಿಲ್ಲವೇನೋ ಎಂಬ ಆತಂಕ ಕಾಡುತ್ತಿದೆ. ಇದನ್ನು ನಿವಾರಿಸಬಲ್ಲ ನಾಯಕ ಸರಿ­ದೂರದಲ್ಲಿ ಎಲ್ಲಾದರೂ ಕಾಣಸಿಗುವನೆ, ಕೈವಾರ ತಾತಯ್ಯ?
–ಡಿ.ವೈ. ನಾರಾಯಣಸ್ವಾಮಿ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT