ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಪೂರೈಕೆಗೆ ಸಮಸ್ಯೆಯಾಗದು: ಕೇಂದ್ರ

ಇರಾಕ್‌ನಲ್ಲಿ ಮುಂದುವರಿದ ಬಿಕ್ಕಟ್ಟು
Last Updated 25 ಜೂನ್ 2014, 10:20 IST
ಅಕ್ಷರ ಗಾತ್ರ

ಶ್ರೀನಗರ (ಪಿಟಿಐ): ಇರಾಕ್‌ನಲ್ಲಿ ನಾಗ­ರಿಕ ಕಲಹದಿಂದ ಉಂಟಾ­ಗಿ­ರುವ ಬಿಕ್ಕ­ಟ್ಟು, ಕಚ್ಚಾ ತೈಲ ಪೂರೈಕೆಯ ಮೇಲೆ ನಕಾ­ರಾತ್ಮಕ ಪರಿಣಾ­ಮ ಬೀರದು ಎಂದು  ಕೇಂದ್ರ ಸರ್ಕಾರ ಹೇಳಿದೆ.

ಇರಾಕ್‌ನಲ್ಲಿ ಬಿಕ್ಕಟ್ಟು ಮುಂದುವರಿ­ದಿರುವುದು ನಿಜಕ್ಕೂ ಆತಂಕಕಾರಿ ಸಂಗತಿ. ಆದರೆ, ಇರಾಕ್‌ನ ಈಶಾನ್ಯ ಭಾಗ­ದಲ್ಲಿ ಉಗ್ರರ ದಾಳಿ ನಡೆ­ಯುತ್ತಿದೆ. ಹೆಚ್ಚಿನ ತೈಲ ಬಾವಿ­ಗಳು ದಕ್ಷಿಣ ಭಾಗದಲ್ಲಿವೆ. ಹೀಗಾಗಿ ತೈಲ ಪೂರೈಕೆ­ಯಲ್ಲಿ ವ್ಯತ್ಯಯವಾಗದು ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ರಾವ್‌ ಇಂದ್ರಜಿತ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇರಾಕ್‌ ಬಿಕ್ಕಟ್ಟಿನಿಂದ ಅಂತರರಾ­ಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಲಿದೆ ಎಂಬ ವಿಶ್ಲೇಷಣೆ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಕಳೆದೆರಡು ವಾರಗಳಿಂದ ಅಸ್ಥಿರತೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT