ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ವಿಲೇವಾರಿಗೆ ಪೈಪ್ ಕಾಂಪೋಸ್ಟ್

ಹೊಸ ಹೆಜ್ಜೆ- 13
Last Updated 18 ಜುಲೈ 2016, 19:30 IST
ಅಕ್ಷರ ಗಾತ್ರ

ಕಸವನ್ನು ಮನೆಯಲ್ಲಿಯೇ ಸಮರ್ಪಕವಾಗಿ ವಿಲೇವಾರಿ ಮಾಡಿದರೆ, ತ್ಯಾಜ್ಯದ ಸಮಸ್ಯೆ ಬಹುತೇಕ ಕಡಿಮೆಯಾಗಲು ಸಾಧ್ಯ. ಅತ್ಯಂತ ಸರಳ ರೀತಿಯಲ್ಲಿ ತ್ಯಾಜ್ಯ ಸಂಸ್ಕರಣೆ ಎಲ್ಲರೂ ಬಯಸುವ ವಿಧಾನ. ಕಸದ ವಿಲೇವಾರಿಗೆ ಹಲವು ವಿಧಾನಗಳಿದ್ದರೂ ಇತ್ತೀಚಿನ ಅತ್ಯಂತ ಸರಳ, ಮಿತವ್ಯಯ ವಿಧಾನ ಪೈಪ್ ಕಾಂಪೋಸ್ಟ್. ಇದು ಈಗಾಗಲೇ ಕೇರಳ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಕಸ ವಿಲೇವಾರಿಯನ್ನು ಸಮರ್ಪಕವಾಗಿ ಮಾಡುವ ಉದ್ದೇಶದಿಂದ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳು, ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಪೈಪ್ ಕಾಂಪೋಸ್ಟ್ ವಿಧಾನವನ್ನು ಕಡ್ಡಾಯವಾಗಿ ಅಳವಡಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸೂಚನೆ ನೀಡಿದ್ದಾರೆ. ಈಗಾಗಲೇ ಹಲವು ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿಯೂ ಇದನ್ನು ಅಳವಡಿಸಿದ್ದಾರೆ.

ಪೈಪ್ ಕಾಂಪೋಸ್ಟ್ ಅಳವಡಿಸುವ ವಿಧಾನ
6 ಇಂಚು ದಪ್ಪ 6ಅಡಿ ಎತ್ತರದ ಸಿಮೆಂಟ್ ಅಥವಾ ಮಣ್ಣಿನ ಅಥವಾ ಪಿವಿಸಿ ಪೈಪ್ ಅನ್ನು ಒಂದೂವರೆ ಅಡಿ ಆಳದಲ್ಲಿ ನೆಡಬೇಕು, ಪೈಪ್ ಒಳಗೆ ಕಸ ಹಾಕುವ ಮೊದಲು 1 ಕೆ.ಜಿ ಬೆಲ್ಲ ಮತ್ತು ಸೆಗಣಿ ನೀರನ್ನು ಹಾಕಬೇಕು (ಇದರಿಂದ ಜೈವಿಕ ಹುಳುಗಳು ಉತ್ಪತ್ತಿಯಾಗುತ್ತವೆ), ನಂತರ ಮನೆಯಲ್ಲಿ ದಿನ ನಿತ್ಯ ಉತ್ಪತ್ತಿಯಾಗುವ ಬೇಡವಾದ ಜೈವಿಕ ಕಸವನ್ನು ಹಾಕಬೇಕು.

ಭೂಮಿಯಲ್ಲಿ ಕರಗದ ಯಾವುದೇ ವಸ್ತುಗಳನ್ನು ಪೈಪ್ ಒಳಗೆ ಹಾಕಬಾರದು. ವಾರಕ್ಕೊಮ್ಮೆ ಅರ್ಧ ಮಗ್ ನೀರು ಮತ್ತು ಒಂದು ಹಿಡಿ ಮಣ್ಣನ್ನು ಪೈಪ್‌ ಒಳಗೆ ಹಾಕಬೇಕು. ಪೈಪ್ ಮೇಲ್ಭಾಗವನ್ನು ಮರದ ತುಂಡು ಅಥವಾ ಹೆಂಚಿನಿಂದ ಮುಚ್ಚಬೇಕು.

ಪೈಪ್ ಕಾಂಪೋಸ್ಟ್ ಉಪಯೋಗ- ತ್ಯಾಜ್ಯದ ಮೂಲದಲ್ಲಿಯೇ ನಿರ್ವಹಣೆ ಸಾಧ್ಯ. ಕಡಿಮೆ ಜಾಗ, ಕಡಿಮೆ ಖರ್ಚು, ಸರಳ ರೀತಿಯಲ್ಲಿ ಕಸ ನಿರ್ವಹಣೆ  ಸಾಧ್ಯ. ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಬಳಸಬಹುದು, ಅರೋಗ್ಯಪೂರ್ಣ ಪರಿಸರ ನಿರ್ಮಾಣ ಸಾಧ್ಯ, ಪರಿಸರ ಮಾಲಿನ್ಯ ತಪ್ಪುತ್ತದೆ.

ಅತ್ಯಂತ ಸರಳ ಮತ್ತು ಕಡಿಮೆ ವೆಚ್ಚದ ಈ ಯೋಜನೆಯಿಂದ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಕಸ ವಿಲೇವಾರಿ ಸಮಸ್ಯೆಯನ್ನು ಬಹುತೇಕವಾಗಿ ಪರಿಹರಿಸಬಹುದಾಗಿದ್ದು, ಉತ್ತಮ ಗುಣಮಟ್ಟದ ಗೊಬ್ಬರವನ್ನು ಪಡೆಯಲೂ ಸಾಧ್ಯವಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆ ದಾಪುಗಾಲು ಹಾಕುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT