ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕಗಳಿಂದ ದುರಸ್ತಿ ಕಾಣದ ಮುಖ್ಯ ರಸ್ತೆ

Last Updated 28 ಫೆಬ್ರುವರಿ 2015, 10:39 IST
ಅಕ್ಷರ ಗಾತ್ರ

ಹನುಮಸಾಗರ: ಇಲ್ಲಿನ ಹನುಮ­ಸಾಗರ- ಇಲಕಲ್ ರಸ್ತೆ ದಶಕಗಳಿಂ­ದಲೂ ದುರಸ್ತಿಯಾಗದ ಕಾರಣ ಸಂಪೂರ್ಣ ಹಾಳಾಗಿದ್ದು ವಾಹನ ಮುಂದೆ ಚಲಿಸಲು ಹರಸಾಹಸ­ಪಡಬೇಕಾಗಿದೆ, ಅಪಘಾತಗಳು ಈ ರಸ್ತೆಯಲ್ಲಿ ಮಾಮೂಲಿಯಾಗಿವೆ.

ಸುಮಾರ 15ಕಿ.ಮೀ ವರೆಗೂ ಈ ರಸ್ತೆಯ ತುಂಬ ಕಂದಕಗಳು ನಿರ್ಮಾಣ­ವಾಗಿದ್ದು ಇಡೀ ರಸ್ತೆ ಅಸ್ಥಿಪಂಜರದಂತೆ ಕಾಣುತ್ತದೆ.

ಹಲವಾರು ವರ್ಷಗಳಿಂದ ವಾಹನ ಚಾಲಕರು, ಸಾರ್ವಜನಿಕರು ದೂರುತ್ತಾ ಬಂದಿದ್ದರೂ ರಸ್ತೆ ದುರಸ್ಥಿ ಮಾತ್ರ ನಡೆದಿಲ್ಲ ಎಂದು ವಾಹನ ಸವಾರರಾದ ಚಂದ್ರಕಾಂತ, ರಮೇಶಪ್ಪ ದೂರುತ್ತಾರೆ. ಈ ರಸ್ತೆ ಕೊಪ್ಪಳ ಹಾಗೂ ಬಾಗಲ­ಕೋಟೆ ಜಿಲ್ಲೆಗಳ ಗಡಿಭಾಗದಲ್ಲಿರುವ ಕಾರಣದಿಂದಲೇ ರಸ್ತೆಯತ್ತ ಯಾರೂ ಗಮನಹರಿಸುತ್ತಿಲ್ಲ ಎಂಬುದು ಸಾರ್ವ­ಜನಿಕರ ದೂರು.

ಅಲ್ಲದೆ ಈ ರಸ್ತೆಯಲ್ಲಿ ಗ್ರಾನೈಟ್ ಕಲ್ಲುಗಳನ್ನು ಹೊತ್ತ ಲಾರಿಗಳು ನಿರಂತರ ಚಲಿಸುವುದರಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ.

ಈ ಭಾಗದ ಹೆಚ್ಚಿನ ಜನರು ವ್ಯವ­ಹಾರಕ್ಕೆ, ವಿದ್ಯಾರ್ಥಿಗಳು  ಕಾಲೇಜ್‌ ಶಿಕ್ಷ­ಣಕ್ಕೆ ಇಲಕಲ್‌, ಬಾಗಲ­ಕೋಟೆಗಳಿಗೆ ಇದೇ ಮಾರ್ಗವಾಗಿ ಹೋಗು­ತ್ತಿದ್ದು, ಹದಗೆಟ್ಟ ರಸ್ತೆಯ ಕಾರಣದಿಂದೆ ಅನೇಕ ಬಸ್‌ಗಳು ಮಾರ್ಗ ಬದಲಿಸಿವೆ ಎಂದು ವಿದ್ಯಾರ್ಥಿ­ಗಳು  ಹೇಳುತ್ತಾರೆ.

ಈ ರಸ್ತೆ ದುರಸ್ತಿ ಮತ್ತು ಪುನರ್ ನಿರ್ಮಾಣದ ಬಗ್ಗೆ ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೆ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡ­ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT