ಮೈಸೂರು: ಇದು ಕವಿಗಳಿಗೆ ಕಹಿಸುದ್ದಿ; ಕಿವಿಗಳಿಗೆ ಸಿಹಿಸುದ್ದಿ. ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕವಿಗೋಷ್ಠಿ ಇರುವುದಿಲ್ಲ. ರಾಜ್ಯದಲ್ಲಿ ಬರ ಹಾಗೂ ರೈತರ ಸರಣಿ ಆತ್ಮಹತ್ಯೆಗಳಿಂದ ಸರಳಾ ದಸರಾ ಆಚರಿಸಬೇಕೆಂದು ಸರ್ಕಾರ ನಿರ್ಧರಿಸಿದೆ. ಇದರ ಬಿಸಿ ಕವಿಗೋಷ್ಠಿಗೂ ತಟ್ಟಲಿದೆ. ಇದು ಕವಿಗಳಿಗೆ ನಿರಾಸೆ ತಂದರೆ, ಕೆಲ ಕೆಟ್ಟ ಕವಿತೆಗಳನ್ನು ಕೇಳುವುದರಿಂದ ಪಾರಾದೆವು ಎನ್ನುವ ಖುಷಿ ಕೇಳುವ ಕಿವಿಗಳದು.

ದಸರಾ ಕವಿಗೋಷ್ಠಿಗೆ ಅಂದಾಜು 40 ವರ್ಷಗಳ ಇತಿಹಾಸವಿದೆ. ಮೈಸೂರು ದಸರಾ ಎಂದರೆ ಸಾಂಸ್ಕೃತಿಕ ಬದುಕಿನ ಅನಾವರಣ. ಕಲೆ, ಸಂಗೀತ ಹಾಗೂ ಸಾಹಿತ್ಯ ಸೇರಿ ದಸರಾ ಅರ್ಥಪೂರ್ಣವಾಗುತ್ತದೆ ಎನ್ನುವ ಕಾರಣಕ್ಕೆ ಕವಿಗೋಷ್ಠಿ ಆಯೋಜಿಸಲಾಯಿತು. ಇದು ಮೈಸೂರು ಜಿಲ್ಲೆಗೆ ಸೀಮಿತವಲ್ಲ. ನಾಡಿನ ವಿವಿಧೆಡೆಯ ಕವಿಗಳನ್ನು ಆಹ್ವಾನಿಸಲಾಗುತ್ತದೆ. ಆಯಾ ಕಾಲದ ಜ್ವಲಂತ ಸಮಸ್ಯೆಗಳ ಕುರಿತು ಕವಿಗಳು ಕವಿತೆ ವಾಚಿಸುವರು. ಇದರಿಂದ ಆಯಾ ಕಾಲದ ಸ್ಥಿತಿಗೆ ಕವಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ದಸರಾ ಕವಿಗೋಷ್ಠಿಯಲ್ಲಿ ವ್ಯಕ್ತವಾಗುತ್ತಿತ್ತು. ಕುತೂಹಲದ ಸಂಗತಿ ಎಂದರೆ, ದಸರಾ ಕವಿಗೋಷ್ಠಿಯಲ್ಲಿ ಕವಿತೆ ಓದಬೇಕೆಂಬ ಹುಮ್ಮಸ್ಸು ಹೆಚ್ಚಿನ ಕವಿಗಳಿಗಿದೆ. ಈ ಕವಿಗೋಷ್ಠಿಯಲ್ಲಿ ಭಾಗವಹಿಸಿದರೆ ಕವಿ ಎನ್ನುವುದು ಸಾಬೀತಾಗುತ್ತದೆ ಎನ್ನುವುದು ಅನೇಕರ ಅಭಿಪ್ರಾಯ.

ಇದರೊಂದಿಗೆ, ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವುದು ಕೂಡಾ ಪ್ರತಿಷ್ಠೆಯ ಸಂಗತಿಯಾಗಿದೆ. ಗಮನಾರ್ಹ ಸಂಗತಿ ಎಂದರೆ, ಕನ್ನಡದ ಜತೆಗೆ, ಉರ್ದು, ಕೊಂಕಣಿ, ಕೊಡವ, ತುಳು ಭಾಷೆಯ ಕವಿಗಳನ್ನೂ ಆಹ್ವಾನಿಸಲಾಗುತ್ತಿದೆ. ಸಾರೋಟಿನಲ್ಲಿ ಮೆರವಣಿಗೆ: ಕವಿಗೋಷ್ಠಿಯಲ್ಲಿ ಆಯ್ಕೆಗೊಂಡ ಕವಿಗಳನ್ನು ಅಂಬಾವಿಲಾಸ ಅರಮನೆಯಿಂದ ಕವಿಗೋಷ್ಠಿ ನಡೆಯುತ್ತಿದ್ದ ಜಗನ್ಮೋಹನ ಅರಮನೆಯವರೆಗೆ ಸಾರೋಟಿನಲ್ಲಿ ಕೂರಿಸಿ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತಿತ್ತು.

ಈ ಸಂಪ್ರದಾಯವನ್ನು ಕಳೆದ ಎರಡು ವರ್ಷಗಳಿಂದ ನಿಲ್ಲಿಸಲಾಯಿತು. ಆದರೆ, ಒಂದೇ ಕವಿಗೋಷ್ಠಿ ಇದ್ದುದು, ಕಳೆದ ಎರಡು ವರ್ಷಗಳಿಂದ ಯುವ, ಮಹಿಳಾ ಹಾಗೂ ಪ್ರಧಾನ ಎಂದು ಮೂರು ಕವಿಗೋಷ್ಠಿಗಳು ನಡೆದಿವೆ. ಇದರಿಂದ ಯುವತಲೆಮಾರಿಗೆ, ಕವಯಿತ್ರಿಯರಿಗೆ ಹಾಗೂ ಹಿರಿಯ ಕವಿಗಳಿಗೆ ಅವಕಾಶ ಸಿಕ್ಕಿದೆ.

‘ಪ್ರತಿ ಗೋಷ್ಠಿಯಲ್ಲಿ ತಲಾ 30 ಕವಿಗಳಿಗೆ ಅವಕಾಶ ಸಿಗುತ್ತಿತ್ತು. ಅದ್ಧೂರಿ ವೆಚ್ಚ ಆಗುವುದಿಲ್ಲ. ಪ್ರಯಾಣವೆಚ್ಚ, ವಸತಿ ವ್ಯವಸ್ಥೆ ಹಾಗೂ ಒಂದು ಸಾವಿರ ಗೌರವ ಸಂಭಾವನೆ ಸೇರಿ ₨ 6 ಲಕ್ಷ ಮಾತ್ರ ವೆಚ್ಚವಾಗುತ್ತಿತ್ತು. 2013 ಹಾಗೂ 2014ರ ಅವಧಿಗೂ ₨ 6 ಲಕ್ಷ ವೆಚ್ಚವಾಗಿದೆ. ಕವಿಗೋಷ್ಠಿಯು ಒಮ್ಮೆಯೂ ನಿಂತಿಲ್ಲ. ಈ ಬಾರಿಯೂ ನಡೆಸಬೇಕು. ಇದನ್ನು ಲೇಖಕನಾಗಿ ಒತ್ತಾಯಪಡಿಸುವೆ’ ಎನ್ನುತ್ತಾರೆ ಕಳೆದ ಬಾರಿ ಕವಿಗೋಷ್ಠಿಯ ಉಪಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಡಾ.ಸಿ. ನಾಗಣ್ಣ.

‘ಕವಿಗೋಷ್ಠಿಯ ಉಸ್ತುವಾರಿಗೆ ಈಚಿನ ವರ್ಷಗಳಲ್ಲಿ ಉಪಸಮಿತಿ ರಚಿಸಿ, ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸಲಾಗುತ್ತಿದೆ. ಎಲ್ಲ ಪ್ರದೇಶದ, ಎಲ್ಲ ವಯೋಮಾನದ ಹಾಗೂ ಎಲ್ಲ ಜಿಲ್ಲೆಗಳ ಕವಿಗಳಿಗೆ ಪ್ರಾತಿನಿಧ್ಯ ಇರುತ್ತಿತ್ತು’ ಎಂದು ಚಿಂತಕ ಡಾ. ಕಾಳೇಗೌಡ ನಾಗವಾರ ಹೇಳುತ್ತಾರೆ.

‘ರೈತರ ಆತ್ಮಹತ್ಯೆಗಳು ನಡೆದಿವೆ. ಜತೆಗೆ ಬರವಿದೆ ನಿಜ. ಆದರೆ, ಕವಿಗೋಷ್ಠಿ ಏರ್ಪಡಿಸಿದರೆ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕವಿತೆಗಳನ್ನೇ ಕವಿಗಳು ಓದುತ್ತಾರೆ. ಇದಕ್ಕಾಗಿ ನಾಡಿನ ಕವಿಗಳನ್ನು ಪ್ರೋತ್ಸಾಹಿಸಲು ಕವಿಗೋಷ್ಠಿ ಇರಬೇಕು. ಹೀಗಾಗಿ, ಕವಿಗೋಷ್ಠಿ ನಿಲ್ಲಬಾರದು’ ಎನ್ನುವ ಒತ್ತಾಯ ನಾಗವಾರ ಅವರದು.

‘ಹಾ.ಮಾ. ನಾಯಕ ಅವರ ನೇತೃತ್ವದಲ್ಲಿ ದಸರಾ ಕವಿಗೋಷ್ಠಿ ನಡೆದ ಮೇಲೆ ಸಂಕಲನವಾಗಿ ಪ್ರಕಟವಾಗಿವೆ. ಅಂಥ ಸಂಕಲನವನ್ನು ಮರುವರ್ಷದ ದಸರಾದಲ್ಲಿ ಬಿಡುಗಡೆಗೊಳಿಸಲಾಗುತ್ತಿತ್ತು. ಈ ಬಗೆಯ 8–10 ಪುಸ್ತಕಗಳು ಪ್ರಕಟಗೊಂಡಿವೆ’ ಎಂದು ಸ್ಮರಿಸುತ್ತಾರೆ ಕಳೆದ ವರ್ಷದ ಕವಿಗೋಷ್ಠಿಯ ಉಪಸಮಿತಿ ಅಧ್ಯಕ್ಷರಾಗಿದ್ದ ಎಂ.ಎಸ್. ಶೇಖರ್.

ಬರ ಹಾಗೂ ರೈತರ ಆತ್ಮಹತ್ಯೆಗಳಿಂದ ಈ ಬಾರಿಯ ಮೈಸೂರು ದಸರಾ ಸರಳವಾಗಿರಲಿದೆ. ಹೀಗಾಗಿ, ಕವಿಗೋಷ್ಠಿ ಹಮ್ಮಿಕೊಳ್ಳುವ ಉದ್ದೇಶವಿಲ್ಲ. -ವಿ. ಶ್ರೀನಿವಾಸಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.