ಪಟ್ನಾ (ಪಿಟಿಐ): ಮನೆಯಲ್ಲಿ ಅಕ್ರಮ ಹಣ ಹೊಂದಿದ ಆರೋಪಕ್ಕೆ ಗುರಿಯಾಗಿ ಲೋಕಸಭಾ ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿರುವ ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಅವರು ತಮ್ಮ ಮನೆಯಲ್ಲಿ ಸಿಕ್ಕ ದುಡ್ಡು ಉದ್ಯಮಿಯಾಗಿರುವ ಸೋದರ ಸಂಬಂಧಿಗೆ ಸೇರಿದ್ದು ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನವಾಡಾ ಕ್ಷೇತ್ರ ಸಂಸದರಾಗಿರುವ ಸಿಂಗ್, ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಸೋದರ ಸಂಬಂಧಿ ರಾಕೇಶ್ ಸಿಂಗ್ ಅವರ ಜತೆಗೆ ಕೃಷ್ಣಪುರಿ ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾರೆ.

‘ಆ ಹಣ ನನ್ನ ಸೋದರ ಸಂಬಂಧಿಯದ್ದು. ಪೊಲೀಸ್ ಅಧಿಕಾರಿಗಳಿಗೆ ಇದನ್ನು ತಿಳಿಸಿರುವೆ’ ಎಂದು ಬಳಿಕ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವೇಳೆ ಹಾಜರಿದ್ದ ಪಟ್ನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಚಾರ ವಿಭಾಗದ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ಅವರು ಹಾಜರಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಯಲ್ಲಿ ದೊರೆತ ಹಣ ಸೋದರ ಸಂಬಂಧಿಗೆ ಸೇರಿದ್ದು ಎಂದು ಗಿರಿರಾಜ್ ಸಿಂಗ್ ತಿಳಿಸಿದ್ದಾರೆ ಎಂದಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ರಾಕೇಶ್ ಸಿಂಗ್, ಗೋವಿನ ಜೋಳದ ವ್ಯಾಪಾರದಲ್ಲೂ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.