ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಸರ್ಕಾರ ರಚನೆ: ಲೆ.ಗವರ್ನರ್‌ಗೆ ಕಾಲಾವಕಾಶ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಸರ್ಕಾರ ರಚನೆ ಸಂಬಂಧ ಲೆಫ್ಟಿನೆಂಟ್‌ ಗವರ್ನರ್‌್ ನಜೀಬ್‌ ಜಂಗ್‌ ಅವರ ಪ್ರಯತ್ನ ಸಕಾರಾತ್ಮಕವಾಗಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್‌, ನವೆಂ­ಬರ್‌್ 11ವರೆಗೆ  ಕಾದು ನೋಡುವಂತೆ ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ಸೂಚಿಸಿದೆ.

ದೆಹಲಿ  ವಿಧಾನಸಭೆ ವಿಸರ್ಜಿ­ಸುವಂತೆ ಕೋರಿ ಎಎಪಿ ಸುಪ್ರೀಂ­ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ‘ಅಲ್ಪಮತದ ಸರ್ಕಾರ ಬಾಹ್ಯ ಬೆಂಬಲ­ದಿಂದ ನಡೆಯುವ ಸಾಧ್ಯತೆ ಇದೆ.   ಆದ ಕಾರಣ ಲೆಫ್ಟಿನೆಂಟ್‌ ಗವ­ರ್ನರ್‌ ಅವರಿಗೆ ಇನ್ನಷ್ಟು ಕಾಲಾವಕಾಶ ಕೊಡ­ಬೇಕು’ ಎಂದು ಮುಖ್ಯ­ನ್ಯಾಯ­ಮೂರ್ತಿ ಎಚ್‌.­ಎಲ್‌.ದತ್ತು, ನ್ಯಾಯ­ಮೂರ್ತಿ­ಗಳಾದ ಜೆ. ಚಲಮೇಶ್ವರ್‌, ಎ.ಕೆ.ಸಿಕ್ರಿ, ಆರ್‌.ಕೆ.ಅಗರ್‌ವಾಲ್‌ ಹಾಗೂ ಅರುಣ್‌ ಮಿಶ್ರಾ ಅವರಿದ್ದ ಸಂವಿಧಾನ ಪೀಠ ಗುರುವಾರ ಹೇಳಿತು.

‘ಸರ್ಕಾರ ರಚನೆ ವಿಷಯವಾಗಿ ಲೆ.ಗವರ್ನರ್‌್ ಸಕಾರಾತ್ಮಕ ಹೆಜ್ಜೆ ಇಟ್ಟಿದ್ದಾರೆ ಎನ್ನುವುದು ಮಾಧ್ಯಮ ವರದಿಗಳಿಂದ ಗೊತ್ತಾಗುತ್ತದೆ. ಅವರಿಗೆ ಇನ್ನಷ್ಟು ಕಾಲಾವಕಾಶ ಕೊಡೋಣ’ ಎಂದ ಪೀಠ ವಿಚಾರಣೆಯನ್ನು ನವೆಂಬರ್‌್ 11ರವರೆಗೆ ಮುಂದೂಡಿತು. ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳ ಸ್ಥಾನಗಳನ್ನು ನೋಡಿದರೆ ಸರ್ಕಾರ ರಚನೆ ಅಸಾಧ್ಯ ಎನಿಸುತ್ತದೆ ಎಂದು ಎಎಪಿ ಪರ ವಕೀಲ ಪ್ರಶಾಂತ್‌ ಭೂಷಣ್‌ ವಾದಿಸಿದರು. ಆಗ ಪೀಠವು ‘ನಾವು ಯಾವಾಗಲೂ ಆಶಾವಾದಿಗಳಾಗಿರಬೇಕು’ ಎಂದಿತು.

ದೆಹಲಿಯಲ್ಲಿ ಸರ್ಕಾರ ರಚನೆ ಸಾಧ್ಯತೆ ಅನ್ವೇಷಿಸುವಂತೆ ನಜೀಬ್‌ ಜಂಗ್‌ ಅವರು ರಾಜಕೀಯ ಪಕ್ಷಗಳಿಗೆ ಬುಧವಾರ ಕರೆ ನೀಡಿದ್ದರು.
ದೆಹಲಿಯಲ್ಲಿ ಸರ್ಕಾರ ರಚನೆ ವಿಳಂಬವಾಗುತ್ತಿರುವುದಕ್ಕೆ ಕೇಂದ್ರ  ಸರ್ಕಾರ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ಅವರನ್ನು ಸುಪ್ರೀಂಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT