ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಾಂತರಗೊಂಡವರನ್ನು ಯಾವ ಜಾತಿಗೆ ಸೇರಿಸುತ್ತೀರಿ?

ಕಾಂಗ್ರೆಸ್‌ ನಾಯಕ ಖರ್ಗೆ ಪ್ರಶ್ನೆ
Last Updated 19 ಜನವರಿ 2015, 19:30 IST
ಅಕ್ಷರ ಗಾತ್ರ

ಮೈಸೂರು: ದೇಶದಲ್ಲಿ ಈಚೆಗೆ ‘ಘರ್‌ ವಾಪಸಿ’ ಹೆಸರಲ್ಲಿ ಧರ್ಮಾಂತರ­ಗೊಳಿಸು­ವುದು ನಡೆಯುತ್ತಿದೆ. ಹಾಗೆ ವಾಪಸು ಬಂದವ­ರನ್ನು ಯಾವ ಜಾತಿಗೆ ಸೇರಿಸುತ್ತೀರಿ? ಎಂದು ಲೋಕಸಭೆಯ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿ­ಕಾರ್ಜುನ ಖರ್ಗೆ ಪ್ರಶ್ನಿಸಿದರು.

ಸುತ್ತೂರಿನಲ್ಲಿ ನಡೆಯುತ್ತಿರುವ ಶಿವ­ರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ  ಅಂಗವಾಗಿ ಸೋಮ­ವಾರ ಆಯೋಜಿಸಿದ್ದ ಧಾರ್ಮಿಕ ಸಭೆ­ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಾಂತರಗೊಂಡವರು ಕೆಳ­ಜಾತಿಗೆ ಸೇರಲು ಇಷ್ಟಪಡುವುದಿಲ್ಲ. ಮೇಲ್ಜಾತಿ­ಯವರು ಸೇರಿಸಿಕೊ­ಳ್ಳುವು­ದಿಲ್ಲ. ಹೀಗಿದ್ದಾಗ ಯಾವ ಜಾತಿಗೆ ಸೇರುತ್ತಾರೆಂಬುದು ಮುಖ್ಯವಾಗುತ್ತದೆ.

ಈ ದೇಶದಲ್ಲಿ 2,750 ಜಾತಿಗಳಿವೆ. ಜತೆಗೆ, ಸಾವಿರಾರು ಉಪಜಾತಿಗಳಿವೆ. ಆದರೂ, ಇಷ್ಟವಾದ ಧರ್ಮವನ್ನು ಆಯ್ದುಕೊಳ್ಳಲು ಸಂವಿಧಾನವು ಹಕ್ಕು ಕೊಟ್ಟಿದೆ ನಿಜ. ಆದರೆ, ದುಡ್ಡು, ಜಮೀನು, ಬೆಳ್ಳಿ, ಬಂಗಾರದ ಆಮಿಷ­ವೊಡ್ಡಿ ಧರ್ಮಾಂತರ­ಗೊಳಿಸುವ ಘಟನೆ­ಗಳು ಹೆಚ್ಚುತ್ತಿವೆ ಎಂದು ಆತಂಕಪಟ್ಟರು.

ಬಸವಣ್ಣನ ಕಾಲದಲ್ಲಿ ಆಮಿಷ ಒಡ್ಡಿ ಧರ್ಮಾಂತರಗೊಳಿಸುತ್ತಿರಲಿಲ್ಲ. ಸಮಾ­ನ­ತೆ­ಗಾಗಿ ಕೆಳವರ್ಗದವರನ್ನು ಮೇಲಕ್ಕೆತ್ತ­ಲಾಗು­-­ತ್ತಿತ್ತು. ಈ ಮೂಲಕ ಅಸ್ಪೃಶ್ಯತೆ ಹೋಗ­ಲಾಡಿಸುವ ಯತ್ನ ನಡೆಯಿತು. ಈಗ ಬಸವಣ್ಣನ ಧರ್ಮ ಸೇರುವು­ದೆಂದರೆ ಲಿಂಗ ಕಟ್ಟಿಕೊಂಡರೆ ಲಿಂಗಾ­ಯತರಾ­ದಂತೆ. ಇದಕ್ಕಾಗಿ ಬಸವಣ್ಣ ಪ್ರತಿಪಾದಿ­ಸಿದ ಸಮಾನತೆಯ ತತ್ವವನ್ನು ಪ್ರಚಾರ­ಗೊಳಿಸಬೇಕಿದೆ ಎಂದು ಸಲಹೆ ನೀಡಿದರು.

ಸಮಾರಂಭಕ್ಕೂ ಮೊದಲು ಅವರು ಸುದ್ದಿ­ಗಾರರೊಂದಿಗೆ ಮಾತನಾಡಿ, ರಾಜ್ಯ­­­ದಲ್ಲಿ ದಲಿತ ಮುಖ್ಯಮಂತ್ರಿ ಕುರಿತು ಚರ್ಚೆ ಅನಗತ್ಯ. ಆದರೂ, ಈ ಕುರಿತು ಯಾರಿಗೆ ಆಸಕ್ತಿ ಅವರನ್ನೇ ಕೇಳಿ ಎಂದರು. ವಿಧಾನಸಭೆಗೆ ಚುನಾವಣೆ ನಡೆದ ನಂತರ ದಲಿತ ಮುಖ್ಯಮಂತ್ರಿ ಕುರಿತು ಚರ್ಚೆ ನಡೆಯಬೇಕಿತ್ತು ಮತ್ತು ಆಯ್ಕೆ ಮಾಡಬಹುದಿತ್ತು.

ಈಗ ಚರ್ಚಿಸುವ ಮೂಲಕ ದಲಿತರನ್ನು ಮತ್ತು ಹಿಂದುಳಿ­ದ­ವರನ್ನು ಬೇರ್ಪಡಿಸುವ ತಂತ್ರ ನಡೆ­ಯುತ್ತಿದೆ ಎಂದು ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದರು. ಅರ್ಕಾವತಿ ಡಿನೋಟಿಫಿಕೇಷನ್‌ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ಉತ್ತರ ಕೊಟ್ಟಿದ್ದಾರೆ. ಜತೆಗೆ, ಅವರ ಬಳಿ ಸರಿಯಾದ ದಾಖಲೆಗಳಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT