ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿತಾ ಪ್ರಕರಣ: ಸಿಐಡಿಗೆ ಕಾಡಿದ ಪ್ರಶ್ನೆಗಳು

Last Updated 6 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬಾಳೆಬೈಲು (ತೀರ್ಥಹಳ್ಳಿ,ಶಿವ­ಮೊಗ್ಗ ಜಿಲ್ಲೆ): ನಂದಿತಾ ಸಾವಿನ ಪ್ರಕರಣದ ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು ಪ್ರಕರಣದ ಸುತ್ತ ಸೃಷ್ಟಿಯಾಗಿರುವ ಹಲವು ಗೊಂದಲ­ಗಳ ನಿವಾರಣೆಗೆ ಗುರು­ವಾರವೂ ಹೆಚ್ಚಿನ ಪ್ರಾಶಸ್ತ್ಯ ನೀಡಿದರು.

ಸಿಐಡಿ ಅಧಿಕಾರಿಗಳನ್ನು ಕಾಡಿದ ಪ್ರಶ್ನೆಗಳು
*ಅ.30ರಂದು ಬೆಳಿಗ್ಗೆ ಶಾಲೆಗೆ ತೆರಳಿದ್ದು, ಅಪಹರಣವಾಗುವ ಮುನ್ನ ಜತೆಗಿದ್ದ ಸಹಪಾಠಿ, ಸಂಬಂಧಿ (ನಂದಿತಾ ತಂದೆ ಟಿ.ಜಿ.ಕೃಷ್ಣ ಅವರ ತಂಗಿಯ ಮಗ) ಕುಶಾಲ್‌ಗೆ ‘ಮುಂದೆ ಹೋಗಿರು, ಬರು­ತ್ತೇನೆ’ ಎಂದು ಹೇಳಿದ ನಂದಿತಾ ಹಿಂದೆಯೇ ಉಳಿದು­ಕೊಂಡಿದ್ದು ಏಕೆ?

*ಅಪಹರಣವಾದ ನಂತರ ಆನಂದ­­ಗಿರಿ ಗುಡ್ಡದಲ್ಲಿ ಮೊದಲು ಕಾಣಿಸಿ­ಕೊಂಡಿದ್ದು, ಕಟ್ಟಿಗೆ ತರಲು ಹೋಗಿದ್ದ ಕಮಲಮ್ಮ ಅವರ ಕಣ್ಣಿಗೆ.

ಕಮಲಮ್ಮ ಗುಡ್ಡ ಹತ್ತಿ ಹೋದಾಗ ಅಲ್ಲಿ ಇದ್ದದ್ದು ನಂದಿತಾ ಒಬ್ಬಳೇ. ಕಮಲಮ್ಮ ಬರುವ ಸಾಕಷ್ಟು ಸಮಯ ಮೊದಲೇ ಅಪರಾಧಿ­ಗಳು ಆಕೆಯನ್ನು ಗುಡ್ಡದ ಮೇಲೆ ಬಿಟ್ಟು ಪರಾರಿಯಾದದ್ದು ಏಕೆ?

*ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ ಕಮಲಮ್ಮ ನಂತರ ನಂದಿತಾ ಮನೆಯವರಿಗೆ ವಿಷಯ ತಿಳಿಸಿ, ಆಕೆಯನ್ನು

ನಂದಿತಾ ಸಾವು–ಬದುಕಿನ ನಡುವೆ ಇದ್ದಳು...
ನಂದಿತಾ ಪ್ರಾಥಮಿಕ ಚಿಕಿತ್ಸೆಗಾಗಿ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ತಂದಾಗ ‘ಕೆಲವರು ಬಲವಂತ­ವಾಗಿ ನೀರಿನಲ್ಲಿ ಏನೋ ಹಾಕಿ ಕುಡಿಸಿ­ದರು’ ಎಂದು ಹೇಳಿಕೆ ನೀಡಿದರೂ ಪೊಲೀಸರಿಗೆ ಮಾಹಿತಿ ನೀಡದ ವೈದ್ಯಾಧಿಕಾರಿ ಡಾ.ಗಿರೀಶ್‌ ಅವರನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರ­ಣೆಗೆ ಒಳಪಡಿಸಿದರು.‘ಅಂದು ನಂದಿತಾ ಸಾವು–ಬದುಕಿನ ನಡುವೆ ಸೆಣಸು­ತ್ತಿದ್ದಳು.  ಹಾಗಾಗಿ, ಪ್ರಾಥಮಿಕ ಚಿಕಿತ್ಸೆ ನೀಡಿದ ಕೂಡಲೇ, ಸುಸಜ್ಜಿತ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಶಿಫಾರಸು ಮಾಡಿದೆ. ಆ ಗಡಿಬಿಡಿಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ’ ಎಂದು ಡಾ.ಗಿರೀಶ್‌ ಪ್ರತಿಕ್ರಿಯೆ ನೀಡಿದರು. ಈ ನಡುವೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ ನಾಯ್ಕ ಘಟನೆ ಮತ್ತು ವೈದ್ಯರ ನಿರ್ಲಕ್ಷ್ಯ ಕುರಿತಂತೆ ವರದಿ  ಸಲ್ಲಿಸಿದ್ದಾರೆ.

ಕಳುಹಿಸಿಕೊಟ್ಟ ನಂತರ ಮನೆ­ಯವರು ವಿಷಯ ಮುಚ್ಚಿಟ್ಟದ್ದು ಏಕೆ?

*ಮನೆಗೆ ಹೋದಾಗ ಆರೋಗ್ಯ­ವಾಗಿಯೇ ಇದ್ದ ನಂದಿತಾಗೆ ಸಂಜೆಯ ನಂತರ ವಾಂತಿ ಆರಂಭವಾಗಿದ್ದು ಏಕೆ? ಹಲವು ಬಾರಿ ವಾಂತಿಯಾಗಿ ಆಕೆ ಬಳಲಿದರೂ, ಬೆಳಿಗ್ಗೆವರೆಗೆ ಪೋಷಕರು ಆಕೆಯನ್ನು ಏಕೆ ಆಸ್ಪತ್ರೆಗೆ ಕರೆದು­ಕೊಂಡು ಹೋಗಲಿಲ್ಲ?

*ತೀರ್ಥಹಳ್ಳಿಯ ಜಯಚಾಮ­ರಾಜೇಂದ್ರ ಸಾರ್ವಜನಿಕ ಆಸ್ಪತ್ರೆಗೆ ನಂದಿತಾ­ಳನ್ನು ಕರೆದುಕೊಂಡು ಹೋದಾಗ ಆಕೆ, ‘ಕೆಲವರು ಬಲವಂತದಿಂದ ನೀರಲ್ಲಿ ಏನೋ ಹಾಕಿ ಕುಡಿಸಿದರು’ ಎಂದು ನೀಡಿದ ಹೇಳಿಕೆ ಬರೆದುಕೊಂಡ ನಂತರವೂ ಆ ವೈದ್ಯರು, ಪೊಲೀಸರಿಗೆ ಏಕೆ ಮಾಹಿತಿ ನೀಡಲಿಲ್ಲ?

*ಮಣಿಪಾಲದ ವೈದ್ಯರು ಅತ್ಯಾ­ಚಾರದ ಯತ್ನವೇ ನಡೆದಿಲ್ಲ ಎಂದು ಯಾವ ಆಧಾರದಲ್ಲಿ ವರದಿ ನೀಡಿ­ದರು. ಅಂದು ಆಕೆ ಧರಿಸಿದ್ದ ಬಟ್ಟೆ, ಜೊತೆ­ಗಿದ್ದ ನೀರಿನ ಬಾಟಲ್‌ ಏನಾಯಿತು?

*ಆಕೆ ಮೃತಪಟ್ಟ ನಂತರ ದೂರು ದಾಖಲಿಸಲು  7–8 ಗಂಟೆ ಏಕೆ ವಿಳಂಬ ಮಾಡಲಾಯಿತು?
*ಈ ಪ್ರಕರಣ ಅಷ್ಟೊಂದು ಸೂಕ್ಷ್ಮ­ವಾಗಿದ್ದರೂ ಮೃತ ದೇಹ ಸುಡುವುದನ್ನು ಸ್ಥಳೀಯ ಪೊಲೀಸರು ಅಥವಾ ಸಂಬಂಧಿಸಿ­­ದವರು ಏಕೆ ತಡೆಯಲಿಲ್ಲ?

ಇಂತಹ ಪ್ರಶ್ನೆಗಳನ್ನು ಮುಂದಿಟ್ಟು­ಕೊಂಡು ಸಿಐಡಿ ತಂಡ ವಿಚಾರಣೆ ನಡೆಸಿತು. ನಂದಿತಾ ಅಪಹರಣಕ್ಕೆ ಒಳಗಾದ ಬಾಳೆಬೈಲಿನ ಮುಖ್ಯ ರಸ್ತೆ, ಆನಂದಗಿರಿ ಗುಡ್ಡ, ಆಕೆಯನ್ನು ಮೊದಲು ನೋಡಿದ ಮಹಿಳೆಯ ಮನೆ, ನಂದಿತಾ ಮನೆ, ಆಕೆಯನ್ನು ಮೊದಲು ಚಿಕಿತ್ಸೆಗಾಗಿ ದಾಖಲಿಸಿದ ಜಯಚಾಮ­ರಾಜೇಂದ್ರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅಧಿಕಾರಿಗಳು ಕೆಲ ಮಹ­ತ್ವದ ವಿವರಗಳನ್ನು ಕಲೆ ಹಾಕಿದರು.

ನಂದಿತಾ ತಾಯಿ ವಿಮಲಾ, ತಂದೆ ಟಿ.ಜಿ.ಕೃಷ್ಣ, ಪ್ರಮುಖ ಸಾಕ್ಷಿ ಕಮಲಮ್ಮ, ಜಯಮ್ಮ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಿರೀಶ್‌, ನಂದಿತಾ ಅಜ್ಜಿ ಹಾಗೂ ಸಂಬಂಧಿಗಳನ್ನು ವಿಚಾರಣೆಗೆ ಒಳಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT