ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿತಾ ಸಾವು: ಆರೋಪಿಗಳ ಸೆರೆ?

Last Updated 7 ನವೆಂಬರ್ 2014, 19:52 IST
ಅಕ್ಷರ ಗಾತ್ರ

ಶಿವಮೊಗ್ಗ: ತೀರ್ಥಹಳ್ಳಿಯ ಶಾಲಾ ಬಾಲಕಿ ನಂದಿತಾ ಪ್ರಕರಣಕ್ಕೆ ಸಂಬಂ­ಧಿಸಿ­ದಂತೆ ತನಿಖೆ ಮತ್ತಷ್ಟು ಚುರುಕು­ಗೊ­ಳಿಸಿ­ರುವ ಸಿಐಡಿ ಅಧಿ ಕಾರಿಗಳ ತಂಡ ಕೆಲವು ಮಹತ್ವದ ಮಾಹಿತಿ ಕಲೆ ಹಾಕಿದೆ.

ಮೊದಲ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿಕೊಂಡ ಪೊಲೀ­ಸರು, ನಂದಿತಾ ಪೋಷಕರು ಹೆಸರಿಸಿದ ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಅವರ ಮೊಬೈಲ್‌ ಕರೆಗ ಳನ್ನು ಪರಿ­ಶೀಲಿ­ಸಿ­ದ್ದಾರೆ. ಘಟನೆಯಂದು, ಅಂದರೆ ನಂದಿತಾ­­­ಳನ್ನು ಆನಂದಗಿರಿ ಗುಡ್ಡಕ್ಕೆ ಅಪ­ಹರಿಸಿ ಕೊಂಡು ಹೋಗಿದ್ದರು ಎಂದು ಪೋಷ­ಕರು ಸಂಶಯ ವ್ಯಕ್ತ­ಪಡಿಸಿದ ಮೂವ­ರಲ್ಲಿ ಇಬ್ಬರು ಘಟನೆ ನಡೆದ ದಿನ ಆ ಸ್ಥಳದಲ್ಲೇ ಇರಲಿಲ್ಲ ಎಂಬ ಮಾಹಿತಿ ತನಿ­ಖೆಯ ವೇಳೆ ಅಧಿಕಾರಿ­ಗಳಿಗೆ ದೊರೆತಿದೆ.

ಹಾಗಾಗಿ, ಮುಖ್ಯ ಆರೋಪಿ ಎಂದು ಶಂಕಿಸಲಾಗಿ ರುವ ಯುವಕ­ನಿಂದ  ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಆತ­ನನ್ನು ತೀವ್ರ ವಿಚಾರಣೆಗೆ ಒಳ­ಪಡಿ­ಸಲು ಸಿಐಡಿ ಅಧಿಕಾ ರಿಗಳು ಮುಂದಾಗಿದ್ದಾರೆ.

ಅಲ್ಲದೇ, ಈ ಪ್ರಕರಣದಲ್ಲಿ ಪೋಷ­ಕರ ಪಾತ್ರದ ಬಗ್ಗೆಯೂ ಹೆಚ್ಚಿನ ವಿಚಾ­ರಣೆ ಕೈಗೊಂಡಿದ್ದು, ಪೋಷಕರು ದೂರು ನೀಡುವುದಕ್ಕೂ ಮುನ್ನ ಪ್ರಕರಣ ನಿರ್ವಹಿಸಿದ ರೀತಿ, ಅವರ ನಡ­ವಳಿಕೆ, ಸಾರ್ವ­ಜನಿಕ­­ವಾಗಿ ನೀಡಿದ ವ್ಯತಿ­­ರಿಕ್ತ ಹೇಳಿಕೆ­­ಗಳ  ಆಧಾರ­­ದಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.  ನಂದಿತಾ ತಾಯಿ ಹಾಗೂ ತಂದೆ­ ಯನ್ನು ಅವರ ಮನೆ­ಯಲ್ಲೇ  ಪ್ರತ್ಯೇ­ಕ­ವಾಗಿ ಒಂದು ತಾಸಿಗೂ ಹೆಚ್ಚು ಸಮಯ ವಿಚಾರಣೆಗೆ ಒಳಪಡಿಸಿ­ದ್ದಾರೆ. ಆಕೆಯ ಶಾಲಾ ಸಹಪಾಠಿಗಳು, ಶಿಕ್ಷಕ­ರಿಂದಲೂ ವಿಷಯ ಸಂಗ್ರಹಿಸಿ­ದ್ದಾರೆ.

ನಂದಿತಾಳದ್ದೇ ಕೈ ಬರಹ?
ನಂದಿತಾ ಸಾವಿಗೂ ಮುನ್ನ ಬರೆದಿ­ದ್ದಾಳೆ ಎನ್ನ­ಲಾದ ಪತ್ರದಲ್ಲಿ ಇರು­ವುದು ಆಕೆಯ ಬರವಣಿಗೆ ಎಂದು ಬೆಂಗ­ಳೂರಿನ ಮಡಿವಾಳದಲ್ಲಿರುವ ವಿಧಿ­ವಿಜ್ಞಾನ ಪ್ರಯೋಗಾಲಯ ಖಚಿತ ಪಡಿ­ಸಿದೆ. ಅವಳು ಅಂತಹ ಮನಸ್ಥಿತಿ ತಲು­­ಪಲು ‘ಅಪಹರಣ’ ಕಾರಣವೇ, ಅದರ ಹಿಂದೆ ಯಾರಿದ್ದಾರೆ ಎನ್ನುವ ಅಂಶದ ಬಗ್ಗೆ ಈಗ ಗಮನ ಕೇಂದ್ರೀಕರಿಸ­ಲಾ­ಗು­ತ್ತಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಆತ್ಮಹತ್ಯೆ ಪತ್ರ ನಂದಿತಾಳದ್ದಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಒಪ್ಪುವುದಿಲ್ಲ ಎಂದು ನಂದಿತಾ ತಂದೆ ಟಿ.ಜಿ.ಕೃಷ್ಣ ಪುನರುಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT