ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲು ಚೀಟಿ ನೀಡಲು ವಿಫಲ

ವಿಜಯಪುರ ಜಿಲ್ಲೆಯ ವಿವಿಧೆಡೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ
Last Updated 31 ಮಾರ್ಚ್ 2015, 6:07 IST
ಅಕ್ಷರ ಗಾತ್ರ

ಸಿಂದಗಿ: ತಾಲ್ಲೂಕಿನ 8 ಕೇಂದ್ರಗಳಲ್ಲಿ ಒಟ್ಟು 4535 ವಿದ್ಯಾರ್ಥಿಗಳು ಮಂಗಳವಾರ ಎಸ್‌ಎಸ್‌ಎಲ್‌ಸಿ ಕನ್ನಡ ಭಾಷೆ ಪರೀಕ್ಷೆ ಬರೆದರು.
ಒಟ್ಟು 80 ಶಾಲೆಗಳಲ್ಲಿ ನಡೆದ ಪರೀಕ್ಷೆಯಲ್ಲಿ 2567 ಬಾಲಕರು ಮತ್ತು 1968 ಬಾಲಕಿಯರು ಹಾಜರಿದ್ದರು. ತಾಲ್ಲೂಕಿನ ಆಲಮೇಲ ಎ.ಕೆ.ನಂದಿ ಶಾಲೆ, ಕಲಕೇರಿ ಆದರ್ಶ ಶಾಲೆ, ಉರ್ದು ಶಾಲೆ, ಹಿಟ್ನಳ್ಳಿ ಜಗದಂಬಾ ಶಾಲೆ, ದೇವರಹಿಪ್ಪರಗಿ ಬಿಎಲ್‌ಡಿಇ ಶಾಲೆ, ಮೋರಟಗಿ ಸಿದ್ದರಾಮೇಶ್ವರ ಶಾಲೆ ಹೀಗೆ ಏಳು ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.

ಎಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ಪಾರದರ್ಶಕವಾಗಿ ನಡೆದಿದ್ದು, ಯಾವ ವಿದ್ಯಾರ್ಥಿಯೂ ಡಿಬಾರ್‌ ಆಗಿಲ್ಲ ಎಂದು ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎ. ಹೊಸೂರ ‘ಪ್ರಜಾವಾಣಿ’ ಗೆ ತಿಳಿಸಿದರು.

226 ವಿದ್ಯಾರ್ಥಿಗಳು ಗೈರು
ಬಸವನಬಾಗೇವಾಡಿ: ತಾಲ್ಲೂಕಿನ 16 ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 4305 ವಿದ್ಯಾರ್ಥಿಗಳು ಕನ್ನಡ ಭಾಷೆ ಪರೀಕ್ಷೆ ಬರೆದರು.

ಪರೀಕ್ಷೆ ಬರೆಯಬೇಕಿದ್ದ ಒಟ್ಟು 4531 ವಿದ್ಯಾರ್ಥಿಗಳ ಪೈಕಿ 140 ಬಾಲಕರು ಮತ್ತು 86 ಬಾಲಕಿಯರು ಸೇರಿ ಒಟ್ಟು 226 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ಗುಳೇದಗುಡ್ಡ ತಿಳಿಸಿದ್ದಾರೆ.  ಬಸವನಬಾಗೇವಾಡಿಯ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ ಸೇರಿದಂತೆ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಹೊರಗಿನಿಂದ ನಕಲು ಪೂರೈಸಲು ಯತ್ನಿಸಿದ ಘಟನೆಯೂ ನಡೆಯಿತು. ಆದರೆ, ಇದಕ್ಕೆ ಸ್ಥಳದಲ್ಲಿದ್ದ ಪೊಲೀಸರು ಅವಕಾಶ ನೀಡಲಿಲ್ಲ.

10 ವಿದ್ಯಾರ್ಥಿಗಳು ಗೈರು
ನಿಡಗುಂದಿ(ಆಲಮಟ್ಟಿ): ಇಲ್ಲಿನ ನ್ಯೂ ಇಂಗ್ಲೀಷ್‌ ಪ್ರೌಢಶಾಲೆ ಹಾಗೂ ಜಿವಿವಿಎಸ್‌ ಪರೀಕ್ಷಾಕೇಂದ್ರದಲ್ಲಿ ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಪ್ರರೀಕ್ಷೆಯಲ್ಲಿ ಒಟ್ಟು 480 ವಿದ್ಯಾರ್ಥಿಗಳು ಕನ್ನಡ ಭಾಷೆ ಪರೀಕ್ಷೆ ಬರೆದರು.

ನ್ಯೂ ಇಂಗ್ಲಿಷ್‌ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 226 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಪರೀಕ್ಷಾ ಕೇಂದ್ರದ ಅಧೀಕ್ಷಕ ಐ.ಡಿ. ರಾಠೋಡ ಹೇಳಿದರು. ಜಿವಿವಿಎಸ್ ಪರೀಕ್ಷಾ ಕೇಂದ್ರದಲ್ಲಿ 254 ವಿದ್ಯಾರ್ಥಿಗಳ ಪೈಕಿ 240 ವಿದ್ಯಾರ್ಥಿಗಳು ಮಾತ್ರ ಹಾಜರಿದ್ದರು.

ಸಿಸಿಟಿವಿ ಕ್ಯಾಮೆರಾ ಇಲ್ಲ: ನಿಡಗುಂದಿಯ ಜಿವಿವಿಎಸ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡುಸುವುದಾಗಿ ಶಿಕ್ಷಣ ಇಲಾಖೆ ಹೇಳಿತ್ತು. ಆದರೆ ಇರುವ 11 ಪರೀಕ್ಷಾ ಕೊಠಡಿಗಳಲ್ಲಿ ಆರು ಕೊಠಡಿಗಳಲ್ಲಿ ಮಾತ್ರ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಎಂ.ಎಸ್. ಸ್ಥಾವರಮಠ ತಿಳಿಸಿದರು. ಪರೀಕ್ಷಾ ಕೇಂದ್ರದ ಸುತ್ತಲೂ ಪೊಲೀಸ ಬಂದೋಬಸ್ತ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT