ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ರೈಲು ಸಂಚಾರಕ್ಕೆ 150 ವರ್ಷ

ಅಪರೂಪದ ಛಾಯಾಚಿತ್ರ ಪ್ರದರ್ಶನ
Last Updated 30 ಜನವರಿ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ರೈಲು ಸಂಚಾರ ಆರಂಭವಾಗಿ 150 ವರ್ಷ ಸಂದಿ­­ರುವ ಪ್ರಯುಕ್ತ ರೈಲ್ವೆ ಇಲಾ­ಖೆಯ ವತಿಯಿಂದ ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ಛಾಯಾಚಿತ್ರ ಪ್ರದರ್ಶನ ಆರಂಭಗೊಂಡಿದೆ.

‘ಪ್ರದರ್ಶನ ಎರಡು ದಿನಗಳ ಹಿಂದೆ ಆರಂಭವಾಗಿದ್ದು, ಸಾವಿರಾರು ಪ್ರಯಾ­ಣಿಕರು ಪ್ರದರ್ಶನ ವೀಕ್ಷಿಸಿದ್ದಾರೆ. ಶನಿ­ವಾರ ರಾತ್ರಿ 8 ಗಂಟೆವರೆಗೆ ಪ್ರದ­ರ್ಶನ ಮುಂದುವರಿಯಲಿದೆ. ಪ್ರದರ್ಶನ­ದಲ್ಲಿ ಅಪರೂಪದ 65 ಛಾಯಾ­ಚಿತ್ರಗಳು ಇವೆ’ ಎಂದು ಹಿರಿಯ ವಿಭಾ­ಗೀಯ ವ್ಯವಸ್ಥಾಪಕ (ವಾಣಿಜ್ಯ) ಡಾ.­ಅನೂಪ್‌ ದಯಾನಂದ್‌ ಸಾಧು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘150 ವರ್ಷದ ಸಂಭ್ರಮದ ಅಂಗ­ವಾಗಿ ವರ್ಷಪೂರ್ತಿ ಪ್ರಬಂಧ ಸ್ಪರ್ಧೆ, ಚಿತ್ರರಚನಾ ಸ್ಪರ್ಧೆ ಮತ್ತಿತರ ಕಾರ್ಯ­ಕ್ರಮ­­ಗಳನ್ನು ಹಮ್ಮಿಕೊಳ್ಳ­ಲಾಗುವುದು’ ಎಂದು ಅವರು ತಿಳಿಸಿದರು.

‘ಬೆಂಗಳೂರು ಕಂಟೋನ್ಮೆಂಟ್‌ ರೈಲು ನಿಲ್ದಾಣ– ಜೋಲಾರ್‌ಪೇಟೆ ನಡುವೆ ರೈಲು ಸಂಚಾರ 1864ರ ಆಗಸ್ಟ್ 1ರಂದು ಆರಂಭವಾಗಿತ್ತು. 1882ರಲ್ಲಿ ಬೆಂಗಳೂರು ನಗರ ರೈಲು ನಿಲ್ದಾಣಕ್ಕೆ ಮಾರ್ಗ ವಿಸ್ತರಣೆಯಾ­ಗಿತ್ತು. ಕೇಂದ್ರ ರೈಲು ನಿಲ್ದಾಣ ನಿರ್ಮಾಣವಾಗಿರುವ ಜಾಗವನ್ನು ಛಲವಾದಿಗಳು ಬ್ರಿಟಿಷರಿಗೆ ದಾನವಾಗಿ ನೀಡಿದ್ದರು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT