ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಂದ್ರರ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

Last Updated 29 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಸಿದ್ದಾಪುರ (ಉತ್ತರ ಕನ್ನಡ): ‘ಇಂಡಿಯನ್ ಗೋಲ್ಡನ್ ಡಿಜಿಟಲ್ ಸರ್ಕಿಟ್- 2014’ ಎಂಬ ಅಂತರ­ರಾಷ್ಟ್ರೀಯ ಛಾಯಾಚಿತ್ರ  ಸ್ಪರ್ಧೆಯ ಕಲಾತ್ಮಕ ವರ್ಣಚಿತ್ರ  ವಿಭಾಗದಲ್ಲಿ ತಾಲ್ಲೂಕಿನ ನಾಗೇಂದ್ರ ಮುತ್ಮುರ್ಡು ಅವರ ‘ಚಿಮ್ಮಿದ ಖುಶಿ ಚಿಲುಮೆ- 3’  ಎಂಬ ಶೀರ್ಷಿಕೆಯ ಛಾಯಾಚಿತ್ರಕ್ಕೆ ಅಮೆರಿಕದ  ಫೋಟೋಗ್ರಾಫಿಕ್ ಸೊಸೈಟಿಯ ಚಿನ್ನದ  ಪದಕ ಲಭಿಸಿದೆ.

ಮೂರು ಸ್ಥಳಗಳಲ್ಲಿ ಮತ್ತು ನಾಲ್ಕು ವಿಭಾಗ­ಗಳಲ್ಲಿ ನಡೆಸಲಾಗಿದ್ದ ಈ  ಅಂತರ­ರಾಷ್ಟ್ರೀಯ ಸ್ಪರ್ಧೆಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ದೇಶಗಳ ಛಾಯಾಚಿತ್ರ­ಗಾರರ 7 ಸಾವಿರಕ್ಕೂ ಅಧಿಕ ಚಿತ್ರಗಳು ಇದ್ದವು. ಈ ಸ್ಪರ್ಧೆಯ ‘ಡಿಜಿಫೋಕಸ್ ಕ್ಲಬ್’ ಆವೃತ್ತಿಯ ವರ್ಣಚಿತ್ರ ವಿಭಾಗ­ದಲ್ಲಿ ಭಾರತಕ್ಕೆ ತಲಾ ಒಂದು ಚಿನ್ನ ಹಾಗೂ  ಬೆಳ್ಳಿ ಪದಕ ಬಂದಿದೆ. ಇದರಲ್ಲಿ ನಾಗೇಂದ್ರ ಮುತ್ಮುರ್ಡು ಅವರಿಗೆ ಲಭಿಸಿದ ಚಿನ್ನದ ಪದಕವೂ ಸೇರಿದೆ. 

ರಾಷ್ಟ್ರೀಯ  ಪ್ರಶಸ್ತಿ: ಇದೇ ಸಂದ­ರ್ಭ­ದಲ್ಲಿ ಪಶ್ಚಿಮ ಬಂಗಾಳದ ಅಲಿಪುರ್ದ್ವಾರ್‌­ನಲ್ಲಿ ನಡೆದ ರಾಷ್ಟ್ರ­ಮಟ್ಟದ ಇನ್ನೊಂದು ಸ್ಪರ್ಧೆ­ಯಲ್ಲಿಯೂ ನಾಗೇಂದ್ರ ಮುತ್ಮುರ್ಡು ಅವರ ಇದೇ ಚಿತ್ರಕ್ಕೆ  ಚಿನ್ನದ ಪದಕ ಲಭಿಸಿದೆ. ಇಲ್ಲಿ ನಾಗೇಂದ್ರ ಅವರ 16 ಚಿತ್ರಗಳಲ್ಲಿ 15  ಚಿತ್ರಗಳು ಪ್ರದ­ರ್ಶನಕ್ಕೆ ಆಯ್ಕೆಯಾಗಿವೆ.

‘ಚಿಮ್ಮಿದ ಖುಷಿ ಚಿಲುಮೆ’ಯ ಸರಣಿ ಚಿತ್ರಗಳು- ಈವರೆಗೆ ಏಳು ವಿವಿಧ ದೇಶ­ಗಳಲ್ಲಿ ನಡೆದ ಸ್ಪರ್ಧೆಗಳೂ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ 40ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಪ್ರದರ್ಶನ ಕಂಡಿದ್ದು, 8 ಪ್ರಶಸ್ತಿಗಳನ್ನು ಪಡೆದುಕೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT