ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

-ನಾಡಗೀತೆಗೆ ನಿರ್ದಿಷ್ಟ ಧಾಟಿ ಗುರುತಿಸಿ

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

೨೦೦೩ರಲ್ಲಿ ಕುವೆಂಪು ವಿರಚಿತ ‘ಜೈ ಭಾರತ ಜನನಿಯ ತನುಜಾತೆ’ ಕವನವನ್ನು ನಾಡಗೀತೆಯಾಗಿ ಘೋಷಿಸಿ  ಸರ್ಕಾರ ಆದೇಶ ಹೊರಡಿಸಿತು. ನಂತರ ನಾಡಗೀತೆಯ ಧಾಟಿಗೆ ಸಂಬಂಧಿಸಿದಂತೆ, ಸಾಹಿತಿಗಳು ಹಾಗೂ ಸುಗಮ ಸಂಗೀತ ಕಲಾವಿದರ ಮನವಿ ಮೇರೆಗೆ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಗೀತ ನಿರ್ದೇಶಕರಾದ ಎಚ್.ಕೆ. ನಾರಾಯಣ, ವಸಂತ ಕನಕಾಪುರ, ಕವಿ ಸಿದ್ಧಲಿಂಗಯ್ಯ ಮುಂತಾ­ದ­ವರನ್ನು ಒಳಗೊಂಡ  ಸಮಿತಿ ರಚಿಸಿತು.

ಈ ಸಮಿತಿ ಈ ಬಗ್ಗೆ ಕೆಲವು ಶಿಫಾರಸು ಮಾಡಿ­ದೆ. ಆದರೆ ಸರ್ಕಾರವು ಈ ಶಿಫಾರಸು ಅಂಗೀಕರಿಸದೆ ಹಿರಿಯ ಸಂಗೀತ ವಿದ್ವಾಂಸ ವಸಂತ ಕನಕಾ­ಪುರ ಅವರ ಅಧ್ಯಕ್ಷತೆಯಲ್ಲಿ  ಮತ್ತೊಂದು ಸಮಿತಿಯನ್ನು ೨೦೧೩ರಲ್ಲಿ ರಚಿಸಿತ್ತು. ಈ ಸಮಿತಿ ಅಂತಿಮ ವರದಿ ಕೊಡುವ ಮುನ್ನವೇ ಕನಕಾಪುರ ಅವರು ತೀರಿಕೊಂಡರು.

ನಂತರ  ಚೆನ್ನವೀರ ಕಣವಿ­ಯವರ ಅಧ್ಯಕ್ಷತೆ­ಯಲ್ಲಿ ಸಮಿತಿ ಮುಂದುವರಿಸಿ ಆದೇಶ ಹೊರಡಿಸಿತ್ತು.  ಈ ಸಮಿತಿ ನಾಡಗೀತೆ­ಯನ್ನು ಹಾಡುವ ಧಾಟಿ ಬಗ್ಗೆ ೨೦೧೪ರ ಮೇ ತಿಂಗಳಿನಲ್ಲಿಯೇ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದೆ. ಆದರೆ ಸರ್ಕಾರ­ದಿಂದ ಈ ಬಗ್ಗೆ ಇದುವರೆಗೂ ಯಾವುದೇ ನಿರ್ಧಾರ ಹೊರಬಂದಿಲ್ಲ.
–ವೈ.ಕೆ.ಮುದ್ದುಕೃಷ್ಣ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT