ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಹಬ್ಬದಲ್ಲಿ ‘ಕರ್ನಾಟಕದ ಗತ ವೈಭವ’ ಪ್ರದರ್ಶನ

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾದಲ್ಲಿ ‘ಕರ್ನಾ ಟಕದ ಗತವೈಭವ’ ಅನಾವರಣ ಗೊಳ್ಳಲಿದೆ. ಪ್ರಾಚ್ಯ ವಸ್ತುಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ವತಿಯಿಂದ ಇಲ್ಲಿಯ ವಸ್ತುಪ್ರದರ್ಶನ ಆವರಣದಲ್ಲಿರುವ ಇಲಾಖೆಯ ಕಚೇರಿಯೊಳಗಿನ 3 ಗ್ಯಾಲರಿ ಹಾಗೂ ಕಚೇರಿ ಸುತ್ತಲಿರುವ ಪ್ರದೇಶದಲ್ಲಿ ‘ಗತವೈಭವ’ಕ್ಕಾಗಿ ಸಿದ್ಧತೆ ನಡೆದಿದೆ.

ಸೆ. 27ರಂದು ಉದ್ಘಾಟನೆಗೊಳ್ಳುವ ಈ ಪ್ರದರ್ಶನ ಒಟ್ಟು 3 ತಿಂಗಳವರೆಗೆ ಇರುತ್ತದೆ. ಪ್ರದರ್ಶನವನ್ನು 3 ಭಾಗಗಳನ್ನಾಗಿ ವಿಂಗಡಿ ಸಲಾಗಿದೆ. ಮೊದಲ ಭಾಗದಲ್ಲಿ ದಾಖಲೆಗ ಳಿರುತ್ತವೆ. ಕರ್ನಾಟಕವನ್ನು ಆಳಿದ ಶಾತವಾ ಹನರು, ಬಹಮನಿ ಸುಲ್ತಾನರು, ವಿಜಯನಗರ ಅರಸರು, ಬೆಂಗಳೂರಿನ ಕೆಂಪೇಗೌಡ ಅರಸರು, ಮೈಸೂರು ಅರಸರು, ಬೀದರ ಸುಲ್ತಾನರು, ವಿಜಾಪುರದ ಆದಿಲ್‌ಶಾಹಿಗಳು... ಹೀಗೆ 3ನೇ ಶತಮಾನದಿಂದ ಈ ರಾಜ್ಯವನ್ನು ಆಳಿದ ರಾಜಮನೆತನಗಳ ಇತಿಹಾಸದ ಮಾಹಿತಿ ಇರುತ್ತದೆ. ಇವುಗಳಿಗೆ ಪೂರಕವಾಗಿ ಆಯಾ ಕಾಲದ ದೇವಸ್ಥಾನಗಳು, ಅವುಗಳ ಶಿಲ್ಪಕಲೆಯ ಪರಿಚಯ ಇರುತ್ತದೆ.

ಎರಡನೇ ಭಾಗದಲ್ಲಿ ರಾಜಮನೆತನಗಳ ರಾಜಧಾನಿಗಳ ಮಾಹಿತಿ ಇರುತ್ತದೆ. ಅವು; ಲಕ್ಕುಂಡಿ, ಮೇಲುಕೋಟೆ, ಬೇಲೂರು– ಹಳೇಬೀಡು, ಮೈಸೂರು, ಶ್ರೀರಂಗಪಟ್ಟಣ, ಕಿತ್ತೂರು, ವಿಜಾಪುರ, ಬೀದರ್‌, ಗುಲ್ಬರ್ಗ, ನಾಗಾವಿ, ಬಾದಾಮಿ, ಐಹೊಳೆ, ಬನವಾಸಿ, ತಲಕಾಡು, ಬಳ್ಳಿಗಾವಿ, ಮಳಖೇಡ... ಹೀಗೆ ರಾಜ್ಯ ಸರ್ಕಾರ ಘೋಷಿಸಿದ 20 ಪಾರಂಪರಿಕ ಪ್ರದೇಶಗಳ ಇತಿಹಾಸವನ್ನು ಸಾರಲಾಗುತ್ತದೆ. ಜತೆಗೆ, ಅವುಗಳ ಮಹತ್ವವನ್ನು ತಿಳಿಸಲಾಗುತ್ತದೆ. ಮಾದರಿಗೆ ಶ್ರೀರಂಗಪಟ್ಟಣದಲ್ಲಿಯ ಬೇಸಿಗೆ ಅರಮನೆಗಳು, ಮೈಸೂರಿನ ಪಾರಂಪರಿಕ ಕಟ್ಟಡಗಳು.

ಮೂರನೇ ಭಾಗದಲ್ಲಿ ಉತ್ಖನನ ಪರಿಕರಗಳ ಪ್ರದರ್ಶನ ಇರುತ್ತದೆ. ಈಚೆಗೆ ತಲಕಾಡು, ಲಕ್ಕುಂಡಿ ಹಾಗೂ ಹಂಪಿಯಲ್ಲಿ ಉತ್ಖನನ ನಡೆದಿದೆ. ಅಲ್ಲಿ ದೊರಕಿರುವ ಚಾರಿತ್ರಿಕ ಪರಿಕರ ಗಳಾದ ಮಡಕೆ, ಮಣಿಗಳು, ಮೂಳೆಗಳು, ಶಿಲಾಯುಗದ ಕಲ್ಲು ಮೊದಲಾದವುಗಳ ಜತೆಗೆ, ಛಾಯಾಚಿತ್ರಗಳ ಪ್ರದರ್ಶನ ಇರುತ್ತದೆ. ಛಾಯಾಚಿತ್ರಗಳಲ್ಲಿ ಕಾಲ, ರಾಜರ ಮಾಹಿತಿ ಜತೆಗೆ ಶೀರ್ಷಿಕೆಯೂ ಇರುತ್ತದೆ.
‘3 ಭಾಗಗಳ ಪ್ರದರ್ಶನದ ಜತೆಗೆ, ವಿಶ್ವ ಪಾರಂಪರಿಕ ತಾಣಗಳೆಂದು ತಾತ್ಕಾಲಿಕವಾಗಿ ಪಟ್ಟಿಯಲ್ಲಿರುವ ವಿಜಾಪುರ, ಗುಲ್ಬರ್ಗ, ಬೇಲೂರು– ಹಳೇಬೀಡು ಕುರಿತ ವಿವರವುಳ್ಳ ಇತಿಹಾಸದ ಜತೆಗೆ ಛಾಯಾಚಿತ್ರಗಳೂ ಇರಲಿವೆ.

ಇದರೊಂದಿಗೆ ಮಕ್ಕಳಲ್ಲಿ ಹಾಗೂ ಸಾರ್ವ ಜನಿಕರಲ್ಲಿ ಸ್ಮಾರಕಗಳ ಕುರಿತು ಅರಿವು ಮೂಡಿಸಲು ಇಲಾಖೆಯ ಗ್ಯಾಲರಿಯಲ್ಲಿ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. 45 ನಿಮಿಷಗಳ ಕಿರುಚಿತ್ರಗಳನ್ನು ನಿತ್ಯ ಸಂಜೆ 6 ಹಾಗೂ 7 ಗಂಟೆಗೆ ವೀಕ್ಷಿಸಬಹುದು. ಈ ಕಿರುಚಿತ್ರಗಳಲ್ಲಿ ಪಾರಂಪರಿಕ ನಗರವಾದ ಮೈಸೂರು, ಮೈಸೂರು ದಸರಾ ಒಳಗೊಂಡಿವೆ. ಇದರಿಂದ ಸ್ಥಳೀಯರು ಸೇರಿದಂತೆ ರಾಜ್ಯ, ಅಂತರರಾಜ್ಯ ಹಾಗೂ ವಿದೇಶಿ ಪ್ರವಾಸಿಗರಿಗೆ ನಮ್ಮ ನಾಡಿನ ರಾಜಮನೆತನ, ಅವರ ರಾಜಧಾನಿಗಳನ್ನು ಪರಿಚಯಿಸುವುದು ಕರ್ನಾ ಟಕದ ಗತವೈಭವದ ಉದ್ದೇಶ’ ಎಂದು ಪ್ರಾಚ್ಯ ವಸ್ತುಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯ ಆಯುಕ್ತ ಡಾ.ಸಿ.ಜಿ. ಬೆಟಸೂ ರಮಠ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪಾರಂಪರಿಕ ನಡಿಗೆ
ದಸರಾ ಮಹೋತ್ಸವ ಅಂಗವಾಗಿ ಪ್ರಾಚ್ಯ ವಸ್ತುಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯು ಸೆ. 26ರಿಂದ 29ರವರೆಗೆ ಪಾರಂಪರಿಕ ನಡಿಗೆ ಹಾಗೂ ಪಾರಂಪರಿಕ ಸೈಕ್ಲಿಂಗ್‌ ಆಯೋಜಿಸಿದೆ. ‘ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ಪರಿಚಯಿಸುವ ಉದ್ದೇಶದಿಂದ ಸೆ. 26ರಂದು ಬೆಳಿಗ್ಗೆ 7 ಗಂಟೆಗೆ ರಂಗಾಚಾರ್ಲು ಪುರಭವನದಿಂದ ಪಾರಂಪರಿಕ ನಡಿಗೆಯನ್ನು ಹಮ್ಮಿಕೊಳ್ಳ ಲಾಗಿದೆ. 27ರಂದು ಕೂಡಾ ಪಾರಂಪರಿಕ ನಡಿಗೆ ಇರುತ್ತದೆ. ಇದರಲ್ಲಿ ಸಾರ್ವಜನಿಕರು ಭಾಗವಹಿಸುತ್ತಾರೆ. 28ರಂದು ವಿದ್ಯಾರ್ಥಿ ಗಳಿಗೆ ಹಾಗೂ 29ರಂದು ವಿದೇಶಿಗರಿಗೆ ಸೈಕ್ಲಿಂಗ್‌ ಏರ್ಪಡಿಸಲಾಗಿದೆ’ ಎನ್ನುತ್ತಾರೆ ಇಲಾಖೆಯ ಉಪ ಆಯುಕ್ತ ಗವಿಸಿದ್ದಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT