ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ‘ಮಂಡೂಕವಾಣಿ’ ಬಿಡುಗಡೆ

Last Updated 17 ಏಪ್ರಿಲ್ 2015, 19:51 IST
ಅಕ್ಷರ ಗಾತ್ರ

ಬೆಂಗಳೂರು: ಪಶ್ಚಿಮಘಟ್ಟದ ವಿವಿಧ ಜಾತಿಯ ಕಪ್ಪೆಗಳ ಕೂಗನ್ನು ಆಧರಿಸಿದ ವಿಶಿಷ್ಟ ಧ್ವನಿಮುದ್ರಿಕೆ ‘ಮಂಡೂಕ­ವಾಣಿ’ಯನ್ನು ಉಭಯಚರ­ಗಳ ಸಂಶೋ­ಧಕರ ತಂಡವೊಂದು ಸಿದ್ಧಪಡಿಸಿದೆ.

ಪಶ್ಚಿಮಘಟ್ಟದ ಆ ಕಪ್ಪೆಗಳ ಧ್ವನಿ­ಯನ್ನು ವನ್ಯಜೀವಿ ಪ್ರಿಯರು ಇನ್ನು ಮುಂದೆ ಮನೆಯಲ್ಲೇ ಕುಳಿತು ­ಕೇಳ­­ಬಹು­ದಾಗಿದೆ. ಸುಮಾರು 72 ವಿಧದ ಕಪ್ಪೆಗಳ ಮಾಹಿತಿ  ‘ಮಂಡೂಕ­ವಾಣಿ’­ಯಲ್ಲಿ  ಇರಲಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕಪ್ಪೆಗಳ ಕೂಗಿನ ಧ್ವನಿಯನ್ನು ಮುದ್ರಿಸಿಕೊಳ್ಳಲಾಗಿದೆ. ಪ್ರತಿ­ಯೊಂದು ವಿಧದ ಕಪ್ಪೆಯ ಕೂಗೂ ವಿಶಿಷ್ಟ­ವಾಗಿದ್ದು, ಧ್ವನಿಯಲ್ಲೇ ತಮ್ಮ ಗುರು­ತನ್ನು ಹೇಳುತ್ತವೆ. ಆ ಧ್ವನಿ­ಯಿಂ­ದಲೇ ಉಭಯಚರ ತಜ್ಞರು ಈ ಕಪ್ಪೆ ಇಂತಹ ಪ್ರಭೇದಕ್ಕೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚಬಲ್ಲರು.

ಕಪ್ಪೆಗಳ ಮೇಲೆ ಇಂತಹ ಧ್ವನಿ ಮುದ್ರಿಕೆ ತರುತ್ತಿರುವುದು ದೇಶದಲ್ಲಿ ಇದೇ ಮೊದಲು. ಧ್ವನಿಯ ಮೇಲೆಯೇ ಕಪ್ಪೆಗಳ ವರ್ತನೆ ಹಾಗೂ ಅವುಗಳ ಅಗತ್ಯದ ಸುಳಿವು ಸಹ ಸಿಗುತ್ತದೆ ಎನ್ನು­ತ್ತಾರೆ ತಜ್ಞರು. ಈ ಧ್ವನಿಮುದ್ರಿತ ಮಾರ್ಗ­ದರ್ಶಿ ಕ್ಷೇತ್ರ ಕಾರ್ಯದಲ್ಲಿ ತೊಡಗಿದ ವ್ಯಕ್ತಿಗಳಿಗೆ ಕಪ್ಪೆಗಳ ಆವಾಸಸ್ಥಾನಗಳ ಪತ್ತೆಗೂ ನೆರವಾಗಲಿದೆ.

ಉಭಯಚರಗಳ ಸಂಶೋಧಕರಾದ ರಮ್ಯಾ ಬದರಿನಾಥ್‌, ಕೆ.ಎಸ್‌. ಶೇಷಾದ್ರಿ, ಎಸ್‌.ರಮಿತ್‌, ಕೆ.ವಿ. ಗುರುರಾಜ್‌ ಜತೆ­ಯಾಗಿ ಈ ಸಿ.ಡಿಯನ್ನು ಸಿದ್ಧಪಡಿಸಿದ್ದಾರೆ. ರಿಚ್ಮಂಡ್‌ ರಸ್ತೆಯ ‘ಜಾಗ ಸ್ಟಾರ್ಟ್‌ ಅಪ್‌’ನಲ್ಲಿ ಏ. 19­ರಂದು ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕೃಷಿ ವಿ.ವಿ ಪ್ರಾಧ್ಯಾಪಕ ಡಾ. ಎಸ್‌. ಸುಬ್ರಹ್ಮಣ್ಯ ಅವರು ಸಿ.ಡಿ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT