ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಿಕ್‌ ಕುಂಭಮೇಳ ಆರಂಭ

Last Updated 14 ಜುಲೈ 2015, 19:01 IST
ಅಕ್ಷರ ಗಾತ್ರ

ನಾಸಿಕ್‌: ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಮಂಗಳವಾರ ಮಹಾರಾಷ್ಟ್ರದ ನಾಸಿಕ್ ನಲ್ಲಿ ಆರಂಭವಾಗಿದೆ. ಇದಕ್ಕೆ ಗೋದಾವರಿ ನದಿತೀರದ ತ್ರಯಂಬಕೇಶ್ವರ ಕ್ಷೇತ್ರ ಸಜ್ಜಾಗಿದೆ.

2015ರ ಜುಲೈ 14ರಿಂದ 2016ರ ಆಗಸ್ಟ್‌ 11 ರವರೆಗೆ ಈ ಕುಂಭಮೇಳ ಜರುಗಲಿದೆ. ನಾಸಿಕ್‌ನ ರಾಮಕುಂಡದಲ್ಲಿ ಧ್ವಜಾರೋಹಣ ಮೂಲಕ ಮೇಳಕ್ಕೆ ಜಾಲನೆ ನೀಡಲಾಗುವುದು.

ಮೇಳದಲ್ಲಿ ಪ್ರಮುಖ ಆಕರ್ಷಣೆಯಾದ ‘ಶಾಹಿ’ ಸ್ನಾನ ಆಗಸ್ಟ್‌ 29ರಂದು ನಡೆಯಲಿದೆ. ಎರಡನೇ ಮತ್ತು ಬೃಹತ್‌ ಮಟ್ಟದ ಶಾಹಿ ಸ್ನಾನ ಸೆ.13ಕ್ಕೆ ಹಾಗೂ ಮೂರನೇ ಶಾಹಿ ಸ್ನಾನ ಸೆ.18ರಂದು ನಡೆಯಲಿದೆ.

‘ಕುಂಭಮೇಳದಲ್ಲಿ ಸುಮಾರು 4 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಭದ್ರತಾ ವ್ಯವಸ್ಥೆಯ ಭಾಗವಾಗಿ ಉನ್ನತ ಮಟ್ಟದ ನಿಯಂತ್ರಣ ಕೊಠಡಿ ಸ್ಥಾಪನೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ರೈಲ್ವೆ ಪ್ಲಾಟ್‌ಫಾರಂ ನಿರ್ಮಾಣ ಮಾಡಲಾಗಿದೆ.

ಮೇಳದ ಪ್ರಮುಖ ಕಾರ್ಯಕ್ರಮ ಸೆ. 13ರಂದು ನಡೆಯಲಿದ್ದು ಅದಕ್ಕೆ 80 ಲಕ್ಷದಿಂದ 1 ಕೋಟಿ ಭಕ್ತರು ಸೇರುವ ಅಂದಾಜಿದೆ’ ಎಂದು ಮಹಾರಾಷ್ಟ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕುಂಭಮೇಳದ ತಯಾರಿಗಾಗಿ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ನಾಸಿಕ್‌  ಹಾಗೂ ತ್ರಯಂಬಕೇಶ್ವರ ನಗರಸಭೆಗಳು ಒಟ್ಟು  2,300 ಕೋಟಿ ಹಣ ವ್ಯಯ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT