ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರಾವತಿ ತಿರುವು ಯೋಜನೆ ಕೈಬಿಡಿ: ಪೂಜಾರಿ

Last Updated 29 ಜನವರಿ 2014, 19:44 IST
ಅಕ್ಷರ ಗಾತ್ರ

ಮಂಗಳೂರು: ಬರಗಾಲ ಪೀಡಿತ ಜಿಲ್ಲೆ­ಗಳಿಗೆ ನೀರು ಹರಿಸುವ ಪ್ರಯತ್ನದ ಅಂಗ­ವಾಗಿ ನೇತ್ರಾವತಿ ತಿರುವು ಯೋಜನೆ­ಯನ್ನು ಕೈಗೆತ್ತಿಕೊಂಡರೆ ದಕ್ಷಿಣ ಕನ್ನಡ ಜಿಲ್ಲೆಯೇ ಬರಗಾಲ ಪ್ರದೇಶವಾಗಿ ಬದಲಾಗುವ ಅಪಾಯ ಇದೆ. ಹೀಗಾಗಿ ಬೆಂಗಳೂರು ಹೊರವ ಲಯದ ಕೆ.ಆರ್‌.­ಪುರದ ಎಲೆಮಲ್ಲಪ್ಪ ಜಲಾಶ ಯದಿಂದ ಕೋಲಾರಕ್ಕೆ ನೀರು ಹರಿಸುವ ಯೋಜನೆ­ಯನ್ನು ಸರ್ಕಾರ ರೂಪಿಸ­ಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಬುಧವಾರ ಇಲ್ಲಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲೆಮಲ್ಲಪ್ಪ ಜಲಾಶಯದಿಂದ ಕೋಲಾರದ ಪಾಲಾರ್‌ ಜಲಾಶಯಕ್ಕೆ ಪೈಪ್‌ಲೈನ್‌ ಮೂಲಕ ನೀರು ಹರಿಸಿ ನೀರಿನ ಕೊರತೆ ನೀಗಿಸಬಹುದು. 32 ಕಿ.ಮೀ. ಉದ್ದದ ಈ ಪೈಪ್‌ಲೈನ್‌ ಕಾಮಗಾರಿಯನ್ನು ₨ 230 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸ­ಬಹುದು. ಈ ಯೋಜನೆ ಅನುಷ್ಠಾನಕ್ಕೆ ಯಾವುದೇ ತಾಂತ್ರಿಕ ತೊಂದರೆಗಳೂ ಇಲ್ಲ. ರಸ್ತೆ ಪಕ್ಕದಲ್ಲೇ ಪೈಪ್‌ಲೈನ್‌ ಅಳವಡಿಸ­ಬಹುದು. ನೇತ್ರಾವತಿ ನದಿ ತಿರುವು ಯೋಜನೆಗೆ ₨10 ಸಾವಿರ ಕೋಟಿ ವೆಚ್ಚವಾಗಲಿದೆ’ ಎಂದು ಜನಾರ್ದನ ಪೂಜಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT