ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುಭಾಗ್ಯ: ಜಿಲ್ಲೆಗೆ 418 ಘಟಕದ ಗುರಿ

Last Updated 29 ಜುಲೈ 2016, 11:29 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಸಕ್ತ ಸಾಲಿನಲ್ಲಿ ಪಶುಭಾಗ್ಯ ಯೋಜನೆಯಡಿ ಜಿಲ್ಲೆಗೆ ಒಟ್ಟು 418 ಘಟಕಗಳ ಗುರಿ ನಿಗದಿಯಾಗಿದೆ. ಭೂರಹಿತ, ಸಣ್ಣ, ಅತಿಸಣ್ಣ ರೈತರಿಗೆ ಹಸು, ಕುರಿ, ಆಡು, ಹಂದಿ, ಕೋಳಿ ಘಟಕ ಸ್ಥಾಪನೆಗೆ ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಬ್ಯಾಂಕ್ ಮೂಲಕ ಸಾಲ ಲಭಿಸಲಿದೆ. ಮಿಶ್ರತಳಿ ಘಟಕಗಳಿಗೆ ₹ 1.20 ಲಕ್ಷ, ಕುರಿ ಅಥವಾ ಮೇಕೆ ಘಟಕಕ್ಕೆ ₹ 67,400, ಹಂದಿ ಘಟಕಕ್ಕೆ ₹ 94 ಸಾವಿರ, ಕೋಳಿ ಘಟಕಕ್ಕೆ ₹ 85 ಸಾವಿರ ಸಾಲ ದೊರೆಯಲಿದೆ. ಈ ಸಾಲಕ್ಕೆ ಪಶುಪಾಲನಾ ಇಲಾಖೆಯಿಂದ ಸಹಾಯಧನ ಕೂಡ ಲಭಿಸಲಿದೆ.

ಪಶುಭಾಗ್ಯ ಯೋಜನೆಯಡಿ ಇತರೆ ವರ್ಗದ ಜನಾಂಗದವರಿಗೆ ಶೇ 25ರಷ್ಟು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 50ರಷ್ಟು ಸಹಾಯಧನ ಸಿಗಲಿದೆ. ಯೋಜನೆಯಡಿ ಕಾಲಕಾಲಕ್ಕೆ ಘಟಕದ ವೆಚ್ಚ ಅನುಮೋದಿಸುವ ಅಧಿಕಾರವನ್ನು ಇಲಾಖೆಯ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ರಚಿಸಿರುವ ರಾಜ್ಯಮಟ್ಟದ ಮಂಜೂರು ಮತ್ತು ಪರಿವೀಕ್ಷಣಾ ಸಮಿತಿಗೆ ನೀಡಲಾಗಿದೆ.

ಜಿಲ್ಲೆಯಲ್ಲಿ 340 ಹೈನುಗಾರಿಕೆ ಘಟಕ, 29 ಕುರಿ ಅಥವಾ ಮೇಕೆ ಘಟಕ, 40 ಕೋಳಿ ಘಟಕ ಹಾಗೂ 9 ಹಂದಿ ಘಟಕ ಸ್ಥಾಪನೆಗೆ ಯೋಜನೆಯಡಿ ಆರ್ಥಿಕ ನೆರವು ಲಭಿಸಲಿದೆ.
ಚಾಮರಾಜನಗರ ತಾಲ್ಲೂಕಿನಲ್ಲಿ 102 ಹಸು ಘಟಕ, 8 ಕುರಿ ಘಟಕ, 2 ಹಂದಿ ಘಟಕ, 11 ಕೋಳಿ ಘಟಕ ಸೇರಿದಂತೆ ಒಟ್ಟು 123 ಘಟಕಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 81 ಹಸು ಘಟಕ, 7 ಕುರಿ ಘಟಕ, 2 ಹಂದಿ ಘಟಕ  9 ಕೋಳಿ ಘಟಕ ಸೇರಿದಂತೆ ಒಟ್ಟು 99 ಘಟಕ ಆರಂಭಿಸಲು ಗುರಿ ನಿಗದಿಯಾಗಿದೆ. 
ಕೊಳ್ಳೇಗಾಲ ತಾಲ್ಲೂಕಿನಲ್ಲಿ 110 ಹಸು ಘಟಕ, 9 ಕುರಿ ಘಟಕ, 3 ಹಂದಿ ಘಟಕ, 14 ಕೋಳಿ ಘಟಕ ಸೇರಿದಂತೆ ಒಟ್ಟು 136 ಘಟಕಗಳ ಸ್ಥಾಪಿಸಲು ಅವಕಾಶವಿದೆ.

ಯಳಂದೂರು ತಾಲ್ಲೂಕಿಗೆ 47 ಹಸು ಘಟಕ, 5 ಕುರಿ ಘಟಕ, 2 ಹಂದಿ ಘಟಕ  6 ಕೋಳಿ ಘಟಕ ಸೇರಿದಂತೆ ಒಟ್ಟು 60 ಘಟಕಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ.
ಯೋಜನೆಯಡಿ ಹೈನುಗಾರಿಕೆಗೆ ಸಂಬಂಧಪಟ್ಟಂತೆ ಮಂಜೂರು ಪಡೆಯುವ ಎಲ್ಲ ಫಲಾನುಭವಿಗಳು ಕಡ್ಡಾಯವಾಗಿ ಕರ್ನಾಟಕ ಹಾಲು ಮಹಾಮಂಡಳಿಯಲ್ಲಿ ರಚಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಮಿಲ್ಕ್‌ಕ್ರೂಟ್ಸ್ ವ್ಯಾಪ್ತಿಯಲ್ಲಿ ಬರಬೇಕಿರುವುದು ಕಡ್ಡಾಯ.

ಇದು ಬೇಡಿಕೆ ಆಧಾರಿತ ಯೋಜನೆ ಯಾಗಿದೆ. ಅರ್ಹ ಫಲಾನುಭವಿಗಳಿಗೆ ಇಲಾಖೆಯಲ್ಲಿ ಲಭ್ಯವಿರುವ ಅನುದಾನ ದಲ್ಲಿ ನೆರವು ನೀಡುವಂತೆ ಸೂಚಿಸಲಾ ಗಿದೆ. ಅಮೃತ ಯೋಜನೆಯು ಪಶುಭಾಗ್ಯ ಯೋಜನೆಯಡಿ ವಿಲೀನಗೊಂಡಿದೆ. 

ಅಮೃತ ಯೋಜನೆಯ ಮೂಲ ಉದ್ದೇಶದಂತೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ವಿಧವೆಯರು, ದೇವದಾಸಿಯರು, ಸಂಕಷ್ಟಕ್ಕೆ ಒಳಗಾದ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯ ಜಿಲ್ಲಾಮಟ್ಟದ ಆಯ್ಕೆ ಸಮಿತಿಯ ಮೂಲಕ ಅರ್ಹ ಫಲಾನುಭವಿಗಳ ಆಯ್ಕೆಗೆ ಸರ್ಕಾರ ಸೂಚಿಸಿದೆ.
ಜಿಲ್ಲೆಯ ಆಸಕ್ತ ಮತ್ತು ಅರ್ಹ ರೈತರು ಯೋಜನೆಯ ಪ್ರಯೋಜನ ಪಡೆದು ಕೊಳ್ಳಲು ಪಶುಪಾಲನಾ ಇಲಾಖೆಯ ಸಂಬಂಧಿಸಿದ ತಾಲ್ಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಎಲ್ಲ ದಾಖಲೆ ಲಗತ್ತಿಸಿ ಆ. 20ರೊಳಗೆ ಸಲ್ಲಿಸಬೇಕಿದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08226-222757
(ಚಾಮರಾಜನಗರ), 08229-222346 (ಗುಂಡ್ಲುಪೇಟೆ), 08224-252215(ಕೊಳ್ಳೇಗಾಲ), 08226-240128 (ಯಳಂದೂರು) ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT