ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್: ಮರಣದಂಡನೆ ಮೇಲಿನ ನಿಷೇಧ ರದ್ದು

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಪೆಶಾವರ (ಪಿಟಿಐ): ಭಯೋತ್ಪಾದನಾ ಪ್ರಕರಣಗಳಲ್ಲಿ ಭಾಗಿಯಾ­ದವ­ರಿಗೆ ಮರಣದಂಡನೆ ಶಿಕ್ಷೆ ಮೇಲೆ ಹೇರಿದ್ದ ನಿಷೇಧವನ್ನು ಪಾಕಿಸ್ತಾನ ರದ್ದುಪಡಿಸಿದೆ.

ತಾಲಿಬಾನ್‌ ಉಗ್ರರು 132 ಮಕ್ಕಳೂ ಸೇರಿ 148 ಮಂದಿಯನ್ನು ಹತ್ಯೆ ಮಾಡಿದ ಬೆನ್ನಲ್ಲೇ, ಪ್ರಧಾನಿ ನವಾಜ್‌ ಷರೀಫ್‌ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಮರಣ­ದಂಡನೆ ಮೇಲೆ ಹೇರಿದ್ದ ನಿಷೇಧವನ್ನು ರದ್ದುಪಡಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಜಿಯೊ ಟಿ.ವಿ. ವಾಹಿನಿ ತಿಳಿಸಿದೆ.

ತಾಲಿಬಾನ್ ಉಗ್ರರು ಮಂಗಳವಾರ ಸೇನೆಯ ಪಬ್ಲಿಕ್‌ ಶಾಲೆಯ ಮೇಲೆ ನಡೆಸಿದ ದಾಳಿಯನ್ನು ‘ಅನಾಗರಿಕರ ಮೂಲಕ ನಡೆದ ರಾಷ್ಟ್ರೀಯ ದುರಂತ’ ಎಂದು ಸರ್ವಪಕ್ಷಗಳ ಸಭೆ ಖಂಡಿಸಿದೆ.

ಉಗ್ರರ ಕ್ಷಮಾದಾನ ಮನವಿ ತಿರಸ್ಕೃತ: ಮರಣದಂಡನೆ ಶಿಕ್ಷೆ ಮೇಲೆ ಹೇರಿದ್ದ ನಿಷೇಧವನ್ನು ರದ್ದುಪಡಿಸಿದ ಬೆನ್ನಲ್ಲೇ, ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಎಂಟು ಉಗ್ರರ ಕ್ಷಮಾದಾನ ಅರ್ಜಿಗಳನ್ನು ಪಾಕಿಸ್ತಾನ ಅಧ್ಯಕ್ಷ ಮಮ್‌ನೂನ್ ಹುಸೇನ್ ತಿರಸ್ಕರಿಸಿದ್ದಾರೆ. 2012ರಲ್ಲಿ ಈ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT