ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನ್‌ವಾಲನಿಗೆ ರೂ132 ಕೋಟಿ ವಿದ್ಯುತ್‌ ಬಿಲ್‌ ಶಾಕ್‌...

Last Updated 24 ಅಕ್ಟೋಬರ್ 2014, 15:14 IST
ಅಕ್ಷರ ಗಾತ್ರ

ಚಂಡೀಗಡ (ಪಿಟಿಐ): ಹರಿಯಾಣದ ಪಾನ್‌ವಾಲನಿಗೆ ಅಕ್ಟೋಬರ್‌ ತಿಂಗಳ ವಿದ್ಯುತ್‌ ಬಿಲ್‌ ಬಂದಿರುವುದು ಬರೋಬ್ಬರಿ 132 ಕೋಟಿ ರೂಪಾಯಿ.

ಹೌದು, ಗೊಹನ ಪಟ್ಟಣದಲ್ಲಿ ಸಣ್ಣದೊಂದು ಬೀಡಾ ಅಂಗಡಿ ನಡೆಸುತ್ತಿರುವ ರಾಜೀಶ್‌ ಚೌಟಾಲ ಅವರಿಗೆ 132.29 ಕೋಟಿ ರೂಪಾಯಿ ವಿದ್ಯುತ್‌ ಬಿಲ್‌ ಬಂದಿದೆ.

ಇದನ್ನು ಗಮನಿಸಿದ ರಾಜೇಶ್‌ ಸಂಖ್ಯೆಗಳಲ್ಲಿ ತಪ್ಪಾಗಿರಬಹುದು ಎಂದು ಅಕ್ಷರಗಳಲ್ಲಿ ಬರೆದಿರುವುದನ್ನು ನೋಡಿದರೆ ಅಲ್ಲಿಯೂ ಸಹ ನೂರಾ ಮೂವತ್ತೆರಡು ಕೋಟಿ ರೂಪಾಯಿ ಎಂದು ಬರೆಯಲಾಗಿದೆ ಎನ್ನುತ್ತಾರೆ ರಾಜೇಶ್‌.

ನನ್ನ ಚಿಕ್ಕ ಅಂಗಡಿಗೆ ಪ್ರತಿ ತಿಂಗಳು ಸಾವಿರ ರೂಪಾಯಿ ಒಳಗೆ ಮಾತ್ರ ವಿದ್ಯುತ್‌ ಬಿಲ್‌ ಬರುತ್ತದೆ. ಇದನ್ನು ನೋಡಿ ನನಗೆ ಶಾಕ್‌ ಆಗಿದೆ ಎಂದು ರಾಜೇಶ್‌ ಹೇಳುತ್ತಾರೆ.

ಇದು ಉತ್ತರ ಹರಿಯಾಣ ಬಿಜ್ಲಿ ವಿದ್ಯುತ್‌ ಪ್ರಸರಣ ನಿಗಮ (ಯುಎಚ್‌ಬಿವಿಎನ್‌)ದಿಂದ ಆಗಿರುವ ಪ್ರಮಾದವಾಗಿದೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಯುಎಚ್‌ಬಿವಿಎನ್‌ನ ಹಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT