ಬೆಂಗಳೂರು: ನಗರದ ಕಾಡುಮಲ್ಲೇಶ್ವರ ದೇವಾಲಯದ ಆವರಣದಲ್ಲಿರುವ ಪುರಾತನ ಶಿಲಾಶಾಸನ ನಿರ್ವಹಣೆ ಇಲ್ಲದ ಕಾರಣ ಪಾಳು ಬಿದ್ದಿದೆ. 1669ರಲ್ಲಿ ಕೆತ್ತಲಾಗಿದೆ ಎನ್ನಲಾದ ಈ ಶಿಲಾಶಾಸನದ ರಕ್ಷಣೆಗೆಂದು ಕಟ್ಟಿರುವ ಕಟ್ಟಡ ಶಿಥಿಲಗೊಂಡಿದೆ. ಕಟ್ಟಡದ ಮೇಲ್ಭಾಗದಲ್ಲಿ ಗಿಡಗಳು ಬೆಳೆದಿದ್ದು, ಸುತ್ತಲೂ ಕಸ–ಕಡ್ಡಿ ತುಂಬಿಕೊಂಡಿವೆ. ಬಂಡೆ ಮೇಲೆ ಕೆತ್ತಿರುವ ಶಾಸನ ಓದಲು ಸ್ಪಷ್ಟವಾಗಿ ಕಾಣಿಸುವುದಿಲ್ಲ.

ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಕಾಡುಮಲ್ಲೇಶ್ವರ ಗೆಳೆಯರ ಬಳಗ ಪ್ರಾಚ್ಯವಸ್ತು ಹಾಗೂ ಮುಜರಾಯಿ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ, ಸಂಬಂಧಪಟ್ಟವರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಶಿಲಾಶಾಸನದಲ್ಲಿ ಏನಿದೆ?: ಪ್ರಾಚ್ಯವಸ್ತು ಮತ್ತು ವಸ್ತು ಸಂಗ್ರಹಾಲಯ ಇಲಾಖೆ ಶಿಲಾಶಾಸನದ ಹಿಂಬದಿ ಹಾಗೂ ಪಕ್ಕದ ನರಸಿಂಹಸ್ವಾಮಿ ದೇವಸ್ಥಾನದ ಗೋಡೆಯ ಮೇಲೆ ಶಿಲಾಶಾಸನದ ಇತಿಹಾಸ ತಿಳಿಸುವ ಫಲಕ ಹಾಕಿದ್ದು, ಅದರಲ್ಲಿ ಈ ರೀತಿ ಬರೆಯಲಾಗಿದೆ.ಕೆಲವು ಶತಮಾನಗಳ ಹಿಂದೆ ಬೆಂಗಳೂರು ಬಿಜಾಪುರ ಸುಲ್ತಾನರ ವಶದಲ್ಲಿತ್ತು. ಈ ಗ್ರಾಮವು ಮರಾಠ ಸಂಸ್ಥಾನದ ಸಂಸ್ಥಾಪಕ ಶಿವಾಜಿ ಮಹಾರಾಜರ ತಂದೆ ಷಹಜಿಯವರಿಗೆ ಜಹಗೀರಾಗಿ ಕೊಡಲ್ಪಟ್ಟಿತ್ತು.

ಷಹಜಿಯವರ ನಂತರ ಅವರ ಕಿರಿಯ ಮಗ ಎಕ್ಕೋಜಿ (ವೆಂಕೋಜಿ) ರಾಯರ ಪಾಲಿಗೆ ಈ ಗ್ರಾಮವು ಬಂದಿತ್ತು. ಇವರು ಕ್ರಿ.ಶ 1669ನೇ ಇಸವಿಯಲ್ಲಿ ಚೌತಾಯ ವಿದಾಯಿಸುವುದಕ್ಕಾಗಿ ಇಲ್ಲಿಗೆ ಬಂದು ಉದ್ಭವ ಮೂರ್ತಿ ಮಲ್ಲಿಕಾರ್ಜುನಸ್ವಾಮಿ ದರ್ಶನ ಪಡೆದು, ದೇವಸ್ಥಾನದ ಬಳಿ ಇರುವ ಮೇದರನಿಂಗನಹಳ್ಳಿ ಗ್ರಾಮವನ್ನು ಇದಕ್ಕೆ ಮಾನ್ಯವಾಗಿ ಅರ್ಪಿಸಿ ಈ ಬಗ್ಗೆ ದೇವಸ್ಥಾನದ ಪಕ್ಕದಲ್ಲಿದ್ದ ಬಂಡೆಯ ಮೇಲೆ ಶಿಲಾಶಾಸನ ಬರೆಸಿದರು ಎಂದಿದೆ.

ದೇವಸ್ಥಾನಕ್ಕೆ ನೀಡಿರುವ ಜಾಗಕ್ಕೆ ಧಕ್ಕೆಯುಂಟು ಮಾಡಿದವರು ಕತ್ತೆ, ಕಾಗೆಯಾಗಿ ಚಂಡಾಲರ ಜಲ್ಮದಲ್ಲಿ ಹುಟ್ಟುವರು... ಎಂದು ಬಂಡೆ ಮೇಲೆ ಕೆತ್ತಿರುವುದನ್ನು ಫಲಕ ಉಲ್ಲೇಖಿಸಿದೆ. ‘ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ಸುಮಾರು 500 ರಿಂದ 600 ವರ್ಷಗಳ ಇತಿಹಾಸವಿದೆ. ಇದರ ಮಹತ್ವವನ್ನು ಅರಿಯದವರು ದೇವಸ್ಥಾನದ ಸುತ್ತ–ಮುತ್ತಲಿನ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ.

ಶಿಲಾಶಾಸನವಿರುವ ಕಟ್ಟಡಕ್ಕೆ ತಾಗಿಕೊಂಡಂತೆ ಸಾಯಿ ಮಂದಿರ ಕಟ್ಟಲಾಗಿದೆ. ದಕ್ಷಿಣಕ್ಕೆ ನರಸಿಂಹಸ್ವಾಮಿ ದೇವಸ್ಥಾನವಿದ್ದು, ಶಾಸನ ನೋಡಲು ತೆರಳುವ ಜಾಗದಲ್ಲಿಯೇ ಗೋಪುರ ನಿರ್ಮಾಣ ಮಾಡಲಾಗಿದೆ. ಇದು ಹೀಗೆ ಮುಂದುವರಿದಲ್ಲಿ ಶಿಲಾಶಾಸನ ಮರೆಯಾಗುವ ಅಪಾಯವಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಬಿ.ಕೆ. ಶಿವರಾಂ.

‘ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿನ ನಂದಿತೀರ್ಥ ಪರರ ಪಾಲಾಗಿತ್ತು. ಸತತ ಕಾನೂನು ಹೋರಾಟ ನಡೆಸಿ, ಅದರ ಮೂಲರೂಪ ಉಳಿಸಿಕೊಂಡಿದ್ದೇವೆ. ದೇವಸ್ಥಾನದ ಆವರಣದಲ್ಲಿ ಅಕ್ರಮವಾಗಿ ವಾಸವಿದ್ದ ಕುಟುಂಬಗಳನ್ನು ತೆರವುಗೊಳಿಸಿ, ಪವಿತ್ರವನ ನಿರ್ಮಿಸಿದ್ದೇವೆ. ಶಿಥಿಲಗೊಂಡಿದ್ದ ದೇವಾಲಯದ ಮುಖ್ಯದ್ವಾರದ ಮೆಟ್ಟಿಲುಗಳನ್ನು ಮರು ನಿರ್ಮಾಣ ಮಾಡಿದ್ದೇವೆ. ಬೃಹತ್ ರಾಜಗೋಪುರ, ಬ್ರಹ್ಮರಥೋತ್ಸವಕ್ಕೆ ತೇರು ನಿರ್ಮಿಸಿದ್ದೇವೆ. ಆದರೆ ಶಿಲಾಶಾಸನ ಪಾಳು ಬಿದ್ದಿರುವುದು ಬೇಸರ ತರಿಸಿದೆ’ ಎನ್ನುತ್ತಾರೆ ಅವರು.

‘ಬೆಂಗಳೂರಿನ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಇತಿಹಾಸಕಾರರೂ ಈ ಬಗ್ಗೆ ಮೌನ ವಹಿಸಿದ್ದಾರೆ. ಐತಿಹಾಸಿಕ ಶಿಲಾಶಾಸನ ಸಂರಕ್ಷಿಸುವುದು ಸರ್ಕಾರದ ಕರ್ತವ್ಯ. ಸಂಬಂಧಪಟ್ಟವರು ತಕ್ಷಣವೇ ಶಿಲಾಶಾಸನದ ರಕ್ಷಣೆಗೆ ಮುಂದಾಗಬೇಕು’ ಎಂದು ಅವರು ಆಗ್ರಹಿಸುತ್ತಾರೆ.

ಶಿಲಾಶಾಸನದ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಸ್ಥಳೀಯರೂ ಇದನ್ನು ಅಭಿವೃದ್ಧಿಪಡಿಸಲು ಇಲಾಖೆ ಅನುಮತಿ ಕೋರಿದ್ದು, ಈ ಬಗ್ಗೆ ಆಯುಕ್ತರಿಗೆ ಪತ್ರ ಬರೆದಿದ್ದೇವೆ. ಉತ್ತರ ಬಂದ ಕೂಡಲೇ ಕ್ರಮ ಕೈಗೊಳ್ಳುತ್ತೇವೆ.
-ಎಚ್.ಟಿ.ತಳವಾರ್, ಉಪನಿರ್ದೇಶಕ, ಪ್ರಾಚ್ಯವಸ್ತು ಇಲಾಖೆ

17ನೇ ಶತಮಾನದಲ್ಲಿ ಬೆಂಗಳೂರು ಬಿಜಾಪುರ ಸುಲ್ತಾನರ ವಶದಲ್ಲಿತ್ತು. ಷಹಜಿ ಆಳ್ವಿಕೆ ನಡೆಸುತ್ತಿದ್ದ. ಶಿವಾಜಿ ಬಾಲ್ಯದ ಕೆಲವು ವರ್ಷಗಳನ್ನು ಇಲ್ಲಿಯೇ ಕಳೆದಿದ್ದನು. ಇದು ಪುಸ್ತಕಗಳಲ್ಲಿ ದಾಖಲಾಗಿದೆ. ಐತಿಹಾಸಿಕ ಮಹತ್ವವಿರುವ ಶಿಲಾಶಾಸನ ರಕ್ಷಣೆಗೆ ಗಮನ ಹರಿಸುವುದು ಅಗತ್ಯ.
- ಗೋಪಾಲ್ ರಾವ್, ಇತಿಹಾಸ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.