ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ: ಶೇ 60.54 ಫಲಿತಾಂಶ

ರಾಜ್ಯದಲ್ಲಿ 18ನೇ ಸ್ಥಾನ ಪಡೆದ ಜಿಲ್ಲೆ
Last Updated 26 ಮೇ 2016, 8:19 IST
ಅಕ್ಷರ ಗಾತ್ರ

ಹಾವೇರಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯು ಶೇ 60.54 ಫಲಿತಾಂಶ ಪಡೆದು, ರಾಜ್ಯದಲ್ಲಿ 18ನೇ ಸ್ಥಾನ ಪಡೆದಿದೆ. ಈ ಪೈಕಿ ವಾಣಿಜ್ಯ ವಿಭಾಗ ಶೇ 74.21, ಕಲಾ ವಿಭಾಗ ಶೇ 53.78 ಮತ್ತು ವಿಜ್ಞಾನ ವಿಭಾಗವು ಶೇ 53.53 ಫಲಿತಾಂಶ ಪಡೆದಿದೆ. ಕಳೆದ ಬಾರಿ ಜಿಲ್ಲೆಯ ಶೇ 71. 58 ಫಲಿತಾಂಶ ದಾಖಲಿಸುವ ಮೂಲಕ 10ನೇ ಸ್ಥಾನ ಪಡೆದಿತ್ತು. ಈ ಬಾರಿ ಫಲಿತಾಂಶದಲ್ಲಿ ಕುಸಿತ ಕಂಡಿದೆ.

ಹಾವೇರಿಯ ಸೇಂಟ್‌ ಆ್ಯನ್ಸ್ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿ ಟಿ. ಸಂತೋಷಕುಮಾರ್ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಶೇ 95.75 ಅಂಕ ಪಡೆದಿದ್ದಾನೆ.

ಕಾಲೇಜುಗಳ ಫಲಿತಾಂಶ ಹೀಗಿದೆ: ನಗರದ ಶ್ರೀ ಶಿವಲಿಂಗೇಶ್ವರ ಪದವಿ ಪೂರ್ವ ಮಹಿಳಾ ಮಹಾ ವಿದ್ಯಾಲಯದ ಶೇ 62.28 ಫಲಿತಾಂಶ ಪಡೆದಿದೆ. ಹುಕ್ಕೇರಿಮಠದ ಶ್ರೀ ರಾಚೋಟೇಶ್ವರ ವಾಣಿಜ್ಯ ಪದವಿ ಪೂರ್ವ ಕಾಲೇಜು ಶೇ 55.55 ಫಲಿತಾಂಶ ಬಂದಿದೆ. ಹೊಸಮಠದ ಎಸ್.ಜೆ.ಎಂ. ಪದವಿ ಪೂರ್ವ ಕಾಲೇಜು ಶೇ 83.68 ಫಲಿತಾಂಶ ಬಂದಿದೆ.  ವಾಣಿಜ್ಯ ವಿಭಾಗ ಶಿವಂಗವ್ವ ಎನ್.ಕರೆಮ್ಮನವರ (ಶೇ 92.5) ಪಡೆದಿದ್ದಾರೆ. ಹಾವೇರಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಶೇ 64.70 ಫಲಿತಾಂಶ ಪಡೆದಿದೆ.

ರಾಣೆಬೆನ್ನೂರು ವರದಿ
ನಗರದ ಎಕ್ಸಪರ್ಟ್‌ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವರ್ಷಾ ದೇವಗಿರಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 92.5 ರಷ್ಟು ಅಂಕಗಳನ್ನು ಪಡೆದಿದ್ದಾಳೆ.

ಬಿ.ಸಿ.ಪಾಟೀಲ ಕಾಲೇಜು ಫಲಿತಾಂಶ
ಹಿರೇಕೆರೂರ: ತಾಲ್ಲೂಕಿನ ಬಾಳಂಬೀಡ ಗ್ರಾಮದ ಬಿ.ಸಿ.ಪಾಟೀಲ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ವಿಜ್ಞಾನ ವಿಭಾಗದಲ್ಲಿ ಶೇ 50, ವಾಣಿಜ್ಯ ವಿಭಾಗದಲ್ಲಿ ಶೇ 47 ಆಗಿದೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 20 ವಿದ್ಯಾರ್ಥಿಗಳಲ್ಲಿ 10 ಉತ್ತೀರ್ಣರಾಗಿದ್ದಾರೆ. ತೇಜಸ್ವಿನಿ ಕೆಂಚಾಯಿಕೊಪ್ಪ ಶೇ 78.83, ದರ್ಶನ್‌ಕುಮಾರ ಮಾರವಳ್ಳಿ ಶೇ 78.50 ಹಾಗೂ ಸಂಗೀತಾ ಹೊಟ್ಟಿಗೌಡ್ರ ಶೇ 77.50 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 19 ವಿದ್ಯಾರ್ಥಿಗಳ ಪೈಕಿ 9 ತೇರ್ಗಡೆ ಹೊಂದಿದ್ದಾರೆ. ಹೇಮಾವತಿ ಎಸ್‌. ಶೇ 79.50 ಆಶಾ ಬಡ್ಡಿಯವರ ಶೇ 75.50 ಅಂಕ ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ ಎಂದು ಪ್ರಾಚಾರ್ಯ ಶಿವಾನಂದ ಮುದಿಹಾಳ ತಿಳಿಸಿದ್ದಾರೆ.

ಬ್ಯಾಡಗಿ ವರದಿ
ಎಸ್‌ಬಿಎಚ್‌ವಿ ಗ್ರಾಮಾಂತರ ಪ್ರೌಢ ಶಾಲೆ ಮಲ್ಲೂರು ಶೇ 82.69 ಫಲಿತಾಂಶ ಬಂದಿದೆ.
ಸುಧಾ ಹುಡೇದ ಶೇ 94.24, ಪ್ರಿಯಾ ಹೊಂಬರಡಿ ಶೇ 93.92 ಅಂಕಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT