ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನಃ ಸಂಚರಿಸಲಿ

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ವಿಜಯಪುರ ನಗರದಲ್ಲಿ ನಿರ್ದಿಷ್ಟಪಡಿಸಿದ ದಿನಗಳಂದು, ನಿರ್ದಿಷ್ಟಪಡಿಸಿದ ವೇಳೆಯ ಪ್ರಕಾರ ವಿವಿಧ ಬಡಾವಣೆಗಳಲ್ಲಿ  ಸಂಚಾರಿ ಗ್ರಂಥಾಲಯದ ವ್ಯವಸ್ಥೆಯನ್ನು ಗ್ರಂಥಾಲಯ ಇಲಾಖೆ ಕಲ್ಪಿಸಿಕೊಟ್ಟಿತ್ತು. ಇದರಿಂದಾಗಿ ಗೃಹಿಣಿಯರಿಗೆ, ಮಕ್ಕಳಿಗೆ, ಅಸಹಾಯಕರಿಗೆ, ನಿವೃತ್ತರಿಗೆ, ವಯೋವೃದ್ಧರಿಗೆ ತಮ್ಮ ಜ್ಞಾನದ ಹಸಿವೆಯನ್ನು ನೀಗಿಸಿಕೊಳ್ಳಲು ತುಂಬಾ ಉಪಯುಕ್ತವಾಗಿತ್ತು ಮತ್ತು ಗ್ರಂಥಾಲಯ ಇಲಾಖೆಯು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು.

ಆದರೆ ಹಲವು ವರ್ಷಗಳಿಂದ ಈ ಸೌಲಭ್ಯವು ಏಕಾಏಕಿ ಸಕಾರಣವಿಲ್ಲದೆ ಸ್ಥಗಿತಗೊಂಡಿದೆ. ಆದಕಾರಣ ನಾಗರಿಕರಿಗೆ ಗ್ರಂಥಾಲಯ ಇಲಾಖೆಯ ಬಗ್ಗೆ ಬೇಸರ ಮೂಡಿದೆ. ಮುಂಜಾವಿನ ನಿರಂತರ ಕೆಲಸದ ಮಧ್ಯೆಯೂ ನಾಗರಿಕರು ಗುಂಪುಗುಂಪಾಗಿ ಪುಸ್ತಕ ಬದಲಾವಣೆಗಾಗಿ ಬಸ್‌ ಬರುವ ಮುಂಚೆಯೇ ಬಸ್‌ ದಾರಿ ಕಾಯುವ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಸಂಚಾರಿ ಗ್ರಂಥಾಲಯ ಪುನಃ ಸಂಚರಿಸಲಿ. ಗ್ರಂಥಾಲಯ ಇಲಾಖೆ, ಜಿಲ್ಲಾ ಆಡಳಿತ, ಜನಪ್ರತಿನಿಧಿಗಳು ಇದರ ಅಗತ್ಯವನ್ನು ಮನಗಾಣಬೇಕು. ನಾಗರಿಕರ ಜ್ಞಾನದ ಹಸಿವು ನೀಗಿಸುವ ಈ ಮಹಾಕಾರ್ಯಕ್ಕೆ ಕೈಜೋಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT