ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಖರೀದಿ: ಸ್ಪಷ್ಟ ನಿಲುವಿರಲಿ

Last Updated 25 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕನ್ನಡಿಗರಾದ ರಾಜೇಂದ್ರಕುಮಾರ್‌ ಅವರು ರಾಷ್ಟ್ರೀಯ ಗ್ರಂಥಾಲಯದ ಮಹಾ­ನಿರ್ದೇಶಕ ಹುದ್ದೆಗೇರಿರುವುದು (ಪ್ರ.ವಾ., ಸೆ.15) ಕನ್ನಡಿಗರು ಹೆಮ್ಮೆಪಡುವ ವಿಷಯ. ಅವರಿಗೆ  ಅಭಿನಂದನೆ. ತಮ್ಮ ಸಂದರ್ಶನದಲ್ಲಿ ಅವರು ‘ಲೇಖಕ­ರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಎಲ್ಲ ರಾಜ್ಯಗಳಲ್ಲಿ ಪುಸ್ತಕ ಸಗಟು ಖರೀದಿ ಯೋಜನೆ ಜಾರಿಯಾಗಿದೆ.

ಇದರಿಂದ ಬಹ­ಳಷ್ಟು ಜನ ಲೇಖಕರಾಗಿ, ಪ್ರಕಾಶಕರಾಗಿ  ಬದ­ಲಾಗುತ್ತಿ­ದ್ದಾರೆ. ತಾವು ಪ್ರಕಟಿಸಿದ ನಿರ್ದಿಷ್ಟ ಸಂಖ್ಯೆಯ ಪುಸ್ತಕಗಳು ಖಂಡಿತ­ವಾಗಿಯೂ ಮಾರಾಟ­ವಾಗು­ತ್ತವೆ ಎಂಬ ಖಾತರಿ ಈ ಯೋಜ­ನೆಯ ಕಾರಣದಿಂದ ಅವರಿಗೆ ದೊರೆತಿದೆ’ ಎಂದಿದ್ದಾರೆ.
ಬೇರೆ ರಾಜ್ಯಗಳಲ್ಲಿ ಹೇಗೋ ಏನೋ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ­ದಲ್ಲಿ ಮಾತ್ರ ಇದು ಜಾರಿಗೆ ಬಂದಿಲ್ಲ.

2011­ನೇ ಸಾಲಿನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದೆ ಸಗಟು ಖರೀದಿ ಆಯ್ಕೆಗಾಗಿ ಬಂದ ಪುಸ್ತಕಗಳ ಶೀರ್ಷಿಕೆ ಸಂಖ್ಯೆ ಏಳು ಸಾವಿರಕ್ಕೂ ಹೆಚ್ಚು. ಆದರೆ ಆಯ್ಕೆ ಮಾಡಿ ಖರೀದಿಸಿದ್ದು ಮೂರೂವರೆಯಿಂದ ನಾಲ್ಕು ಸಾವಿ­ರದಷ್ಟು ಮಾತ್ರ. ತಾನೇ  ಪ್ರಕಟಿಸಿದ ಅನೇಕ ಲೇಖಕರ ಪುಸ್ತಕಗಳನ್ನು ಇಲಾಖೆ ಆಯ್ಕೆಯೂ ಮಾಡಿಲ್ಲ, ಖರೀದಿಯೂ ಮಾಡಿಲ್ಲ. 2012ನೇ ಸಾಲಿ­ನಲ್ಲೂ ಇದೇ ಕತೆ.

ಬಹುಶಃ ರಾಜಾರಾಮ ಮೋಹನರಾಯ್‌ ಗ್ರಂಥಾಲಯ ಪ್ರತಿ­ಷ್ಠಾನದ (ಆರ್ಆರ್ಎಲ್‌ಎಫ್‌) ಯೋಜನೆ ಅಡಿ­ಯಲ್ಲಿ ಒಂದು ಸಾವಿರ­ದಷ್ಟು ಶೀರ್ಷಿಕೆ­ಗಳನ್ನು ಮಾತ್ರ ಖರೀದಿ ಮಾಡ­ಲಾಗಿದೆ. ಆಯ್ಕೆಯಾದ ಸಾವಿರಾರು ಪುಸ್ತ­ಕಗಳು ಖರೀದಿ ಆದೇಶವಿಲ್ಲದೆ ಬಿದ್ದಿವೆ. ಖರೀದಿಗೆ ಹಣ ಇಲ್ಲ ಎನ್ನುವುದು ಒಂದು ಸುದ್ದಿಯಾದರೆ, ಪುಸ್ತಕ­ಗಳನ್ನು ಸರ್ಕಾರ ಖರೀದಿ ಮಾಡಬೇಕೆಂದೇನಿಲ್ಲ ಎಂಬ ಮಾತು ಸರ್ಕಾರಿ ವಲಯದಲ್ಲಿ  ಕೇಳಿ­ಬರುತ್ತಿದೆ.

2013ನೇ ಸಾಲಿನಲ್ಲಿ ಪ್ರಕಟವಾದ ಪುಸ್ತಕ­ಗಳ ಆಯ್ಕೆಗೆ ಅರ್ಜಿ ಸಲ್ಲಿಸಿ ಏಳೆಂಟು ತಿಂಗಳು ಕಳೆ­ದಿವೆ. ಇವುಗಳ ಆಯ್ಕೆ ಯಾವಾಗ ಎಂಬುದು ಗೊತ್ತಿಲ್ಲ. ಪುಸ್ತಕ ಸಗಟು ಖರೀದಿ ವಿಷಯದಲ್ಲಿ ರಾಜ್ಯ ಸಾರ್ವಜನಿಕ ಗ್ರಂಥಾಲ­ಯದ ನಿಲುವು ಏನೆಂಬುದೇ ಅರ್ಥವಾಗು­ತ್ತಿಲ್ಲ. ಗ್ರಂಥಾಲಯ ಕಚೇರಿಯಲ್ಲಿ ಪುಸ್ತಕ ಖರೀದಿಯ ಬಗ್ಗೆ ವಿಚಾರಿಸಿದರೆ ಸೂಕ್ತ ಉತ್ತರ ಸಿಗುತ್ತಿಲ್ಲ.

ಇಂಥ ಪರಿಸ್ಥಿತಿ ಇರುವಾಗ ರಾಜ್ಯದ ಲೇಖಕರು, ಪ್ರಕಾಶಕರು ಏನು ಮಾಡಬೇಕು? ಪುಸ್ತಕ ಪ್ರಕಟಿಸುವುದನ್ನು ನಿಲ್ಲಿಸಬೇಕೆ ಅಥವಾ ತಮ್ಮ ದಾರಿಯನ್ನು ತಾವೇ ನೋಡಿ­ಕೊಳ್ಳ­ಬೇಕೆ? ಸಾರ್ವಜನಿಕ ಗ್ರಂಥಾ­ಲಯ ಇಲಾಖೆ ಈ ವಿಷಯದಲ್ಲಿ ಒಂದು ಸ್ಪಷ್ಟವಾದ ನಿಲುವು ತಳೆಯಲಿ.
–ಸುಮುಖಾನಂದ ಜಲವಳ್ಳಿ , ಹೊನ್ನಾವರ, ಉತ್ತರ ಕನ್ನಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT