ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಚಿಗೆ ಸಿಲುಕಿದ ನಿರೂಪಕಿ

Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಸಮು­ದಾಯದವರು ಸಿಡ್ನಿಯಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯ­ಕ್ರಮದ ನಿರೂಪಕಿ ರಾಶಿ ಕಪೂರ್‌ ಅವರು ಪೇಚಿಗೆ ಸಿಲುಕಿದ ಪ್ರಸಂಗ ನಡೆಯಿತು

  ‘ರಾಶಿ ಕಪೂರ್‌ ಅವರು  ತಾವು ‘ಮಿಸ್‌ ಇಂಡಿಯಾ ಆಸ್ಟ್ರೇಲಿಯಾ’ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದಿರುವುದಾಗಿ ಮಾಧ್ಯಮಗಳ
ಮೂಲಕ ಬಿಂಬಿಸಿಕೊಂಡಿದ್ದಾರೆ.  ಆದರೆ ಇದು ಸುಳ್ಳು’ ಎಂದು ಮಿಸ್‌ ಇಂಡಿಯಾ ಆಸ್ಟ್ರೇಲಿಯಾ ಕಾರ್ಪೋರೇಷನ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದಕ್ಕೆ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಕಪೂರ್‌, ತಾವು ೨೦೧೩ರಲ್ಲಿ ‘ಮಿಸ್‌ ಇಂಡಿಯಾ ಗ್ಲೋಬಲ್‌ ಯುನೈಟೆಡ್‌’ ಸ್ಪರ್ಧೆಯಲ್ಲಿ ಗೆದ್ದಿದ್ದನ್ನು ಕೆಲವು ಮಾಧ್ಯಮಗಳು ಈ ರೀತಿ ತಪ್ಪಾಗಿ ವರದಿ ಮಾಡಿರುವ ಸಾಧ್ಯತೆ ಇದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT