ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಬ್ಯಾಡ್ಮಿಂಟನ್‌: ರಾಜ್ಯದ ಆನಂದ್‌ಗೆ ಮೂರು ಕಂಚು

Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಮೋಘ ಸಾಮರ್ಥ್ಯ ತೋರಿದ ಕರ್ನಾಟಕದ ಆನಂದ್‌ ಕುಮಾರ್‌ ಅವರು ಐರ್ಲೆಂಡ್‌ನ ಆ್ಯಂಟ್ರಿಯಮ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮೂರು ಕಂಚು ಗೆದ್ದ ಸಾಧನೆ ಮಾಡಿದ್ದಾರೆ.

ಸ್ಟ್ಯಾಂಡಿಂಗ್‌ ಲೋವರ್‌–4 ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಆನಂದ್‌ 11–21, 13–21ರಲ್ಲಿ ಫ್ರಾನ್ಸ್‌ನ ಲುಕಾಸ್‌ ಮಜುರ್‌ ವಿರುದ್ಧ ಸೋತರು. ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಭಾರತದ ಸುಕಾಂತ್‌ ಕದಂ 17–21, 13–21ರಲ್ಲಿ ಮಲೇಷ್ಯಾದ ಬಾಕ್ರಿ ಓಮರ್‌ ವಿರುದ್ಧ ಪರಾಭವಗೊಂಡರು.

ಸ್ಟ್ಯಾಂಡಿಂಗ್‌ ಲೋವರ್‌ 3 ಮತ್ತು 4ರ ಡಬಲ್ಸ್‌ ವಿಭಾಗದ ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಆನಂದ್‌ ಮತ್ತು ಮನೋಜ್‌ ಸರ್ಕಾರ್‌ ಅವರು 17–21, 22–24ರಲ್ಲಿ ಮಲೇಷ್ಯಾದ ಮಹಮ್ಮದ್‌ ಹುಜೈರಿ ಅಬ್ದುಲ್‌ ಮಲೆಕ್‌ ಮತ್ತು ಬಾಕ್ರಿ ಓಮರ್‌ ವಿರುದ್ಧ ಸೋತರು.

ಸ್ಟ್ಯಾಂಡಿಂಗ್‌ ಲೋವರ್‌–3 ಮತ್ತು ಸ್ಟ್ಯಾಂಡಿಂಗ್‌ ಅಪ್ಪರ್‌ –5 ಮಿಶ್ರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಆನಂದ್‌ ಮತ್ತು ಜರ್ಮನಿಯ ಕ್ಯಾಥರಿನಾ ಸೀಬರ್‌ 21–23, 6–21 ರಲ್ಲಿ ಫ್ರಾನ್ಸ್‌ನ ಲುಕಾಸ್‌ ಮಜುರ್‌ ಮತ್ತು ಫೌಸ್ಟೈನ್‌ ನೊಯೆಲ್‌ ವಿರುದ್ಧ ಶರಣಾದರು.

ಶಾರ್ಟ್‌ ಸ್ಟೆಚರ್‌–6 ಪುರುಷರ ಡಬಲ್ಸ್‌ ಸೆಮಿಫೈನಲ್‌ನಲ್ಲಿ  ಭಾರತದ ಮಾರ್ಕ್‌ ಧರಮೈ ಮತ್ತು ಬ್ರಿಟನ್‌ನ ಪಾಲ್‌ ಡೊಲಿಂಗ್‌ 8–21, 10–21 ರಲ್ಲಿ ಬ್ರಿಟನ್‌ನ ಓಲಿವರ್‌ ಕ್ಲಾರ್ಕ್‌ ಮತ್ತು ಆ್ಯಂಡ್ರೆ ಮಾರ್ಟಿನ್‌ ಎದುರು ಸೋಲು ಕಂಡರು.

ಮಾನಸಿಗೆ ಬೆಳ್ಳಿ: ಮಹಿಳೆಯರ  ಸ್ಟ್ಯಾಂಡಿಂಗ್‌ ಲೋವರ್‌–3 ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಮಾನಸಿ ಗಿರೀಶ್‌ಚಂದ್ರ ಜೋಶಿ ಅವರು ಬೆಳ್ಳಿ ಗೆದ್ದರು. ಮಾನಸಿ ಅವರು ರೌಂಡ್‌ ರಾಬಿನ್‌  ಪಂದ್ಯದಲ್ಲಿ 21–12, 11–21, 21–10ರಲ್ಲಿ ಪೋಲೆಂಡ್‌ನ ಕತಾರ್‌ಜಿನ ಜಿಯೆಬಿಕ್‌ ಅವರನ್ನು ಪರಾಭವಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT