ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಕ್ರಿಯೆ

Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ರಂಗನಾಯಕಿಯರು’ ಹೆಜ್ಜೆ ಗುರುತು
ಗುಡಿಹಳ್ಳಿ ನಾಗರಾಜ್ ಅವರ ಲೇಖನ ‘ರಂಗನಾಯಕಿಯರು’ (5/4/2014) ಇಳಕಲ್ ಉಮಾರಾಣಿ, ಪ್ರೇಮಾ ಬದಾಮಿ, ಬಿ.ಶಿವಕುಮಾರಿ ಮತ್ತು ಬಾವಿಹಳ್ಳಿ ರೇಣುಕಾ ಅವರ ಬಣ್ಣದ ಬದುಕಿನ ಹೆಜ್ಜೆ ಗುರುತುಗಳನ್ನು ಪರಿಚಯಿಸಿತು. ಹಿಂದೆ ಶುದ್ಧ ಮನರಂಜನೆ ಹಾಗೂ ಸಂದೇಶ ಸಾರುವ ಮಾಧ್ಯಮವಾಗಿದ್ದ ನಾಟಕ ಕಲೆ ಇಂದು ಸಿನಿಮಾ, ಟಿವಿ ಮಾಧ್ಯಮಗಳ ಹಾವಳಿಗೆ ಸಿಕ್ಕು ಮಸುಕಾಗುತ್ತಿದೆ.

ಎಷ್ಟೊ ಜನ ಮಹಿಳೆಯರಿಗೆ ರಂಗಭೂಮಿ ಅಂದು ಸಂಸಾರ ನಿರ್ವಹಣೆ, ಉದರ ಪೋಷಣೆಯ ಮಾರ್ಗವಾಗಿತ್ತು. ರಂಗಭೂಮಿಯನ್ನು ನಂಬಿಕೊಂಡವರು ಇಂದು ದುಸ್ತರ ಬದುಕು ಸಾಗಿಸುತ್ತಿರುವುದೂ ಇದೆ. ರಂಗಭೂಮಿಗೆ ದುಡಿದ ಮಹಿಳೆಯರ ಜೀವನ ಪರಿಚಯ ಮಾಡಿಸಿದ ಲೇಖಕರಿಗೆ ಧನ್ಯವಾದಗಳು. 
– ಸಿ.ಎಂ.ಮೃತ್ಯುಂಜಯಪ್ಪ, ಚಿತ್ರದುರ್ಗ

ಮಂಗಳಮುಖಿಯರಿಂದ ನಾಟಕ ಮಾಡಿಸುವಂತಹ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿ, ತಮ್ಮದೇ ಆದ ಮಹಿಳಾ ತಂಡವನ್ನೂ ಕಟ್ಟಿಕೊಂಡು ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ ಉಮಾರಾಣಿ, ನಟನೆಯ ಜೊತೆಗೆ ಬರಹಗಾರ್ತಿಯೂ ಆಗಿ ಗುರುತಿಸಿಕೊಂಡಿರುವ ಪ್ರೇಮಾ ಬದಾಮಿ ರಂಗಭೂಮಿ ಕಂಡ ಉತ್ತಮ ಕಲಾವಿದೆಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಸುಭದ್ರಮ್ಮನವರ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದ ಶಿವಕುಮಾರಿ, ಬಾಲ್ಯದಲ್ಲಿಯೇ ಬಣ್ಣ ಹಚ್ಚಿದ ರೇಣಿಕಾ ಅವರ ಬಗ್ಗೆ ಓದಿ ಸಂತೋಷವಾಯಿತು.
– ಕೊಹಿಮ, ಬಸರಕೋಡು

ಭಲೇ ಚಿನ್ನ
‘ಚಿನ್ನು ಆರೋಗ್ಯಕ್ಕೆ ಹೊನ್ನು’ ಡಾ. ಪಲ್ಲವಿ ಕೆ.ಎಸ್. ಅವರ ಲೇಖನ ಉಪಯುಕ್ತವಾಗಿತ್ತು. ಸ್ವರ್ಣಪಾಶನದ ಬಳಕೆ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಇಂತಹ ಮಾಹಿತಯ ಅಗತ್ಯವಿತ್ತು. ಆರೋಗ್ಯಕ್ಕೂ, ಮನಸ್ಸಿಗೂ ಚಿನ್ನ ನೀಡುವ ನೆಮ್ಮದಿ ದೊಡ್ಡದು. ಚಿನ್ನ ಎಲ್ಲಿದ್ದರೂ, ಹೇಗಿದ್ದರೂ, ಏನಾದರೂ ಚೆನ್ನ. ಭಲೇ ಚಿನ್ನ!
–ಕುಣಿಗಲ್ ಜಯಣ್ಣ, ಪಾಂಡವಪುರ

‘ದಾಹ ಅಡಗಿಸಲಷ್ಟೇ ಅಲ್ಲ ಎಳನೀರು’ ಡಾ.ಪ್ರಸನ್ನ ಎಸ್. ಅವರ ಲೇಖನ ಅಮೃತಧಾರೆಯ ವಿಷಯ ಸಿಂಚನ. ವೈಜ್ಞಾನಿಕ ದೃಷ್ಟಿಕೋನದಿಂದ ಅನೇಕ ಅಂಶಗಳನ್ನು ಪರಿಚಯಿಸಿತು ಲೇಖನ.
– ಎಚ್.ಆನಂದ್ ಕುಮಾರ್, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT