ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾ ಪಾಟೀಲ್‌ ಸಹೋದರ ಆರೋಪಿ

ಕಾಂಗ್ರೆಸ್‌ ಮುಖಂಡರೊಬ್ಬರ ಕೊಲೆ ಪ್ರಕರಣ
Last Updated 7 ಜುಲೈ 2014, 19:30 IST
ಅಕ್ಷರ ಗಾತ್ರ

ಜಲಗಾಂವ್‌ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ 2005ರಲ್ಲಿ ನಡೆದ ಕಾಂಗ್ರೆಸ್‌ ಮುಖಂಡರೊಬ್ಬರ ಕೊಲೆ ಪ್ರಕರಣದಲ್ಲಿ  ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರ ಕಿರಿಯ ಸಹೋದರ ಗಜೇಂದ್ರಸಿಂಗ್‌ ಪಾಟೀಲ್‌ ಅವರನ್ನು ಆರೋಪಿಯನ್ನಾಗಿ ಹೆಸರಿ­ಸಲಾಗಿದೆ.

ಕಾಂಗ್ರೆಸ್‌ ಮುಖಂಡ  ಪ್ರೊ.ವಿ.ಜಿ.ಪಾಟೀಲ್‌ ಅವರ ಕಾರಿಗೆ ಕಲ್ಲು ಎಸೆದು, ನಂತರ ಅವರನ್ನು ಇರಿದು ಕೊಲ್ಲಲಾಗಿತ್ತು. ಇದು ರಾಜಕೀಯ ದ್ವೇಷದ ಕೊಲೆ ಎಂದು ಹೇಳಲಾಗಿತ್ತು.

ಪ್ರಕರಣದ ಸಂಚು ನಡೆಸಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಇವರಿಬ್ಬರು ಗಜೇಂದ್ರಸಿಂಗ್‌ ಹೆಸರು ಬಾಯಿ­ಬಿಟ್ಟಿದ್ದಾರೆ.

ಈ ಪ್ರಕರಣದಲ್ಲಿ ಸಿಬಿಐ ಗಜೇಂದ್ರ­ಸಿಂಗ್‌ ಅವರನ್ನು ರಕ್ಷಿಸುತ್ತಿದೆ ಎಂದು ವಿ.ಜಿ.ಪಾಟೀಲ್‌ ಪತ್ನಿ ರಜನಿ ಪಾಟೀಲ್‌ ಆರೋಪಿಸಿದ್ದಾರೆ.
ಪ್ರೊ.ಪಾಟೀಲ್‌ ಅವರು ಜಲಗಾಂವ್‌ ಜಿಲ್ಲಾ ಕಾಂಗ್ರೆಸ್‌್ ಸಮಿತಿ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಗಜೇಂದ್ರಸಿಂಗ್‌್ ಅವರನ್ನು ಸೋಲಿಸಿ­ದ್ದರು. ಇದಾದ ಒಂದು ತಿಂಗಳ ಬಳಿಕ ಪಾಟೀಲ್‌ ಕೊಲೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT