ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನ ಕಾರ್ಯದರ್ಶಿ ಹಾಜರಿಗೆ ತಾಕೀತು

ಮಾರ್ಗಸೂಚಿ ಪಾಲನೆಗೆ ಖಾಸಗಿ ಶಾಲೆಗಳು ವಿಫಲ
Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗಾಗಿ ನಗರ ಪೊಲೀಸ್‌  ಕಮಿಷನರ್‌ ಸೂಚಿಸಿರುವ ಮಾರ್ಗ-ಸೂಚಿ--ಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಕಮಿಷನರೇಟ್‌  ವ್ಯಾಪ್ತಿಯ ಶಾಲೆಗಳು ವಿಫಲವಾಗಿರುವುದಕ್ಕೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಸಂಬಂಧ  ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಬಿಎಂಪಿಯ ಹೆಚ್ಚುವರಿ ಶಿಕ್ಷಣ ಆಯುಕ್ತರು ಬುಧವಾರ (ಸೆ.17) ನ್ಯಾಯಾಲಯಕ್ಕೆ ಹಾಜರಾಗು-ವಂತೆ  ಏಕಸದಸ್ಯ ಪೀಠವು ಸೂಚಿಸಿದೆ.

ನ್ಯಾಯಮೂರ್ತಿ ಎ.ಎನ್. ವೇಣು-ಗೋಪಾಲಗೌಡ ಅವರಿದ್ದ ನ್ಯಾಯ-ಪೀಠವು ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿತು.
‘581 ಸರ್ಕಾರಿ ಶಾಲೆಗಳಲ್ಲಿ ಈ-ತನಕ ಕೇವಲ 4 ಶಾಲೆಗಳು ಮಾತ್ರವೇ ಮಾರ್ಗಸೂಚಿಯನ್ನು ಸಂಪೂರ್ಣ-ವಾಗಿ ಅನುಷ್ಠಾನಗೊಳಿಸಿವೆ. 279 ಶಾಲೆಗಳು ಭಾಗಶಃ ಅನುಷ್ಠಾನ-ಗೊಳಿಸಿವೆ’ ಎಂದು ಸರ್ಕಾರದ ಪರ-ವಾಗಿ ಹೆಚ್ಚುವರಿ ಅಡ್ವೊಕೇಟ್‌ ಜನ-ರಲ್ ಎ.ಎಸ್‌.ಪೊನ್ನಣ್ಣ ವಿವರಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, ‘ಇತರರಿಗೆ ಮಾದರಿ-ಯಾಗಬೇಕಾದ ನೀವೆ ಹೀಗಾದರೆ ಹೇಗೆ. ಈ ರೀತಿ ಆದರೆ ಮುಖ್ಯಶಿಕ್ಷಕರು ಹಾಗೂ ಪ್ರಾಂಶುಪಾಲರನ್ನು ವಿಚಾರಣೆಗೆ ಒಳಪಡಿಸಬೇಕಾಗುತ್ತದೆ’ ಎಂದು ಎಚ್ಚರಿಸಿತು.

‘ಕೂಡಲೇ ಈ ಕುರಿತು ಶಿಕ್ಷಣ ಇಲಾ-ಖೆಯ ಪ್ರಧಾನ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿ. ಮಾರ್ಗಸೂಚಿ-ಗಳನ್ನು ಎಷ್ಟು ದಿನದಲ್ಲಿ ಅನುಷ್ಠಾನಕ್ಕೆ ತರಬಹುದು ಎಂಬುದನ್ನು ನ್ಯಾಯಾ-ಲಯಕ್ಕೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಸ್ಪಷ್ಟಪಡಿಸಿ’ ಎಂದು ತಾಕೀತು ಮಾಡಿತು.

ಇತ್ತೀಚೆಗೆ ಮಾರತ್‌ಹಳ್ಳಿ ವ್ಯಾಪ್ತಿಯಲ್ಲಿನ ವಿಬ್ಗಯೊರ್‌ ಶಾಲಾ ವಿದ್ಯಾರ್ಥಿನಿ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತುಕೊಂಡ ನಗರ ಪೊಲೀಸರು ಕಮಿಷನರೇಟ್‌ ವ್ಯಾಪ್ತಿಯ ಖಾಸಗಿ ಸರ್ಕಾರಿ ಹಾಗೂ ಬಿಬಿಎಂಪಿ ಶಾಲೆಗಳಿಗೆ ಮಾರ್ಗಸೂಚಿ ನಿಗದಿಪಡಿಸಿದ್ದರು. ಇದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಅಸೋಸಿಯೇಷನ್‌ ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT