ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕವಾಗಿ ಕೆಲಸಮಾಡಿ: ಸೂಚನೆ

ತಾಲ್ಲೂಕಿನ ಮೊದಲ ಪ್ರಗತಿ ಪರಿಶೀಲನಾ ಸಭೆ * ಕಡ್ಡಾಯವಾಗಿ ಸಸಿ ನೆಡಲು ಮನವಿ
Last Updated 27 ಮೇ 2016, 9:48 IST
ಅಕ್ಷರ ಗಾತ್ರ

ಮಾಗಡಿ: ನಾನು ಅಧಿಕಾರಿಗಳ ಪರ ಇದ್ದೇನೆ. ಆದರೆ ಶೇ,90 ರಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅಧಿಕಾರಿಗಳು ದಿನದ 24 ಗಂಟೆಯೂ ಅಧಿಕಾರಿಗಳೇ ಎಂಬುದನ್ನು ಮರೆಯ ಬಾರದು. ನಮ್ಮ ಕೈಯಲ್ಲಿ ರೆಡ್‌ ಪೆನ್‌ ಇದೆ. ಹಾಜರಾತಿ ಪುಸ್ತಕದಲ್ಲಿ ರೆಡ್‌ ಮಾರ್ಕ್‌ ಬರೆಸಿಕೊಳ್ಳಬೇಡಿ ಎಂದು ತಾ.ಪಂ. ಅಧ್ಯಕ್ಷ ಮಣಿಗನಹಳ್ಳಿ ಸುರೇಶ್‌ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು. ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಮರೂರು ಹ್ಯಾಂಡ್‌ ಪೋಸ್ಟ್‌ ಬಳಿ ರಾ.ಹೆ.75ರಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ, ಗಾಯಾಳುವನ್ನು ದೂರದ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಗಾಯಾಳು ಮೃತ ಪಡುವುದೇ ಹೆಚ್ಚು.ಮರೂರು ಸರ್ಕಾರಿ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ವೈದ್ಯರು ಕರ್ತವ್ಯದ ಮೇಲಿರಬೇಕು. ಮಣಿಗನ ಹಳ್ಳಿ, ಕುದೂರು, ಸೋಲೂರು ಸರ್ಕಾರಿ ಆಸ್ಪತ್ರೆಗಳಿಗೆ ದಿನದ ಯಾವುದೇ ಸಮಯದಲ್ಲಿ ಬೇಟಿ ನೀಡುತ್ತೇನೆ. ವೈದ್ಯರು ಮತ್ತು ಸಿಬ್ಬಂದಿ ಇಲ್ಲದಿದ್ದರೆ ಗ್ಯಾರಂಟಿ ರೆಡ್‌ ಪೆನ್‌್ ಬಳಸುತ್ತೇನೆ.

ಜೂನ್‌.5ರಂದು ವಿಶ್ವ ಪರಿಸರ ದಿನದ ಅಂಗವಾಗಿ ತಾಲ್ಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆ, ಶಾಲೆಗಳ ಕಾಂಪೌಂಡ್‌ಗಳಲ್ಲಿ ಕಡ್ಡಾಯವಾಗಿ ಸಸಿ ನೆಡುವುದನ್ನು ಪ್ರಾಮಾಣಿಕವಾಗಿ ಮಾಡಲೇ ಬೇಕು. ಶಿಕ್ಷಣ, ಆರೋಗ್ಯ, ಪರಿಸರ ಉತ್ತಮಗೊಳಿಸುವುದೇ ನನ್ನ ಅಧಿಕಾರದ ಘನ ಉದ್ದೇಶವಾಗಿದೆ. ಕೆಲವು ಸರ್ಕಾರಿ ಅಧಿಕಾರಿಗಳು, ಪಿಡಿಒ ಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ, ಮಾಗಡಿಯಲ್ಲಿ ಅಲೆಯುವದನ್ನು ಇನ್ನು ಮುಂದೆ ಸಹಿಸುವುದಿಲ್ಲ.

ಪಿಡಿಒ, ಸರ್ಕಾರಿ ವೈದ್ಯರು ಮತ್ತು ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಗ್ರಾಮಸಭೆಗೆ ಬರಲೇಬೇಕು ಎಂದರು. ಜಿ.ಪಂ. ಇಂಜಿನಿಯರಿಂಗ್‌ ವಿಭಾಗದ ಎಇಇ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ತಾ.ಪಂ.ಅಧ್ಯಕ್ಷ ಮಣಿಗನ ಹಳ್ಳಿ ಸುರೇಶ್‌ ಕಾಗೆ ಪುರಾಣ ಹೇಳಬೇಡಿ, ಯಾರೇ ಶಿಫಾರಸ್ಸು ಪತ್ರ ಕೊಟ್ಟರು ಸಹ ಕಾನೂನು ಒಂದೇ  ಅನುಮೋದನೆ ಇಲ್ಲದ ಕಾಮಗಾರಿಯನ್ನು ಲೈಸನ್ಸ್‌ ಇಲ್ಲದ ಗುತ್ತಿಗೆದಾರನ ಹೆಸರಿನಲ್ಲಿ ಮಾಡಬೇಡಿ. ಆಕ್ಷನ್‌ ಪ್ಲಾನ್‌, ಎಸ್ಟಿಮೇಟ್‌ ಇಲ್ಲದ ಕಾಮಗಾರಿ ಮಾಡುವುದು ಬೇಡವೇ ಬೇಡ.

ಗುತ್ತಿಗೆದಾರ ಯಾರೋ? ಕಾಮಗಾರಿ ಬಿಲ್‌ ಪಡೆಯುವವನೇ ಬೇರೆ ಇದಾವ ನ್ಯಾಯ? ಎಂದು ಪ್ರಶ್ನಿಸಿದ ಅಧ್ಯಕ್ಷರು. ಕಳ್ಳಬಿಲ್‌ ತಡೆಗಟ್ಟಿ,ಕಾಮಗಾರಿ ಆರಂಭಕ್ಕೆ ಮುನ್ನ ಅನುಮತಿ ಅಗತ್ಯ. ನಿನ್ನೆಯವರೆಗೆ ಏನಾಯಿತು ಎಂಬುದು ಬೇಡ. ಇವತ್ತಿನಿಂದ ಸರಿಯಾಗಿ ಕೆಲಸ ಮಾಡಿ. ಕಾಮಗಾರಿಯ ಬಿಲ್‌ ಕೊಡಲು ಗ್ರಾ.ಪಂ.ಅನುಂತಿ ಕಡ್ಡಾಯ. ಗುತ್ತಿಗೆದಾರನ ಬಳಿ ಲೈಸನ್ಸ್‌ ಇರಲೇಬೇಕು, ರೂ.3ಲಕ್ಷ ಬಿಲ್‌ ಮಾಡಿ ಹಣ ಡ್ರಾ ಮಾಡಿಕೊಂಡು, ₹1 ಲಕ್ಷ ಕಡಿತ ಮಾಡಿ ಗುತ್ತಿಗೆದಾರನಿಗೆ ₹2ಲಕ್ಷ ಕೊಟ್ಟಿರುವ ಮಾಹಿತಿ ನನ್ನ ಬಳಿ ಇವೆ.

ಜಿ.ಪಂ.ಎಇಇ ಕಚೇರಿಯ ಸೆಕ್ಷನ್‌ ಆಪೀಸರ್‌ ಭಾರಿ ಗೋಲ್‌ಮಾಲ್‌ ಮಾಡುವ ಬಗ್ಗೆಯೂ ಮಾಹಿತಿ ಇದೆ. ಕಾಗೆ ಪುರಾಣ ಹಾರಿಸುವವರ ಮಾಹಿತಿ ಇದೆ. ಬಿಸಿಯೂಟ ತಯಾರಿಸುವ ಅಡಿಗೆ ಸಿಬ್ಬಂದಿ 60 ವರ್ಷ ಮೀರಿದ ಅಸಮರ್ಥರನ್ನು ನೇಮಿಸಿಕೊಳ್ಳಬೇಡಿ.  ಮಣಿಗನ ಹಳ್ಳಿ ಸರ್ಕಾರಿ ಶಾಲೆಗಳಿಗೆ ಪ್ರತಿವರ್ಷ ನನ್ನ ಸ್ವಂತ ಹಣ ₹ 20 ಸಾವಿರ  ದಾನ ನೀಡುತ್ತಿದ್ದೇನೆ, ಮಕ್ಕಳಿಗೆ ತರಕಾರಿ ಬಳಸಿ  ರುಚಿ ಮತ್ತು ಶುದ್ದವಾದ ಆಹಾರ ಮಾಡಿ ಉಣಬಡಿಸಿ,  ಮಣಿಗನ ಹಳ್ಳಿ ಬಿಸಿಯೂಟದ ಅಕ್ಕಿಯಲ್ಲಿ ಹುಳು ಇರುವ ಬಗ್ಗೆ ನನಗೆ ದೂರು ಬಂದಿದೆ.

ಶಾಲಾಭಿವೃದ್ದಿ ಸಮಿತಿಗೆ ಶಾಲಾ ಕೊಠಡಿ ಕಟ್ಟಲು ನೀಡುವ ಹಣದ ಬಗ್ಗೆ ತಾಂತ್ರಿಕ ಜ್ಞಾನ ಇರುವವರಿಗೆ ಕೊಡಬೇಕು. ಮಣಿಗನ ಹಳ್ಳಿ ಸರ್ಕಾರಿ ಶಾಲೆಯ ಕಟ್ಟಡ ಕಟ್ಟಿ 2 ವರ್ಷ ಕಳೆದಿದೆ. ಕಳಪೆ ಕಾರಣ ಬಿಲ್‌ ಪಾವತಿಯಾಗದೆ ಗೊಂದಲದಲ್ಲಿದೆ. ಶಾಲಾಭಿವೃದ್ದಿ ಸಮಿತಿಯವರು ಗುಣಮಟ್ಟದಲ್ಲಿ ಕಟ್ಟಡ ಕಟ್ಟುತ್ತಿಲ್ಲ.  ಖಾಸಗಿ ಆಂಗ್ಲಮಾಧ್ಯಮ ಶಾಲೆಗಳಲ್ಲಿ ಪೋಷಕರಿಂದ ವಂತಿಗೆ, ಮಾಸಿಕ ಶುಲ್ಕ, ವಾರ್ಷಿಕೋತ್ಸವ ಶುಲ್ಕ ವಸೂಲಿ ದಂದೆಯ ಬಗ್ಗೆ ಕಠಿಣ ನಿಲುವು ಕೈಗೊಳ್ಳುವಂತೆ ಬಿಇಒ ಅವರಿಗೆ ಸೂಚಿಸಿದರು.

ತಾ.ಪಂ.ಇಒ ಜಯರಂಗ, ಬಿಇಒ ಎ.ಆರ್‌.ರಂಗಸ್ವಾಮಿ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಯಗೊಂಡ  ರಾಮು ಸಾಳೆ, ಅಕ್ಷರದ ದಾಸೋಹದ ಸಹಾಯಕ ನಿರ್ದೇಶಕ ರಂಗಸ್ವಾಮಿ, ಕೈಗಾರಿಕಾ ವಿಸ್ತರಣಾಧಿಕಾರಿ ಪುಷ್ಪಲತ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT