ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇರಣೆಯ ಚಿಲುಮೆಯಾಗಿದ್ದ ಸುಸಂಸ್ಕೃತ ಮಾರ್ಗದರ್ಶಿ

Last Updated 12 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ವಿಜ್ಞಾನ ಸಾಹಿತಿ ಪ್ರೊ. ರಾಜಶೇಖರ ಭೂಸನೂರಮಠ ಅವರು ವಿದ್ಯಾರ್ಥಿಗಳ ಪಾಲಿಗೆ ಪ್ರೇರಣೆಯ ಚಿಲುಮೆಯಾಗಿ ದ್ದರು. ವಿದ್ಯಾರ್ಥಿಗಳ ಆತ್ಮೀಯ ಶಿಕ್ಷಕರಾಗಿದ್ದ ಅವರನ್ನು 1969–72ರ ಅವಧಿಯಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ್ದೆ. ನನ್ನ ಅವರ ಭೇಟಿಗೆ ನಾಲ್ಕು ದಶಕಗಳಾಗಿದ್ದರೂ ಕೆಲವು ನೆನಪುಗಳು ಅಚ್ಚಳಿಯದೇ ಉಳಿದಿವೆ.

ಅವರೊಬ್ಬ ಅಪ್ರತಿಮ ಶಿಕ್ಷಕ. ಅವರು ಆಧುನಿಕ ವಿಷಯಗಳಲ್ಲದ, ಬಹುಮುಖ್ಯವಾಗಿ ವಿದ್ಯಾರ್ಥಿಗಳಿಗೆ ಅಷ್ಟು ಸುಲಭ ವಾಗಿ ಅರ್ಥವಾಗದ ಎಲೆಕ್ಟ್ರಿಸಿಟಿ–ಮ್ಯಾಗ್ನಟಿಸಂ ಅಂಡ್‌ ಕೈನೆಟಿಕ್ ಥಿಯರಿ ಅಂಡ್‌ ಹೀಟ್‌ ಅಂಡ್‌ ಥರ್ಮೊಡೈನಾಮಿಕ್ಸ್‌ ವಿಷಯವನ್ನು ಪರಿಣಾಮಕಾರಿಯಾಗಿ ಬೋಧಿಸುತ್ತಿದ್ದರು.  ನಮ್ಮ ಪಾಲಿಗೆ ನಿಗೂಢ ವಾಗಿದ್ದ  ಪರಮಾಣು ಮತ್ತು ಅಣು ಭೌತ ವಿಜ್ಞಾನ, ಪರಮಾಣು ಭೌತ ವಿಜ್ಞಾನ ಅಥವಾ ಕ್ವಾಂಟಂ ಥಿಯರಿ ನಮ್ಮನ್ನು ಆಕರ್ಷಿಸುತ್ತಿದ್ದವು.  19ನೇ ಶತಮಾನದಲ್ಲಿ ಹೆಚ್ಚು ಸಂಶೋಧನೆ ನಡೆದಿದ್ದ ವಿಷಯಗಳನ್ನು ನಮಗೆ ಮನದಟ್ಟಾಗುವಂತೆ ಹೇಳಿಕೊಡುತ್ತಿದ್ದರು. ಅತ್ಯಂತ ಕ್ಲಿಷ್ಟ ಮತ್ತು ನೀರಸ ವಿಷಯಗಳನ್ನೂ ಅವರು ಆಸಕ್ತಿ ಕೆರಳಿ ಸುವಂತೆ ಬೋಧಿಸುತ್ತಿದ್ದರು. ಪ್ರತಿಯೊಂದು ವಿಷಯದಲ್ಲೂ ಅವರು ಮಗುವಿನ ರೀತಿಯ ಆಸಕ್ತಿ ಹೊಂದಿರುತ್ತಿದ್ದರು.

ಬೋಧನೆಗೆ ಕಪ್ಪು ಹಲಗೆಯನ್ನು ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದ ಅವರು ಎಲ್ಲರಿಗೂ ಸುಲಭವಾಗಿ ಸಿಗುತ್ತಿ ದ್ದರು. ನಮ್ಮ ಅಧ್ಯಯನಕ್ಕೆ ಸೂಚಿಸಿರದ ಫೈನ್‌ಮನ್‌ನ ಭೌತವಿಜ್ಞಾನದ ಬೋಧನೆ ಮತ್ತಿತರ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುತ್ತಿದ್ದರು. ಗ್ರಂಥಾಲಯದ ಮುಖ್ಯಸ್ಥರೂ ಆಗಿದ್ದ ಅವರು, ಎಲ್ಲರಿಗೂ ಪುಸ್ತಕಗಳು ಸಿಗುವಂತಹ ವ್ಯವಸ್ಥೆ ಮಾಡಿದ್ದರು.

ವಿದ್ಯಾರ್ಥಿ ಚಟುವಟಿಕೆಗಳನ್ನು ಅತ್ಯಂತ ಕುತೂಹಲದಿಂದ ಗಮನಿಸುತ್ತಿದ್ದ ಅವರು ಭೌತ ವಿಜ್ಞಾನ ಸಂಸ್ಥೆ ಆರಂಭಿಸಲು ನಮ್ಮನ್ನು ಪ್ರೇರೇಪಿಸಿದ್ದರು. ನೀಲ್‌ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ  ಕಾಲಿರಿಸಿದ್ದ ವೈಜ್ಞಾನಿಕ ಮಹತ್ವವಾದ ವಿದ್ಯಮಾನವನ್ನು ಟ್ರಾನ್ಸಿಸ್ಟರ್‌ ಮೂಲಕ ಕಣ್ಣು ಪಿಳುಕಿಸುತ್ತಾ ಕೇಳಿದ್ದೆವು. ಮರ್ಕ್ಯುರಿ, ಜೆಮಿನಿ ಮತ್ತು ಅಪೊಲೊ ಕಾರ್ಯಕ್ರಮಗಳ ಬಗ್ಗೆ ಯುಎಸ್‌ಐಎಸ್‌ ನಿಂದ ಹಲವು ಸಿನಿಮಾಗಳು ಬರುತ್ತಿದ್ದು, 16ಮಿ.ಮೀ ಪ್ರೊಜೆಕ್ಟರ್‌ಗಳ ಮೂಲಕ ಅವುಗಳನ್ನು ತೋರಿಸಲಾಗುತ್ತಿತ್ತು. ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ಈ ವಾತಾ ವರಣ ನೆರವಾಯಿತು. ಭೌತವಿಜ್ಞಾನ ಸಂಸ್ಥೆಯ ಮಾರ್ಗದರ್ಶಕರಾಗಿದ್ದ ‘ರಾಭೂ’ ನಮಗೆ ಪ್ರೇರಕರಾಗಿದ್ದರು.

ಕಾಲೇಜಿನಲ್ಲಿ ನಡೆಯುತ್ತಿದ್ದ ಔಪಚಾರಿಕ ಚರ್ಚೆಯ ಹೊರತಾಗಿಯೂ ಕೆಲವು ಸ್ನೇಹಿತರ ಜೊತೆಗೂಡಿ ಅವರ ಮನೆಗೆ ಹೋಗುತ್ತಿದ್ದೆವು. ಪ್ರೀತಿಯಿಂದ ಸ್ವಾಗತಿಸುತ್ತಿದ್ದ ಅವರು ಉಪಾಹಾರ ನೀಡಿ, ವೈಜ್ಞಾನಿಕ ವಿಷಯಗಳ ಕುರಿತು ಚರ್ಚೆ ಮಾಡುತ್ತಿದ್ದರು. ವಿಜ್ಞಾನದ ಮೇಲಿನ ತತ್ವಜ್ಞಾನ ಓದುವಂತೆ ಪ್ರೇರೇಪಿ ಸುತ್ತಿದ್ದ  ‘ರಾಭೂ’ ಅವರಿಗೆ ಬರ್ಟ್ರಂಡ್‌ ರಸೆಲ್‌ ಮತ್ತು ಎ.ಎನ್‌. ವೈಟ್‌ಹೆಡ್‌ ನೆಚ್ಚಿನ ಬರಹಗಾರ ರಾಗಿದ್ದರು. ಒಂದು ಬಾರಿ ವೈಟ್‌ಹೆಡ್‌ ತತ್ವಜ್ಞಾನದ ಮೇಲೆ ಪಿಎಚ್‌.ಡಿ ಮಾಡಲು ಉತ್ಸುಕನಾಗಿರು ವುದರ ಬಗ್ಗೆ ನನ್ನ ಬಳಿ ಹೇಳಿಕೊಂಡಿದ್ದರು. 

ಆಹ್ವಾನವಿಲ್ಲದೇ ಸಂಜೆ ಅವರ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸುವುದು ನಮಗೆ ಸಾಮಾನ್ಯವಾಗಿತ್ತು. ನಾನು ವಿಜ್ಞಾನದಲ್ಲಿ ಹೊಸ ವಿಷಯಗಳ ಬಗೆಗಿನ ವ್ಯಾಖ್ಯಾನಗಳನ್ನು ಓದಲು ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾಗ ಅವರು ವಿಜ್ಞಾನ ದಿಂದ ವೈಜ್ಞಾನಿಕ ಕಾದಂಬರಿ ಗಳ ಓದಿಗೆ ಹೊರಳಿದ್ದರು.

ಅವರ ವಿಜ್ಞಾನ ಬರಹಗಳು ‘ಸುಧಾ’ ಹಾಗೂ ಮತ್ತಿತರ ಜನಪ್ರಿಯ ವಾರ ಮತ್ತು ಮಾಸ ಪತ್ರಿಕೆಗಳಲ್ಲಿ ಪ್ರಕಟ ವಾಗುವ ಮೂಲಕ ಕನ್ನಡದಲ್ಲಿ ಹೊಸ ಶೈಲಿಗೆ ನಾಂದಿ ಹಾಡಿದವು. ಜನಪ್ರಿಯ ಕಾದಂಬರಿಗಳ ಯುವ ಓದುಗರಾಗಿದ್ದ ನಮ್ಮನ್ನು ಇವರು ಅಸಿಮೋವ್‌ ಮತ್ತು ಆರ್ಥರ್‌ ಸಿ.ಕ್ಲಾರ್ಕ್‌ ಅವರ ಶ್ರೇಷ್ಠ ವೈಜ್ಞಾನಿಕ ಕಾದಂಬರಿ ಗಳನ್ನು ತಮ್ಮ ಸಂಗ್ರಹದಿಂದ ನೀಡಿ ಓದುವಂತೆ ಪ್ರೇರೇಪಿಸಿದ್ದರು.

ಹೊಸ ಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಅತ್ಯುತ್ತಮ ಬರಹಗಾರರಾಗಿ ಗುರುತಿಸಿಕೊಂಡಿದ್ದ ಇವರು, ಕನ್ನಡ ದಲ್ಲಿನ ವಿಜ್ಞಾನ ಬರಹಕ್ಕೆ ಆದ್ಯ ಪ್ರವರ್ತಕರಾದರು. ಅವರ ಬರಹಗಳು ಇಂಗ್ಲಿಷ್‌ಗೆ ಭಾಷಾಂತರಗೊಳ್ಳುವ ಮೂಲಕ ಅಂತರರಾಷ್ಟ್ರೀಯ ವೈಜ್ಞಾನಿಕ ಕಾದಂಬರಿ ಓದುಗರು ಇವರ ಸೃಜನಶೀಲತೆಯನ್ನು ಗುರುತಿಸುವಂತಾಗಬೇಕು.

ಸಾಹಿತಿ ರಾಜಶೇಖರ ಭೂಸನೂರಮಠ ನಿಧನ
ಧಾರವಾಡ:
ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿ ರುವ  ಸಂಶೋಧಕ ಪ್ರೊ.ರಾಜ ಶೇಖರ ಭೂಸನೂರಮಠ (77)

ಇಲ್ಲಿನ ಕಲಘಟಗಿ ರಸ್ತೆಯಲ್ಲಿರುವ ಗಿರಿನಗರದ ತಮ್ಮ ನಿವಾಸದಲ್ಲಿ ಶನಿವಾರ ರಾತ್ರಿ ತೀವ್ರ ಹೃದಯಾ ಘಾತದಿಂದ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಕರ್ನಾಟಕ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶು ಪಾಲರಾಗಿದ್ದ ಅವರು ಮೂಲತಃ ಗದಗ ಜಿಲ್ಲೆ ರೋಣ ತಾಲ್ಲೂಕಿನ ನಿಡಗುಂದಿಯವರು. ಅಂತ್ಯಕ್ರಿಯೆ ಸೋಮವಾರ ಸಂಜೆ 4.30ಕ್ಕೆ ಇಲ್ಲಿಯ ಹೊಸಯಲ್ಲಾಪುರದ ರುದ್ರಭೂಮಿ ಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT