ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ ಸಾಹಿತಿ ಪ್ಯಾಟ್ರಿಕ್‌ಗೆ ನೊಬೆಲ್

Last Updated 9 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸ್ಟಾಕ್‌ಹೋಂ, ಸ್ವೀಡನ್‌ (ಎಪಿ): ನಾಜಿ ಅತಿಕ್ರಮಣ ಮತ್ತು ಅದರಿಂದ ದೇಶದ ಮೇಲಾದ ಪರಿಣಾಮದ ಬಗ್ಗೆ ಜೀವನ­ವಿಡೀ ಅಧ್ಯಯನ ಮಾಡಿ ಪುಸ್ತಕಗಳನ್ನು ಬರೆದ ಫ್ರಾನ್‌್ಸನ ಲೇಖಕ ಪ್ಯಾಟ್ರಿಕ್ ಮೊಡಿಯಾನೊ ಅವರನ್ನು ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಾಜಿ ದಾಳಿಯಿಂದ ಮಾನವ ಕುಲದ ಮೇಲೆ ಆದ ಅತಿ ಕೆಟ್ಟ ­ಅನು­ಭವ­­ಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟ ಪ್ಯಾಟ್ರಿಕ್‌ ಅವರಿಗೆ ₨6.6 ಕೋಟಿ ($11 ಲಕ್ಷ ) ನಗದು ಬಹು­ಮಾನ ಸಿಗಲಿದೆ. 69 ವರ್ಷದ ಪ್ಯಾಟ್ರಿಕ್‌  ಅವರ  ಕಾದಂ­ಬರಿ ‘ಮಿಸ್ಸಿಂಗ್  ಪರ್ಸ­ನ್’ಗೆ 1978­­ರಲ್ಲಿ ಪ್ರತಿ­ಷ್ಠಿತ ‘ಪ್ರಿಸ್‌ ಗೊನ್ಕೋರ್ಟ್’ ಪ್ರಶಸ್ತಿ ಲಭಿಸಿತ್ತು. ಅವರ ಯುರೋಪಿಯನ್‌ ಸಾಹಿತ್ಯಕ್ಕೆ 2012ರಲ್ಲಿ ಆಸ್ಟ್ರೇಲಿಯಾ ದೇಶದ ಪ್ರಶಸ್ತಿ ಲಭಿಸಿದೆ.

ಪ್ಯಾಟ್ರಿಕ್‌ ಕೃತಿಗಳಲ್ಲಿ ಯಹೂ­­­ದಿ­­ತನ, ನಾಜಿಗಳ ಕ್ರೌರ್ಯ ಮತ್ತು ಅಸ್ಮಿತತೆ ಕಳೆದುಕೊಂಡು ಪರಿ­ತಪಿ­ಸುವ ವಿಚಾ­ರವೇ ಕಥಾ  ವಸ್ತು­­ಗಳು. ಅವರ 40ಕ್ಕೂ ಹೆಚ್ಚು ಕೃತಿ­ಗಳು ಪ್ರೆಂಚ್‌ ಭಾಷೆ­­ಯಲ್ಲಿ  ಪ್ರಕಟ­­­­ಗೊಂಡಿವೆ. ಅಲ್ಲದೆ, ಕೆಲವು ಪ್ರಮುಖ ಕೃತಿ­ಗಳು ಇಂಗ್ಲಿಷ್‌ಗೆ ಭಾಷಾಂತರ­ಗೊಂಡಿವೆ.

‘ಲಾ ಪ್ಲೇಸ್ ಡಿ ಎಲೈಟ್’, ‘ರಿಂಗ್ ಆಫ್ ರೋಡ್‌್ಸ’, ‘ಎ ವಿಲ್ಲಾ ಟ್ರಿಸ್ಟೆ’, ‘ಎ ಟ್ರೇಸ್‌ ಮಲೈಸ್‌’ ಮತ್ತು ‘ಹನಿ­ಮೂನ್‌’ ಅವರ ಪ್ರಮುಖ ಕೃತಿಗಳು. ಅವರು ಮಕ್ಕ­ಳಿಗಾಗಿ ಬರೆದ ಪುಸ್ತಕ 1974­­ರಲ್ಲಿ ‘ಲಾಕೊಂಬೆ, ಲೂಸಿ­ಯೆನ್’ ಹೆಸ­ರಿನ ಸಿನಿಮಾ ಆಯಿತು. ಪ್ಯಾಟ್ರಿಕ್‌ 1945ರಲ್ಲಿ ಎರಡನೇ ಮಹಾ ಯುದ್ಧ ಅಂತ್ಯಗೊಂಡ ಎರಡು ತಿಂಗಳ ನಂತರ ಪ್ಯಾರಿಸ್‌ನ ಉಪ­ನಗ­ರದಲ್ಲಿ ಜನಿಸಿದರು. ಅವರು ಬಹಳ ಅಪರೂಪಕ್ಕೆ ಸಂದರ್ಶನ ನೀಡುತ್ತಾರೆ. ಇಟಲಿ ಮೂಲದ ಯಹೂದಿ ಸಮು­ದಾಯಕ್ಕೆ ಸೇರಿದ ಪ್ಯಾಟ್ರಿಕ್‌ ತಂದೆ ಬೆಲ್ಜಿಯಂ ಮೂಲದ ನಟಿಯನ್ನು ಮದುವೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT