ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಕ್ಸ್‌ ತೆಗೆಸಿದ ಸಚಿವ ದಿನೇಶ್‌

Last Updated 8 ಅಕ್ಟೋಬರ್ 2015, 19:41 IST
ಅಕ್ಷರ ಗಾತ್ರ

ಬೆಂಗಳೂರು: ಜನ್ಮದಿನದ ಶುಭಾಶಯ ಕೋರಲು ಕಾರ್ಯಕರ್ತರು ಮನೆಯ ಸುತ್ತ ಹಾಕಿದ್ದ 200ಕ್ಕೂ ಅಧಿಕ ಫ್ಲೆಕ್ಸ್‌ಗಳನ್ನು ಸಚಿವ ದಿನೇಶ್‌ ಗುಂಡೂರಾವ್‌ ಅವರು ಸ್ವತಃ ನಿಂತು ತೆಗೆಸಿದರು.

ಸಂಜಯನಗರದ ಸಚಿವರ ಮನೆ ಸುತ್ತಮುತ್ತ ಗುರುವಾರ ಬೆಳಿಗ್ಗೆ ಫ್ಲೆಕ್ಸ್‌ಗಳೇ ರಾರಾಜಿಸುತ್ತಿದ್ದವು. ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಮ್ಮ ನಾಯಕನಿಗೆ ಶುಭಾಶಯ ಕೋರಲು ಈ ಫ್ಲೆಕ್ಸ್‌ಗಳನ್ನು ಹಾಕಿದ್ದರು.

ಮನೆಯ ಸುತ್ತಲಿನ ರಸ್ತೆಗಳಲ್ಲೂ ಫ್ಲೆಕ್ಸ್‌ಗಳೇ ತುಂಬಿರುವುದನ್ನು ಗಮನಿಸಿದ ದಿನೇಶ್‌ ಗುಂಡೂರಾವ್‌, ತಕ್ಷಣ ಅವುಗಳನ್ನೆಲ್ಲ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು. ತಮ್ಮ ನಾಯಕನ ಸೂಚನೆಯನ್ನು ಪಾಲಿಸಿದ ಕಾರ್ಯಕರ್ತರೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು.

ನಗರದ ಇತರ ಸಚಿವರು ಹಾಗೂ ಶಾಸಕರ ಜನ್ಮದಿನದ ಸಂದರ್ಭದಲ್ಲಿ ಫ್ಲೆಕ್ಸ್‌ಗಳ ಹಾವಳಿ ಹೆಚ್ಚುವುದು ನಗರದಲ್ಲಿ ಮಾಮೂಲಾಗಿತ್ತು. ಶಾಂತಿನಗರದ ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಬೆಂಬಲಿಗರು ಕ್ಷೇತ್ರದಾದ್ಯಂತ ನೂರಾರು ಫ್ಲೆಕ್ಸ್‌ ಹಾಕಿದ್ದರು. ಸಚಿವರಾದ ರಾಮಲಿಂಗಾ ರೆಡ್ಡಿ ಹಾಗೂ ಆರ್‌.ರೋಷನ್‌ ಬೇಗ್‌ ಅವರ ಅಭಿಮಾನಿಗಳೂ ಫ್ಲೆಕ್ಸ್‌ ಹಾಕುವ ಮೂಲಕವೇ ತಮ್ಮ ಅಭಿಮಾನ ತೋರಿಸಿದ್ದರು.

‘ಬೆಂಗಳೂರು ನಗರದ ಸೌಂದರ್ಯ ಕಾಪಾಡುವುದು ಎಲ್ಲರ ಹೊಣೆ. ಸಚಿವರ ನಡೆ ಇತರರಿಗೂ ಮಾದರಿಯಾಗಿದೆ. ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರು ಅನಧಿಕೃತವಾಗಿ ಫ್ಲೆಕ್ಸ್‌ ಹಾಕುವುದನ್ನು ನಿಲ್ಲಿಸಬೇಕು’ ಎಂದು ಬಿಬಿಎಂಪಿ ಆಯುಕ್ತ ಜಿ. ಕುಮಾರ್‌ ನಾಯಕ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT