ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆಹರಿದ ಸಿಇಟಿ ಬಿಕ್ಕಟ್ಟು

ಹಾಲಿ ಶುಲ್ಕ ಮುಂದುವರಿಸಲು ಖಾಸಗಿ ಕಾಲೇಜುಗಳ ಒಪ್ಪಿಗೆ
Last Updated 24 ಏಪ್ರಿಲ್ 2014, 20:33 IST
ಅಕ್ಷರ ಗಾತ್ರ

ಬೆಂಗಳೂರು:  ಹಾಲಿ ಇರುವ ಶುಲ್ಕ ಪದ್ಧತಿಯನ್ನೇ 2014–15ನೇ ಸಾಲಿಗೂ ಮುಂದು­ವರಿಸಲು ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಒಪ್ಪಿ­ಕೊಂಡಿವೆ. ಇದರಿಂದಾಗಿ ಎಂಜಿನಿಯ­ರಿಂಗ್‌ ಕೋರ್ಸ್‌ಗಳ ಶುಲ್ಕ ನಿಗದಿ ವಿವಾದ ಕೊನೆಗೂ ಸುಸೂತ್ರವಾಗಿ ಬಗೆಹರಿದಿದೆ.

ಗುರುವಾರ ನಡೆದ ಕರ್ನಾಟಕ ಅನುದಾನರಹಿತ ಖಾಸಗಿ ಕಾಲೇಜುಗಳ ಒಕ್ಕೂಟದ ಸರ್ವಸದಸ್ಯರ ಸಭೆಯಲ್ಲಿ ಈಗಿರುವ ಶುಲ್ಕವನ್ನೇ ಒಪ್ಪಿಕೊಳ್ಳಲು ನಿರ್ಧರಿಸಲಾಗಿದೆ.

ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಒಕ್ಕೂಟದ ನಡುವೆ 2–3 ದಿನಗಳಲ್ಲಿ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ.

ಶುಲ್ಕ ನಿಗದಿ ವಿವಾದ ಪ್ರಸ್ತುತ ಹೈಕೋರ್ಟ್‌ನಲ್ಲಿದ್ದು, ಈ ತಿಂಗಳ 30ರ ಒಳಗೆ ಸರ್ಕಾರ ತನ್ನ ನಿಲುವನ್ನು ತಿಳಿಸಬೇಕಾಗಿದೆ.

‘2006ರ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ ಜಾರಿಗೊಳಿಸುವುದಿಲ್ಲ. ಪರಸ್ಪರ ಮಾತುಕತೆ ಮೂಲಕವೇ ಸೀಟು ಹಂಚಿಕೆ, ಶುಲ್ಕ ನಿಗದಿ ಮಾಡಿಕೊಂಡಿದ್ದೇವೆ ಎಂಬ ವಿಷಯವನ್ನು ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಿದೆ’ ಎಂದು ಮೂಲಗಳು ತಿಳಿಸಿವೆ.

ಎಂಜಿನಿಯರಿಂಗ್‌ನಲ್ಲಿ ಕಳೆದ ವರ್ಷ ಸರ್ಕಾರ ಮತ್ತು ಕಾಮೆಡ್‌ – ಕೆ ನಡುವೆ ಕ್ರಮವಾಗಿ ಶೇ 45:55 ಅನುಪಾತದಲ್ಲಿ ಸೀಟು ಹಂಚಿಕೆಯಾಗಿತ್ತು. 2014–15ನೇ ಸಾಲಿನಲ್ಲೂ ಅದನ್ನೇ ಮುಂದುವರಿಸಲಾಗುತ್ತದೆ.

ಅದೇ ರೀತಿ ಎಂಜಿನಿಯರಿಂಗ್‌ನಲ್ಲಿ ಎರಡು ರೀತಿಯ ಶುಲ್ಕ ಇರುತ್ತದೆ.

ಕಾಲೇಜುಗಳು ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ವಿದ್ಯಾರ್ಥಿಗಳ ಹಿತಕ್ಕಾಗಿ ಒಪ್ಪಿದ್ದೇವೆ
ವಿದ್ಯಾರ್ಥಿಗಳು, ಪೋಷಕರ ಹಿತದೃಷ್ಟಿ­ಯಿಂದ ಹಾಲಿ ಶುಲ್ಕವನ್ನೇ ಈ ವರ್ಷಕ್ಕೆ ಮುಂದುವರಿಸಲು ಒಪ್ಪಿದ್ದೇವೆ. ಒಕ್ಕೂಟದ ಸದಸ್ಯ ಕಾಲೇಜುಗಳು ಇದಕ್ಕೆ ಸಮ್ಮತಿಸಿವೆ.
-ಎಂ.ಕೆ.ಪಾಂಡುರಂಗಶೆಟ್ಟಿ, ಕಾರ್ಯದರ್ಶಿ, ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT