ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ಸುಗಳು ಕಾಣೆಯಾಗಿವೆ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ ಲಗ್ಗೆರೆ ವಲಯದ ಚೌಡೇಶ್ವರಿ ನಗರಕ್ಕೆ ಮಾರ್ಕೆಟ್‌ನಿಂದ 267, ಮೆಜೆಸ್ಟಿಕ್‌ನಿಂದ 267ಎ, ಶಿವಾಜಿನಗರದಿಂದ 267ಬಿ ಬಸ್ಸುಗಳ ವ್ಯವಸ್ಥೆ ಇದೆ. ಆದರೆ ಕಳೆದ ಎರಡು ತಿಂಗಳಿನಿಂದ ಈ ಮೂರು ಮಾರ್ಗಗಳ ಬಸ್ಸುಗಳು ಚೌಡೇಶ್ವರಿನಗರ ಬಸ್ಸು ನಿಲ್ದಾಣಕ್ಕೆ ಬರುವುದನ್ನೇ ನಿಲ್ಲಿಸಿವೆ.

ಶಾಲಾ ಕಾಲೇಜುಗಳು ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳು ಪ್ರತಿದಿನವೂ ಮಳೆ, ಬಿಸಿಲು ಎನ್ನದೆ ತಮ್ಮ ಬೆನ್ನುಗಳ ಮೇಲೆ ಮಣಭಾರದ ಪುಸ್ತಕಗಳ ಬ್ಯಾಗುಗಳನ್ನು ಹೊತ್ತುಕೊಂಡು 2–3 ಕಿ.ಮೀ. ದೂರ ನಡೆದುಕೊಂಡು ಲಗ್ಗೆರೆ ನೂತನ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರದ ಕಡೆಗೆ ಹೋಗುವ ಬಸ್ಸುಗಳಲ್ಲಿ ಪ್ರಯಾಣ ಮಾಡಿ ಶಾಲಾ ಕಾಲೇಜುಗಳಿಗೆ ಹೋಗಿ ಬರಬೇಕಾಗಿದೆ. ಜೊತೆಗೆ ಗಾರ್ಮೆಂಟ್‌್ಸ ನೌಕರರು, ಹಿರಿಯ ನಾಗರಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ.

ಬಿಎಂಟಿಸಿಯವರು ನಾಗರಿಕ ಸೇವೆಯ ಹಿತದೃಷ್ಟಿಯಿಂದ ಮೇಲಿನ ಮೂರು ಮಾರ್ಗಗಳ ಬಸ್ಸು ಸಂಚಾರ ವ್ಯವಸ್ಥೆಯಲ್ಲಿ ಚೌಡೇಶ್ವರಿನಗರಕ್ಕೆ ಬಂದು ಹೋಗುವಂತೆ ಮಾರ್ಪಾಟು ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT