ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿರಂಗ ಚರ್ಚೆಗೆ ಆಹ್ವಾನ

Last Updated 26 ಮೇ 2016, 8:21 IST
ಅಕ್ಷರ ಗಾತ್ರ

ಹಾವೇರಿ: ‘ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕಳೆದ 36 ವರ್ಷಗಳಲ್ಲಿ ಶಿಕ್ಷಕರ ಯಾವುದೇ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಮಾಧ್ಯಮ, ಮನವಿ ಪತ್ರಗಳ ಮೂಲಕ ಹೇಳಿಕೆ ನೀಡಬಾರದು.

  ಡಾ. ಆರ್.ಎಂ. ಕುಬೇರಪ್ಪನವರು ಇದೇ 29 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಹುಕ್ಕೇರಿಮಠದ ಶಿವಬಸವ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆಯುವ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಂಡು ಸವಾಲು ಹಾಕಲಿ. ಹೊರಟ್ಟಿಯವರು ಸೂಕ್ತ ಪ್ರತ್ಯುತ್ತರ ನೀಡುತ್ತಾರೆ. ಕುಬೇರಪ್ಪ ಅವರು ತಮ್ಮ ಸಾಧನೆಗಳನ್ನು ಪ್ರಸ್ತುತ ಪಡಿಸಲಿ’ ಎಂದು ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘಟನೆಯ ಜಿಲ್ಲಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

‘ಹೊರಟ್ಟಿ 36 ವರ್ಷಗಳಲ್ಲಿ 36 ಸಮಸ್ಯೆಗಳನ್ನು ಹುಟ್ಟುಹಾಕಿದ್ದಾರೆ’ ಎಂದು ಹೇಳಿದ್ದ ಕುಬೇರಪ್ಪ ಈಚೆಗೆ, ‘ನಾನು ಕೇಳಿದ 10 ಪ್ರಶ್ನೆಗಳಿಗೆ ಏಕೆ ಉತ್ತರಿಸಿಲ್ಲ’ ಎಂದು ಹೇಳಿದ್ದಾರೆ. ಹಾಗಿದ್ದರೆ ಉಳಿದ 26 ಪ್ರಶ್ನೆಗಳು ಎಲ್ಲಿ ಹೋದವು’ ಎಂದು ಸಂಘಟನೆಯು ಪ್ರಶ್ನಿಸಿದೆ.

‘ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಶಿಕ್ಷಕರ ಸಂಘಟನೆ ಭಯೋತ್ಪಾದಕ ಸಂಘಟನೆಯಲ್ಲ.  ರಾಷ್ಟ್ರ ನಿರ್ಮಾಣ  ಮಾಡು ಶಿಕ್ಷಕರು ಕಟ್ಟಿದ ಸಂಘಟನೆ. ನಾವು ಗಲಾಟೆಗೆ ಅವಕಾಶ ನೀಡುವುದಿಲ್ಲ.  ಕುಬೇರಪ್ಪನವರಿಗೆ ಸೂಕ್ತ ಭದ್ರತೆ ಒದಗಿಸಲು ಪೊಲೀಸ್‌ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ. ಸಾಮರಸ್ಯಕರವಾಗಿ ಚರ್ಚೆ ನಡೆಸಿ ಅವರನ್ನು ಗೌರವಯುತವಾಗಿ ಕಳುಹಿಸಿಕೊಡುತ್ತೇವೆ. ಅವರು ಚರ್ಚೆಯಲ್ಲಿ ಪಾಲ್ಗೊಳ್ಳಲಿ.  ನಮ್ಮ ನಾಯಕರು ಹಾದಿ ಬೀದಿಯಲ್ಲಿ ಉತ್ತರ ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ಗೌರವಯುತ ವೇದಿಕೆ ಸಿದ್ಧಗೊಳಿಸಿದ್ದೇವೆ’ ಎಂದು ಸಂಘಟನೆಯ ಮುಖಂಡರಾದ ಬಿ.ಐ. ಲೆಕ್ಕಪ್ಪಳವರ, ಎಸ್‌.ವೈ. ಗುಬ್ಬಣ್ಣನವರ, ಎಚ್‌.ಪಿ. ಬಣಕಾರ, ಎಚ್‌.ಎಂ. ನಂದಿಹಳ್ಳಿ, ಎಂ.ಎನ್‌. ರಾಜು, ಎಸ್‌.ಎಲ್‌. ಕಾಡದೇವರಮಠ, ಶರಣಪ್ಪ ಇಟಗಿ, ಆರ್‌.ಎಚ್‌. ಬೆಟ್ಟಳ್ಳೇರ, ಡಿ.ಎಸ್‌. ಶಿರಿಗೌಡ್ರ, ಡಿ.ಪಿ. ಕರೂರ, ಕೆ.ಎಸ್‌. ಗಾಣಿಗೇರ, ಎನ್‌.ಪಿ. ಕಲ್ಲೇದೇವರ, ಬಿ.ವೈ. ಶೆಟ್ಟೆಪ್ಪನವರ, ವಿ.ಎಸ್‌. ಕಮ್ಮಾರ, ಎಸ್‌.ಡಿ. ದೇವಗಪ್ಪನವರ, ಐ.ಪಿ. ಕುಂಕೂರ, ಎಂ.ಎಸ್‌. ಕರ್ಜಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರೇಕೆರೂರ ವರದಿ
‘ನನಗೆ ಹೋರಾಟ ಹೊಸದೇನಲ್ಲ; ಸೋತಾಗಲೂ ಶಿಕ್ಷಕರ ಪರವಾಗಿ ಸತತವಾಗಿ ಹೋರಾಟ ಮಾಡುತ್ತ ಬಂದಿದ್ದೇನೆ’ ಎಂದು ಪಶ್ವಿಮ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ.ಆರ್.ಎಂ.ಕುಬೇರಪ್ಪ ಹೇಳಿದರು.

ತಾಲ್ಲೂಕಿನ ಮಾಸೂರು ಗ್ರಾಮದ ಬಿ.ಟಿ.ಪಾಟೀಲ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.
‘ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಈಗ ಬದಲಾವಣೆಯ ಕಾಲ. ಮತದಾರರ ಭಯಮುಕ್ತ ವಾತಾವರಣ ನಿರ್ಮಾಣ ಮಾಡುವ ಕಾಲ ಬಂದಿದೆ. 4,300 ಶಾಲೆ ಗಳಲ್ಲಿನ ಶಿಕ್ಷಕರನ್ನು ಭೇಟಿ ಮಾಡಿದ್ದೇನೆ. ಶಿಕ್ಷಕರೊಂದಿಗೆ ಸಮಸ್ಯೆಗಳ ಈಡೇರಿಕೆಗೆ ಕಳೆದ 38 ವರ್ಷಗಳಿಂದ ಪ್ರಾಮಾಣಿಕ ಹೋರಾಟದಲ್ಲಿ ತೊಡಗಿದ್ದು,ಶಿಕ್ಷಕರು ನನ್ನ ಮೇಲೆ ಒಲವು ತೋರಿದ್ದಾರೆ’ ಎಂದರು.

ಶಿವಕುಮಾರ ಡಮ್ಮಳ್ಳಿ, ಎಸ್.ಎಚ್. ಮುಲ್ಲಾ, ಕೆ.ಆರ್.ಕೊಣ್ತಿ, ಎಂ.ವಿ. ರೆಹಮಾನ್, ಎಸ್.ಎ.ಪೂರ್ಣಾ, ಕುಮಾರ ಗುಬ್ಬೇರ ಇತರರಿದ್ದರು.

ಅಕ್ಕಿಆಲೂರ ವರದಿ
ಸ್ಥಳೀಯ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶಿಕ್ಷಕರ ವಿಧಾನ ಪರಿಷತ್‌ ಚುನಾವಣೆಯ ಅಭ್ಯರ್ಥಿ ಬಸವರಾಜ್‌ ಹೊರಟ್ಟಿ ಪರ ಬೆಂಬಲಿಗರು ಮತಯಾಚಿಸಿದರು.
ಈ ವೇಳೆ ಮಾತನಾಡಿದ ಚುನಾವಣೆ ಪ್ರಚಾರ ಸಮಿತಿ ಗೌರವಾಧ್ಯಕ್ಷ ಕೆ.ಎಸ್.ಕುಂಬಾರ, ಬಸವರಾಜ್‌ ಹೊರಟ್ಟಿ ಕಳೆದ 4 ದಶಕಗಳಿಂದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಸಮಸ್ಯೆ, ಸಂಕಷ್ಟಗಳ ಬಗೆಗೆ ಸಂಪೂರ್ಣ ಅರಿವು, ಮಾಹಿತಿಯನ್ನು ಹೊರಟ್ಟಿ ಅವರು ಹೊಂದಿದ್ದಾರೆ ಎಂದರು.

  ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲ್ಲೂಕಾ ಘಟಕದ ಅಧ್ಯಕ್ಷ ಎನ್.ಪಿ.ಕಲ್ಲದೇವರ ಮಾತನಾಡಿ, ಕ್ಷೇತ್ರದಲ್ಲಿ ಬಸವರಾಜ್‌ ಹೊರಟ್ಟಿ ಅವರ ಬಗೆಗೆ ಉತ್ತಮ ಅಭಿಪ್ರಾಯವಿದೆ. ಈ ಬಾರಿಯೂ ಬಹುಮತಗಳ ಅಂತರದಿಂದ ಹೊರಟ್ಟಿ ಜಯಸಾಧಿಸಲಿದ್ದಾರೆ ಎಂದರು.

  ಎಸ್.ವಿ.ಬೂದಿಹಾಳ, ವೆಂಕಟೇಶ ಚಲವಾದಿ, ಎಚ್.ಎ.ಮುಗಳಿಕಟ್ಟಿ, ಗಣೇಶ, ಚಂದ್ರಶೇಖರ ವಿ, ಎಚ್.ಬಿ. ಉಮಾಪತಿ, ಎಂ.ಎಸ್.ಸೋಮಸಾಗರ, ಅಕ್ಕಮಹಾದೇವಿ, ಡಿ.ಎಚ್.ಆಲದಕಟ್ಟಿ, ಎಸ್.ಎಫ್.ಕೆಂಗಮ್ಮನವರ, ಎಸ್. ಎನ್.ಜೋಗಾರ, ವಿ.ಎಸ್.ಚಿಕ್ಕಣ್ಣನವರ, ಎನ್.ಎಚ್.ದಾಳೇರ ಮತ್ತಿತರರು ಈ ವೇಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT